ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಷನ್ SSF ಗೂನಡ್ಕ ಯುನಿಟ್ ಇದರ ಅಂಗವಾಗಿ ಧ್ವಜದಿನ ಹಾಗೂ ಧ್ವಜಾರೋಹಣ ಕಾರ್ಯಕ್ರಮ

0

 

 

ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಷನ್ SSF ಗೂನಡ್ಕ ಯುನಿಟ್ ಇದರ ವತಿಯಿಂದ SSF ಧ್ವಜದಿನದ ಅಂಗವಾಗಿ ದ್ವಜಾರೋಹಣ ಕಾರ್ಯಕ್ರಮ ಸುನ್ನೀ ಸೆಂಟರ್ ಗೂನಡ್ಕ ಇದರ ವಠಾರದಲ್ಲಿ SSF ಗೂನಡ್ಕ ಯುನಿಟ್ ಅಧ್ಯಕ್ಷರಾದ ಉನೈಸ್ ಪಿ. ಯು ರವರ ಅದ್ಯಕ್ಷತೆಯಲ್ಲಿ ನಡೆಯಿತು.

 

 

 

ಬದ್ರಿಯಾ ಜುಮಾ ಮಸೀದಿ ಗೂನಡ್ಕ ಇದರ ಖತೀಬರಾದ ಮಹಮ್ಮದಲಿ ಕಾಮಿಲ್ ಸಖಾಫಿ ಮಾದಾಪುರರವರು ಕಾರ್ಯಕ್ರಮಕ್ಕೆ ದುಆ ಮೂಲಕ ಚಾಲನೆ ನೀಡಿದರು..
SSF ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಕಾರ್ಯದರ್ಶಿ ಸಿದ್ದೀಕ್ ಗೂನಡ್ಕರವರು ಧ್ವಜಾರೋಹಣವನ್ನು ನೆರವೇರಿಸಿದರು..
SYS ನಾಯಕರಾದ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕರವರು, ಸಂಘಟನಾ ಉಗಮ,ಹಿನ್ನಲೆ ಮತ್ತು ಕಾರ್ಯವೈಖರಿಯ ಕುರಿತು ಸವಿಸ್ತಾರ ಮಾತುಗಳನ್ನಾಡಿದರು.
ಕಾರ್ಯಕ್ರಮದ ಅತಿಥಿಗಳಾಗಿ BJM ಗೂನಡ್ಕ ಅಧ್ಯಕ್ಷರಾದ ಅಬ್ದುಲ್ಲಾ ಹಾಜಿ ಕೊಪ್ಪತಕಜೆ, ಗ್ರಾಮ ಪಂಚಾಯತ್ ಸದಸ್ಯರಾದ ಅಬುಶಾಲಿ ಗೂನಡ್ಕ,ಅಲ್ ಅಮೀನ್ ವೆಲ್ಫೇರ್ ಅಸೋಸಿಯೇಷನ್ ಗೂನಡ್ಕ ಇದರ ಅಧ್ಯಕ್ಷರಾದ ಜಾಫರ್ ಸಾದಿಕ್ ಕುಂಭಕ್ಕೋಡ್, ಹಾಗೂ BJM ಗೂನಡ್ಕ ಇದರ ಮಾಜಿ ಅಧ್ಯಕ್ಷರಾದ ಪಿ ಎ ಉಮ್ಮರ್ ಹಾಜಿ ಗೂನಡ್ಕ,SSF ಸುಳ್ಯ ಸೆಕ್ಟರ್ ಅಧ್ಯಕ್ಷರಾದ ಜಾಬಿರ್ ಎಂ ಬಿ ಗೂನಡ್ಕ, ಹಾರಿಸ್ ಝಮ್ ಝಮ್,ಮುನೀರ್ ಗೂನಡ್ಕ, ರಹೀಮ್ ಕೊಪ್ಪತ ಕಜೆ,ಹಸೈನ್ ದೊಡ್ಡಡ್ಕ,ಡಿ. ಆರ್ ಖಾದರ್,ಡಿ. ಎಂ ಅಬ್ದುಲ್ಲಾ ಪೆಲ್ತಡ್ಕ, ಮಹಮ್ಮದ್ ಪೆಲ್ತಡ್ಕ,ಹಾಗೂ SYS SSF SBS ಇದರ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.

SSF ಗೂನಡ್ಕ ಯುನಿಟ್ ಮೀಡಿಯಾ ಕಾರ್ಯದರ್ಶಿಯಾದ ಇಜಾಸ್ ಗೂನಡ್ಕ ರವರು ನಿರೂಪಿಸಿ ಸ್ವಾಗತಿಸಿದರು.