ಬೆಳ್ಳಾರೆ ಜ್ಞಾನದೀಪದಲ್ಲಿ “ಮನೆಗೊಂದು ಗಿಡ ” ಪರಿಸರ ಜಾಗೃತಿ ಕಾರ್ಯಕ್ರಮ

0

 

ವಿದ್ಯಾರ್ಥಿಗಳಲ್ಲಿ ಪರಿಸರ ಪ್ರೀತಿ ಬೆಳೆಸುವ ನಿಟ್ಟಿನಲ್ಲಿ ಬೆಳ್ಳಾರೆ ಜ್ಞಾನದೀಪ ಇಂಟರ್ಯಾಕ್ಟ್ ಕ್ಲಬ್ ಆಶ್ರಯದಲ್ಲಿ “ವನಸಿರಿ ” ಪರಿಕಲ್ಪನೆಯಡಿಯಲ್ಲಿ “ಮನೆಗೊಂದು ಗಿಡ” ನೀಡುವ ಮೂಲಕ ಪರಿಸರ ಜಾಗೃತಿ ದೇವಿಹೈಟ್ಸ್ ನ ಅನುಗ್ರಹ ಸಭಾಭವನದಲ್ಲಿ ನಡೆಯಿತು.

ಜ್ಞಾನದೀಪ ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ
ಸಂಸ್ಥೆಯ ವಿದ್ಯಾರ್ಥಿಗಳ ಪೋಷಕರಿಗೆ ವಿವಿಧ ಹಣ್ಣಿನ ಗಿಡಗಳನ್ನು ನೀಡುವ ಮೂಲಕ ಪರಿಸರ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇಂಟರಾಕ್ಟ್ ಕ್ಲಬ್ ನ ಶಿಕ್ಷಕ ಸಂಯೋಜಕ ಗಣೇಶ್ ನಾಯಕ್ ಪರಿಸರ ಸಂರಕ್ಷಣೆಯ ಮಾಹಿತಿ ನೀಡಿದರು. ಜ್ಞಾನದೀಪ‌ ಇಂಟರ್ಯಾಕ್ಟ್ ಕ್ಲಬ್ ಅಧ್ಯಕ್ಷ ಚಂದನ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಅಖಿಲೇಶ್, ಉಪಾಧ್ಯಕ್ಷ ಶಿವರಾಮ ಕೇರ್ಪಳ ಉಪನ್ಯಾಸಕರುಗಳಾದ ಶರತ್ ಕಲ್ಲೋಣಿ,ಚಂದ್ರಶೇಖರ್ ಆಲೆಟ್ಟಿ,ಬೃಂದಾ,ಗೀತಾ ಬಾಲಚಂದ್ರ, ಶೋಭಾ ಶೆಟ್ಟಿ ಹಾಗು ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.