ಪಂಜ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ

0

 

ಪಂಜ ಉತ್ಪಾದಕರ ಸಹಕಾರ ಸಂಘದ 2021-22ನೇ ಸಾಲಿನ ಸರ್ವಸದಸ್ಯರ 36ನೇ ವಾರ್ಷಿಕ ಸಾಮಾನ್ಯ ಸಭೆ ಸೆ.20.ರಂದು ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಲ್ಲೇಗ ಪೂವಣಿ ಹೆಗ್ಡೆ ಸಭಾಭವನದಲ್ಲಿ ಜರಗಿತು.

 

ಸಂಘದ ಅಧ್ಯಕ್ಷ ಚನಿಯಪ್ಪ ಕುಳ್ಳಕೋಡಿ ಅಧ್ಯಕ್ಷತೆ ವಹಿಸಿ ಮಾತನಾಡಿ
“ಸಂಘವು 2021-22ಸಾಲಿನಲ್ಲಿ ಒಟ್ಟು ರೂ.4,67,52,930 ವ್ಯವಹಾರ ನಡೆಸಿ ರೂ.4,63,957.80ನಿವ್ವಳ ಲಾಭ ಗಳಿಸಿ ದಾಖಲೆಯಾಗಿದೆ.ಶೇ.25 ಷೇರು ಡಿವಿಡೆಂಡ್, ಪ್ರತೀ ಲೀಟರ್ ಗೆ 61 ಪೈಸೆ ಉತ್ಪಾದಕರ ಬೋನಸ್ ನೀಡಲಿದೆ ” ಎಂದು ಹೇಳಿದರು.

*ಚರ್ಮಗಂಟು ಗಂಭೀರ ರೋಗ*:
ಸದ್ಯಕ್ಕೆ ಜಾನುವಾರುಗಳ ಮಾರಾಟ ಖರೀದಿ ಮಾಡ ಬೇಡಿ.ಜಾನುವಾರುಗಳಿಗೆ ಚರ್ಮಗಂಟು ರೋಗದ ಅಲೆ ಇದೆ .ಈ ಭಾರಿ ಹಬ್ಬುತ್ತಿರುವ ಚರ್ಮಗಂಟು ರೋಗ ಬಹಳ ಗಂಭೀರವಾಗಿದ್ದು ಇದಕ್ಕೆ ಜಾಷದ ಇಲ್ಲ.ಇದು ಬಂದರೆ ಡೈರಿಯೇ ದಿವಾಳಿ ಆಗ ಬಹುದು.ರಾಜಸ್ಥಾನದಲ್ಲಿ ನಿತ್ಯ ಲಕ್ಷಾಂತರ ಜಾನುವಾರುಗಳು ಸಾಯುತ್ತಿವೆ.ಈ ಬಗ್ಗೆ ಹೈನುಗಾರರು ಬಹಳ ಜಾಗೃತರಾಗಿರ ಬೇಕು. ಎಲ್ಲಾ ಜಾನುವಾರುಗಳಿಗೆ ವಿಮೆ ಮಾಡಿಸಿ.ಸೆ.30 ಕೊನೆಯ ದಿನವಾಗಿದೆ.ಎಂದು ಪಶು ವೈದ್ಯಾಧಿಕಾರಿ ಡಾ.ಸಚಿನ್ ಕುಮಾರ್ ಮಾಹಿತಿ ನೀಡಿದರು.
“ಜಾನುವಾರುಗಳ ಸಾಕಾಣಿಕೆ ಮತ್ತು ಅವುಗಳಿಗೆ ನೀಡುತ್ತಿರುವ ಆಹಾರ ಪದ್ಧತಿಯಿಂದ ಗುಣಮಟ್ಟದ ಹಾಲು ಪಡೆಯ‌ ಬಹುದು, ಅವುಗಳ ಆರೋಗ್ಯಕರ ಬೆಳವಣಿಗೆಗೆ
ಸಾಧ್ಯ”: ಎಂದು ಅವರು ಸಮಗ್ರ ಹೈನುಗಾರಿಕೆ ಕುರಿತು ವಿವರಿಸಿದರು.
ವಿಸ್ತರಣಾಧಿಕಾರಿ ಹರೀಶ್ ಕುಮಾರ್ ರವರು
ಗುಣಮಟ್ಟದ ಹಾಲು ಸಂಘಕ್ಕೆ ನೀಡುವಂತೆ ಮತ್ತು ಒಕ್ಕೂಟದಿಂದ ಸಿಗುವ ಸೌಲಭ್ಯಗಳು ಕುರಿತು ಮಾಹಿತಿ ನೀಡಿದರು ಹಾಗೂ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದರು.
ನಿರ್ದೇಶಕರಾದ ಚಂದ್ರಶೇಖರ ಶಾಸ್ತ್ರಿ, ನವೀನ್ ಕೆಬ್ಲಾಡಿ ಸತೀಶ್ ಬಿ ಉದಯ ಬಿ ,ನಾರಾಯಣ ನಾಯ್ಕ, ಶ್ರೀಮತಿ ಸಾವಿತ್ರಿ, ಶ್ರೀಮತಿ ಯಶೋದಾ ಬಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಆದರ್ಶ ಸಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
*ಅತೀ ಹೆಚ್ಚು ಹಾಲು ಹಾಕಿದ ಸದಸ್ಯರು*:
:2021-22ನೇ ಸಾಲಿನಲ್ಲಿ ಅತೀ ಹೆಚ್ಚು ಹಾಲು ಹಾಕಿದ ಯಶೋಧ ಬಿಳಿಮಲೆ ಪ್ರಥಮ, ದೇವದಾಸ್ ರೈ ಕೆಬ್ಲಾಡಿ ದ್ವಿತೀಯ, ಕುಸುಮಾಧರ ಕೆ ತೃತೀಯ ಸ್ಥಾನ ಪಡೆದಿದ್ದು, ಉಪಸ್ಥಿತರಿದ್ದವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀಮತಿ ವನಿತಾ ಕರಿಮಜಲು ಪ್ರಾರ್ಥಿಸಿದರು. ಸಂಘದ ಅಧ್ಯಕ್ಷ ಚನಿಯಪ್ಪ ಕುಳ್ಳಕೋಡಿ ಸ್ವಾಗತಿಸಿದರು. ನಿರ್ದೇಶಕ ಚಂದ್ರಶೇಖರ ಶಾಸ್ತ್ರಿ ರವರು ಲೆಕ್ಕ ಪರಿಶೋಧನಾ ವರದಿ ವಾಚಿಸಿದರು.‌
ಮುಖ್ಯಕಾರ್ಯನಿರ್ವಹಣಾಧಿಕಾರಿ
ಆದರ್ಶ ಸಿ ವರದಿ ವಾಚಿಸಿದರು. ನಿರ್ದೇಶಕ ನವೀನ್ ಕೆಬ್ಲಾಡಿ ವಂದಿಸಿದರು.ಸಿಬ್ಬಂದಿಗಳಾದ ಮಧುಸೂಧನ, ಪದ್ಮನಾಭ ಕೆಮ್ಮೂರು, ಶ್ರೀಮತಿ ವನಿತಾ ಕರಿಮಜಲು ಸಹಕರಿಸಿದರು.