ಗುತ್ತಿಗಾರು:ರಬ್ಬರ್ ಬೆಳೆಗಾರರ ಸಂಘದ ಮಹಾಸಭೆ

0

 

 

ಪ್ರಸಕ್ತ ಸಾಲಿನಲ್ಲಿ 166,92,39,929 ವ್ಯವಹಾರ

ಗುತ್ತಿಗಾರು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘ ನಿ.ಗುತ್ತಿಗಾರು ಇದರ ವಾರ್ಷಿಕ ಮಹಾಸಭೆಯು ಇಂದು ಸಂಘದ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.


ಸಂಘವು ಮುಂದಿನ ದಿನಗಳಲ್ಲಿ ರಬ್ಬರ್ ಹಾಲು ಖರೀದಿಸಲಿದೆ, ಹಾಗೂ ಸಂಘವೇ ಸಣ್ಣ ರಬ್ಬರ್ ಕೈಗಾರಿಕೆ ಆರಂಭಿಸಿ ರಬ್ಬರ್ ಉತ್ಪನ್ನ ತಯಾರಿಸಲಿದ್ದು ಅದಕ್ಕಾಗಿ ಜಾಗ ಖರೀದಿಸಿರುವುದಾಗಿ ಅಧ್ಯಕ್ಷರು ತಿಳಿಸಿದರು.
ಪ್ರಸಕ್ತ ಸಾಲಿನಲ್ಲಿ ಸಂಘವು 166,92,39,929 ವ್ಯವಹಾರ ಮಾಡಿರುವುದಾಗಿ ಮಾಹಿತಿ ನೀಡಿದರು.

ಸಭಾ ವೇದಿಕೆಯಲ್ಲಿ ಉಪಾಧ್ಯಕ್ಷೆ ಸರೋಜಿನಿ . ಕೆ ನಿರ್ಧೆಶಕರುಗಳಾದ ನಾಗೇಶ್ ಪಾರಪ್ಪಾಡಿ, ದುರ್ಗಾದಾಸ್ ಎಂ, ಭರತ್ ಎನ್, ಲೋಕೇಶ್ವರ ಡಿ ಆರ್, ರಘುರಾಮ ಬಿ, ಹರೀಶ್ ಸಿ ಜೆ, ಹೊನ್ನಪ್ಪ ಗೌಡ ಎಚ್, ಕರುಣಾಕರ ಎಚ್, ಶಶಿಕಲಾ ಡಿ ಪಿ, ಮಹಾಲಿಂಗ ಬಿ ಉಪಸ್ಥಿತರಿದ್ದರು. ಸಂಘದ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀ ವರದಿ ವಾಚಿಸಿದರು.
ಭರತ್ ನೆಕ್ರಾಜೆ ಸ್ವಾಗತಿಸಿ ಲೋಕೇಶ್ವರ ಡಿ ಆರ್ ವಂದಿಸಿದರು. ಶಿವಪ್ರಸಾದ್ ಹಾಲೆಮಜಲು ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭ ನೂತನವಾಗಿ ಕೇಂದ್ರ ರಬ್ಬರ್ ಮಂಡಳಿಯ ಸದಸ್ಯರಾಗಿ ನೇಮಕಗೊಂಡ ಮುಳಿಯ ಕೇಶವ ಭಟ್ ಅವರನ್ನು ಗೌರವಿಸಲಾಯಿತು.