ಯೋಗಾಸನ ಸ್ಪರ್ಧೆಯಲ್ಲಿ ಹಾರ್ದಿಕ ಕೆ.ಕೆ. ಪ್ರಥಮ, ಅಂತರಾಷ್ಟ್ರೀಯ ಯೋಗ ಸ್ಪರ್ಧೆಗೆ ಆಯ್ಕೆ

0

 

ದಕ್ಷಿಣ ವಲಯ ರಾಷ್ಟ್ರ ಮಟ್ಟದ ಮುಕ್ತ ಯೋಗಾಸನ ಕ್ರೀಡಾ ಚಾಂಪಿಯನ್ ಶಿಪ್ 2022, ಎಸ್.ಜಿ.ಎಸ್ ಅಂತಾರಾಷ್ಟ್ರೀಯ ಯೋಗ ಪ್ರತಿಷ್ಠಾನ ಇದರ ಸಹಯೋಗದಲ್ಲಿ ಎನ್.ಎಂ.ಹೆಚ್ ಗ್ಲೋಬಲ್ ಸ್ಕೂಲ್ ವತಿಯಿಂದ ಬೆಂಗಳೂರಿನಲ್ಲಿ ನಡೆದ ಸಾಂಪ್ರದಾಯಿಕ ವಿಭಾಗದ ಯೋಗಾಸನ ಸ್ಪರ್ಧೆಯ 8 ರಿಂದ 10 ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಹಾರ್ದಿಕ ಕೆ.ಕೆ ಪ್ರಥಮ ಸ್ಥಾನ ಪಡೆದರು. ಯೋಗಾಸನಗಳ ಸ್ವಂತ ಆಯ್ಕೆ ಸುತ್ತಿನ ಸ್ಪರ್ದೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿಕೊಂಡಿರುತ್ತಾಳೆ.
ದುಬೈಯಲ್ಲಿ ನಡೆಯಲಿರುವ ಅಂತರ್ ರಾಷ್ಟ್ರೀಯ ಯೋಗ ಸ್ಪರ್ಧೆಗೆ ಆಯ್ಕೆಯಾಗಿರುತ್ತಾಳೆ. ಈಕೆ ಸುಳ್ಯದ ಕೆರೆಕ್ಕೋಡಿ ಕೃಷ್ಣಪ್ಪ ಮತ್ತು ಪುಷ್ಪಾವತಿ ದಂಪತಿಯ ಪುತ್ರಿ.
10 ರಿಂದ 12 ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಯಶಿಕಾ ಬಿ.ಜೆ 9 ನೇ ಸ್ಥಾನ ಪಡೆದಿರುತ್ತಾಳೆ. ಈಕೆ ಶಕುಂತಲಾಜಗದೀಶ್ ಇವರ ಪುತ್ರಿ.

 

ಇವರಿಬ್ಬರು ಯೋಗೇನ ಚಿತ್ತಸ್ಯ ತಂಡದ ಯೋಗ ಗುರು ಸಂತೋಷ್ ಮುಂಡಕಜೆ ಯವರ ಶಿಷ್ಯರಾಗಿರುತ್ತಾರೆ.