ಸುಬ್ರಹ್ಮಣ್ಯ:ಪೋಷಣ್ ಮಾಸಾಚರಣೆಯ ಪೌಷ್ಟಿಕ ಆಹಾರ ಸಪ್ತಾಹ

0

 

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆಸುಳ್ಯ, ಪ್ರಾಥಮಿಕ ಅರೋಗ್ಯ ಕೇಂದ್ರ ಸುಬ್ರಹ್ಮಣ್ಯ ಅಂಗನವಾಡಿ ಕೇಂದ್ರ ಸುಬ್ರಹ್ಮಣ್ಯ, ಅಂಬಿಕಾ ಗೊಂಚಲು ಸಮಿತಿ , ವಾಣಿ ವನಿತಾ ಸಮಾಜ,ಇವುಗಳ ಜಂಟಿ ಆಶ್ರಯದಲ್ಲಿ ಪೋಷಣ್ ಮಾಸಚರಣೆಯ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ ಸೆ.21 ರಂದು
ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಬಿಕಾ ಗೊಂಚಲು ನ ಜಯಂತಿ ವಹಿಸಿದ್ದರು. ಅರೋಗ್ಯ ಇಲಾಖೆಯ ಅಧಿಕಾರಿಗಳುಪೌಷ್ಟಿಕ ಆಹಾರ ದ ಬಗ್ಗೆ ಮಾಹಿತಿ ನೀಡಿದರು. ಸುಳ್ಯ ತಾಲೂಕು ಮಟ್ಟದ ಕ್ಷಯ ರೋಗ ಸೂಪರ್ ವೈಸರ್ ಲೋಕೇಶ್ ರವರು ಕ್ಷಯ ರೋಗದ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮ ದಲ್ಲಿ ಸುಬ್ರಹ್ಮಣ್ಯ ಅರೋಗ್ಯ ಕೇಂದ್ರದ PHCO ಹೇಮಲತಾ, ಕಾರ್ಯಕರ್ತ ಉಮರ್ ಖಾನ್, ಜಯಂತಿ ಭಟ್, ವಾಣಿ ವನಿತಾಸಮಾಜದ ಅಧ್ಯಕ್ಷೆ ಹೇಮಾವತಿ, ಪಂಚಾಯತ್ ಸದಸ್ಯರಾದ ವೆಂಕಟೇಶ್ , ಸುಜಾತ ಕಲ್ಲಾಜೆ, ಭಾರತಿದಿನೇಶ್, ಅಂಗನವಾಡಿ ಕಾರ್ಯಕರ್ತೆ ವಿಶಾಲಾಕ್ಷಿ, ಸಹಾಯಕಿ ಸುಶೀಲ, ಬಾಲವಿಕಾಸದ ಅಧ್ಯಕ್ಷೆ ದೀಪ, ಸ್ತ್ರೀಶಕ್ತಿ ಗುಂಪಿನ ಸದಸ್ಯರು, ವಾಣಿವನಿತಾ ಸಮಾಜದ ಸದಸ್ಯರು, ಪುಟಾಣಿ ಮಕ್ಕಳು, ಮಕ್ಕಳಪೋಷಕರು, ಉಪಸ್ಥಿತರಿದ್ದರು. ಅಂಗನವಾಡಿ ಮಕ್ಕಳಿಗೆ ಬೆಂಕಿ ರಹಿತ ಅಡುಗೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಭಾಗವಹಿಸಿದ ಎಲ್ಲಾ ಪುಟಾಣಿ ಮಕ್ಕಳಿಗೆ ವಾಣಿ ವನಿತಾ ಸಮಾಜದ ವತಿಯಿಂದ ಬಹುಮಾನ ವಿತರಣೆ ಮಾಡಲಾಯಿತು. ಕುಮಾರಿ ಹರ್ಷಿತ ಪ್ರಾರ್ಥನೆ ಮಾಡಿದರು. ವಿಶಾಲಾಕ್ಷಿ ಸ್ವಾಗತಿಸಿದರು. ಶೋಭಾ ನಲ್ಲೂರಾಯ ಧನ್ಯವಾದ ಸಮರ್ಪಣೆ ಮಾಡಿದರು.