ಸಂಪಾಜೆ : ನಾಯಿಗಳಿಗೆ ಹುಚ್ಚು ನಾಯಿ ರೋಗ ನಿರೋಧಕ ಲಸಿಕಾ ವಿತರಣೆ

0


ಸಂಪಾಜೆ ಗ್ರಾಮ ಪಂಚಾಯತ್ ಹಾಗೂ ಪಶು ಪಾಲನ ಮತ್ತು ಪಶು ವೈದಕೀಯ ಇಲಾಖೆ ಸುಳ್ಯ ಇದರ ನೇತೃತ್ವದಲ್ಲಿ ನಾಯಿಗಳಿಗೆ ಹುಚ್ಚು ನಾಯಿ ರೋಗ ನಿರೋಧಕ ಲಸಿಕಾ ಕಾರ್ಯಕ್ರಮ ಗ್ರಾಮ ಪಂಚಾಯತ್ ಕಚೇರಿ ಬಳಿ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಡಾ. ಬಿ. ಎ. ಪಾಲಾಕ್ಷ ಪಶು ಚಿಕಿತ್ಸೆ ಕೇಂದ್ರ ಆರಂತೋಡು ಲಸಿಕೆ ನೀಡುವ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಪಂಚಾಯತ್ ಸಿಬ್ಬಂದಿಗಳು ಊರವರು ಉಪಸ್ಥಿತರಿದ್ದರು.