ಅರಂಬೂರು ಕಟ್ರಚ್ಚೋಡಿ ವೆಂಕಟ್ರಮಣ ಭಟ್ ನಿಧನ

0

 

ಆಲೆಟ್ಟಿ ಗ್ರಾಮದ ಅರಂಬೂರು ಕಟ್ರಚ್ಚೋಡಿ ವೆಂಕಟ್ರಮಣ ಭಟ್ ರವರು ಅಲ್ಪ ಕಾಲದ ಅಸೌಖ್ಯದಿಂದ ತನ್ನ ಸ್ವಗೃಹದಲ್ಲಿ ಸೆ.27 ರಂದು ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಶ್ರೀಮತಿ ಪದ್ಮಾವತಿ ,ಓರ್ವ ಪುತ್ರ ಮಹೇಶ್ ಕುಮಾರ್ ಕೆ, ಮೂವರು ಪುತ್ರಿಯರಾದ ಶ್ರೀಮತಿ ವಿದ್ಯಾಲಕ್ಷ್ಮೀ ವಿ ಭಟ್, ಶ್ರೀಮತಿ ವೀಣಾ ಗಣೇಶ್ ,ಶ್ರೀಮತಿ ವಿಜಯ ಪ್ರಸಾದ್ ಮತ್ತು ಸೊಸೆ ಶ್ರೀಮತಿ ದೀಪಾ ಮತ್ತು ಅಳಿಯಂದಿರನ್ನು, ಮೊಮ್ಮಕ್ಕಳನ್ನು ಹಾಗೂ ಕುಟುಂಬಸ್ಥರನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರು ಹಲವಾರು ವರ್ಷಗಳಿಂದ ಅಡುಗೆ ತಯಾರಿಸುವಲ್ಲಿ ಪರಿಣಿತರಾಗಿದ್ದು ಉತ್ತಮ ಪಾಕತಜ್ಞರೆಂದೆನಿಸಿಕೊಂಡಿದ್ದರು.