ಸಹಕಾರ ಸಂಘಗಳ ಅಡಮಾನ ಸಾಲದ ದಾಖಲೆಗಳ ನೋಂದಾವಣೆ ಮೇಲಿನ ಶುಲ್ಕಗಳು ಕಡಿಮೆಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಸಹಕಾರ ಭಾರತಿ ವತಿಯಿಂದ ಮನವಿ

0

 

 

ಸಹಕಾರ ಸಂಘಗಳಿಂದ ಅಡಮಾನ/ವಸತಿ ಸಾಲ ಪಡೆಯಲು ಸಾಲಗಾರರ ದಾಖಲೆಗಳ ನೋಂದವಣಿ ಶುಲ್ಕಗಳು ನಮ್ಮ ಜಿಲ್ಲೆಯಲ್ಲಿ 1% ಆಗಿದ್ದು(ಸ್ಟಾoಪ್ ಡ್ಯೂಟಿ 0.5% ,ನೋಂದವಣಿ ಶುಲ್ಕ 0.5%)ಸದಸ್ಯ ಗ್ರಾಹಕರಿಗೆ ಈ ವ್ಯವಸ್ಥೆ ದುಬಾರಿಯಾಗಿದೆ,ಬ್ಯಾಂಕ್ ಗಳು ಮತ್ತು ಕೋ ಅಪರೇಟಿವ್ ಬ್ಯಾಂಕ್ ಗಳಲ್ಲಿ MODT ಶುಲ್ಕ ಕಡಿಮೆಯಿದೆ,ಕರ್ನಾಟಕದಲ್ಲಿ MODT ನೋಂದಣಿ ಶುಲ್ಕ ,ಸ್ಟ್ಯಾಂಪ್ ಡ್ಯೂಟಿ 0.2% ಸಾಲ ಮಂಜೂರಾತಿ ಮೊತ್ತ,ಸಾಲ ಮಂಜೂರಾತಿ ಮೊತ್ತದ ಮೇಲೆ ನೋಂದಣಿ ಶುಲ್ಕ 0.1% ಜೊತೆಗೆ ಸ್ಕಾನಿಂಗ್ ಶುಲ್ಕಗಳು ಈ ಮೊತ್ತವನ್ನು ನಿಗದಿಗೊಳಿಸುವಂತೆ ತಕ್ಷಣ ಸಂಬಂಧಪಟ್ಟ ಇಲಾಖೆಗೆ ನಿರ್ದೇಶನ ನೀಡಿ ಸಹಕಾರ ಕ್ಷೇತ್ರದ ಸಾಲಗಾರರಿಗೆ ಉಪಯೋಗವಾಗುವಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ರವರಿಗೆ ಸಹಕಾರ ಭಾರತಿಯಿಂದ ಮನವಿ ಸಲ್ಲಿಸಲಾಗಿದ್ದು,ಸಕಾರಾತ್ಮಕವಾಗಿ ಜಿಲ್ಲಾಧಿಕಾರಿಗಳು ಸ್ಪಂದಿಸಿದ್ದಾರೆ.

ಮನವಿ ಸಂದರ್ಭ ಸಹಕಾರ ಭಾರತಿ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಪರ್ಕ ಪ್ರಮುಖ್   ಯಸ್,ಆರ್ ಸತಿಶ್ಚoದ್ರ,ರಾಜ್ಯ ಸಹಕಾರ ಭಾರತಿ ಕಾರ್ಯದರ್ಶಿ ಕೃಷ್ಣಪ್ರಸಾದ್ ಮಡ್ತಿಲ,ಗಣೇಶ್ ಶೆಣೈ,ಭಾರತಿ ಭಟ್, ಜಿ.ಆರ್ ಪ್ರಸಾದ್, ಸೋಮಪ್ಪ ನಾಯ್ಕ ಮತ್ತಿತರರು ಮನವಿ ಸಂದರ್ಭ ಉಪಸ್ಥಿತರಿದ್ದರು.