ನಾಳೆ (ಸೆ.30) : ಅರಂತೋಡಿನಲ್ಲಿ ಮಹರ್ಷಿ ಮಡ್ ಬ್ಲಾಕ್ಸ್ ಇಂಡಸ್ಟ್ರೀಸ್ ಶುಭಾರಂಭ

0
376

 

 

ಅರಂತೋಡಿನ ಕುಲ್ಚಾರು ರಸ್ತೆ ಸಮೀಪ ಧನುಷ್ ಕಜೆಗದ್ದೆ ಮತ್ತು ವೈಭವ್ ಕಜೆಗದ್ದೆ ಅವರ ಮಾಲಕತ್ವದ ಮಹರ್ಷಿ ಮಡ್ ಬ್ಲಾಕ್ಸ್ ಇಂಡಸ್ಟ್ರೀಸ್ ಸೆ. 30 ರಂದು ಉದ್ಘಾಟನೆಗೊಳ್ಳಲಿದೆ.

ಪದ್ಮಶ್ರೀ ಪುರಸ್ಕೃತ ಡಾ। ಗಿರೀಶ್ ಭಾರದ್ವಾಜ್ ನೂತನ ಇಂಡಸ್ಟ್ರೀಸ್ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಉಪಾಧ್ಯಕ್ಷ ರವಿ ಪೂಜಾರಿ,ಚಿಕ್ಕಮಗಳೂರಿನ ಚಿರಾಗ್ ಇಂಡಸ್ಟ್ರೀಸ್ ಸಂಸ್ಥಾಪಕ ಲಕ್ಷ್ಮಿನಾರಾಯಣ ಕುತ್ತಮೊಟ್ಟೆ ಭಾಗವಹಿಸಲಿದ್ದಾರೆ.

ಕರ್ನಾಟಕ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿಯ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ, ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಸುಳ್ಯ ಇಂಜಿನಿಯರ್ ಎಸೋಸಿಯೇಶನ್ ಅಧ್ಯಕ್ಷ ಪ್ರಸಾದ್ ಎಂ.ಎಸ್, ಖಜಾಂಜಿ ಶಾಂಪ್ರಸಾದ್ ಅಡ್ಡಂತಡ್ಕ, ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಸುಧಾಕರ ರೈ, ಭಗವತಿ ಹಾರ್ಡ್ ವೇರ್ ಮತ್ತು ಇಂಡಸ್ಟ್ರೀಸ್ ಮಾಲಕ ರಮೇಶ್ ಶೆಟ್ಟಿ, ಸ್ವಸ್ತಿಕ್ ವೈನ್ಸ್ ನ ಲೋಕೇಶ್ ಪೂಜಾರಿ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here