ಹರಿಹರ ಪಲ್ಲತಡ್ಕ: ಮದ್ಯ ಮುಕ್ತ ಗ್ರಾಮ ಹೋರಾಟ ಸಮಿತಿ ಪ್ರತಿಭಟನೆ

0

 

ಜನರ ಸ್ವಾಸ್ಥ್ಯ ಕೆಡಿಸುವ ಮದ್ದಂಗಡಿ ನಮ್ಮಲ್ಲಿ ಬೇಡವೇ ಬೇಡ

ವಿಶೇಷ ಗ್ರಾಮ ಸಭೆ ಕರೆಯಲು ಗ್ರಾಮಸ್ಥರ ಆಗ್ರಹ

ಹರಿಹರದಲ್ಲಿ ಮದ್ಯದ ಅಂಗಡಿ ಬೇಡವೇ ಬೇಡ, ಇಲ್ಲಿನ ಸ್ವಾಸ್ಥ್ಯ ಕೆಡಿಸಲು ನಾವುಗಳು ಬಿಡುವುದಿಲ್ಲ, ತಕ್ಷಣ ವಿಶೇಷ ಗ್ರಾಮ ಸಭೆ ಕರೆದು ಈ ಬಗ್ಗೆ ನಿರ್ಣಯ ಕೈಗೊಳ್ಳಬೇಕೆಂದು ಪಂಚಾಯತ್ ಆಡಳಿತವನ್ನು ಆಗ್ರಹಿಸಿದ ಘಟನೆ ಇಂದು ಹರಿಹರ ಪಲ್ಲತಡ್ಕದಲ್ಲಿ ನಡೆದಿದೆ.

 

ಹರಿಹರ ಪೇಟೆಯಲ್ಲಿ ಮದ್ಯದಂಗಡಿ ತೆರಯುವ ಬಗ್ಗೆ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಮದ್ಯ ಮುಕ್ತ ಹೋರಾಟ ಸಮಿತಿ ವತಿಯಿಂದ ಹರಿಹರದ ಮುಖ್ಯ ಪೇಟೆಯಲ್ಲಿ ಪ್ರತಿಭಟನೆ ನಡೆಯಿತು. ಈ ಸಭೆಯಲ್ಲಿ ವಿವಿಧ ಮುಖಂಡರು ಮಾತನಾಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಟ್ರಸ್ಟ್ ಸುಳ್ಯ ತಾಲೂಕು, ಶೌರ್ಯ ವಿಪತ್ತು ನಿರ್ವಹಣಾ ಘಟಕ ಸುಬ್ರಹ್ಮಣ್ಯ ವಲಯ ಹಾಗೂ ಮದ್ಯ ಮುಕ್ತ ಹೋರಾಟ ಸಮಿತಿ ಹರಿಹರ ಪಲ್ಲತಡ್ಕ ಜಂಟಿ ಆಶ್ರಯದಲ್ಲಿ ಪ್ರತಿಭಟನಾ ಸಭೆ ನಡೆಯಿತು.

 

ಸಭೆಯಲ್ಲಿ ಮದ್ಯ ಮುಕ್ತ ಹೋರಾಟ ಸಮಿತಿಯ ಅಧ್ಯಕ್ಷ ಹಿಮ್ಮತ್ ಕೆ ಸಿ, ಸಮಿತಿಯ ಸದಸ್ಯರುಗಳಾದ ಪ್ರದೀಪ್ ಕುಮಾರ್, ಸತೀಶ್ ಟಿ ಎನ್, ಚಂದ್ರಹಾಸ ಶಿವಾಲ, ಮಾಧವ ಚಾಂತಾಳ, ಡಾ। ಚಂದ್ರಶೇಖರ್ ಕಿರಿಬಾಗ, ಪತ್ರಕರ್ತ ಬಾಲಕೃಷ್ಣ ಭೀಮಗುಳಿ ಮಾತನಾಡಿದರು ನಿತ್ಯಾನಂದ ಭೀಮಗುಳಿ ಕಾರ್ಯಕ್ರಮ ನಿರೂಪಿಸಿದರು. ಸಭೆಯ ಬಳಿಕ ಹರಿಹರ ಪೇಟೆಯಿಂದ ಪ್ರತಿಭಟನಾ ನಿರತರು ಮದ್ಯ ವಿರೊಧಿ ಫಲಕ ಹಿಡಿದುಕೊಂಡು ಘೋಷಣೆ ಕೂಗುತ್ತಾ ಗ್ರಾಮ ಪಂಚಾಯತ್ ಗೆ ತೆರಳಿ ಗ್ರಾ.ಪಂ ಅಧ್ಯಕ್ಷ ಜಯಂತ ಬಾಳುಗೋಡು, ಉಪಾಧ್ಯಕ್ಷ ವಿಜಯ ಅಂಙಣ, ಪಿಡಿಒ ಪುರುಷೋತ್ತಮ ಮಣಿಯಾನ ಅರಿಗೆ ಮನವಿ ಸಲ್ಲಿಸಿದರು. ಪ್ರತಿಭಟನಾ
ಮೆರವಣಿಗೆಯಲ್ಲಿ ನೂರಾರು ಮಂದಿ ಭಾಗವಹಿಸಿದ್ದು ಪುರುಷರು, ಮಹಿಳೆಯರು, ಮಕ್ಕಳು ಭಾಗವಹಿಸಿದ್ದು ಮದ್ಯ ವಿರೋಧಿಸುವ ನಾಮ ಫಲಕ ಹಿಡಿದುಕೊಂಡು ಘೋಷಣೆ ಕೂಗಿದರು.