ಶಿಸ್ತು ನಿರಂತರ ಕಲಿಕೆ, ವ್ಯಕ್ತಿತ್ವ ವಿಕಾಸನದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ : ಕುಸುಮಾಧರ

0

 

 

ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ಎನ್.ಎಸ್.ಎಸ್ ಘಟಕದ ವಾರ್ಷಿಕ ಶಿಬಿರ

ಶಿಸ್ತು ನಿರಂತರ ಕಲಿಕೆ, ವ್ಯಕ್ತಿತ್ವ ವಿಕಾಸನದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಶಿಬಿರಾರ್ಥಿಗಳು ಎನ್ ಎಸ್ ಎಸ್ ಶಿಬಿರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು ಗೋಣಿಕೊಪ್ಪಲು ಕಾವೇರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಕುಸುಮಾಧರ ಕೆ.ವಿ ಹೇಳಿದರು.

ಅವರು ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್ ಘಟದ ವಾರ್ಷಿಕ ಶಿಬಿರವನ್ನು ಅರಂತೋಡು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ಸಂಚಾಲಕ ಕೆ.ಆರ್ ಗಂಗಾಧರ
ಪುಷ್ಪಾಧರ ಕೊಡಿಂಗೇರಿ ಸದಸ್ಯರು ಗ್ರಾಮ ಪಂಚಾಯತ್ ಅರಂತೋಡು
ಸುರೇಶ್ ಯು ಕೆ SDMC ಅಧ್ಯಕ್ಷರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಅರಂತೋಡು,
ಮೋಹನ್ ಚಂದ್ರ
ನಿಕಟ ಪೂರ್ವ ಕಾರ್ಯಕ್ರಮ ಅಧಿಕಾರಿ ಎನ್.ಎಸ್.ಎಸ್
ಗೋಪಾಲಕೃಷ್ಣ ಬನ
ಮುಖ್ಯೋಪಾಧ್ಯಾಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು
ಕಾಲೇಜ್ ಪ್ರಾಂಶುಪಾಲರಾದ ರಮೇಶ್ ಎಸ್ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಕಾರ್ಯಕ್ರಮ ಅಧಿಕಾರಿ ಗೌರಿಶಂಕರ ವಂದಿಸಿದರು. ಅಶ್ವಿನಿ ಮತ್ತು ಪದ್ಮ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಕಾರ್ಯಕ್ರಮ ಅಧಿಕಾರಿ ಲಿಂಗಪ್ಪ, ಸುರೇಶ್ ವಾಗ್ಲೆ, ಶಾಂತಿ, ವಿದ್ಯಾ ಶಾಲಿನಿ, ಭಾಗ್ಯಶ್ರೀ , ಚಿದಾನಂದ ಸಹಕರಿಸಿದರು.