ಮೇನಾಲ ಅಂಬೇಡ್ಕರ್ ಭವನದಲ್ಲಿ ಹಾಕಲಾಗಿದ್ದ ಅಂಬೇಡ್ಕರ್ ಭಾವ ಚಿತ್ರದ ಧ್ವಜ ತೆರವು : ಮರು ಅಳವಡಿಕೆಗೆ ಗ್ರಾ.ಪಂ. ಗೆ ಮನವಿ

0

 

 

ಅಜ್ಜಾವರ ಗ್ರಾಮದ ಮೇನಾಲ ಡಾ. ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿದ್ದ ಇತ್ತೀಚೆಗೆ ಅಳವಡಿಸಲಾಗಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಭಾವುಟವನ್ನು ಅಜ್ಜಾವರ ಪಂಚಾಯತ್ ತೆರವುಗೊಳಿಸಿದ್ದು, ಅದನ್ನು‌ ಮರು ಅಳವಡಿಸುವಂತೆ ಅಂಬೇಡ್ಕರ್ ಆದರ್ಶ ಸೇವ ಸಮಿತಿಯ ಜಿಲ್ಲಾ ಮತ್ತು ಸುಳ್ಯ ತಾಲೂಕು,ಅಜ್ಜಾವರ ಘಟಕ ಸಮಿತಿಯ ಪದಾಧಿಕಾರಿಗಳು ಪಂಚಾಯತ್ ಗೆ‌ ಮನವಿ ಮಾಡಿದ್ದಾರೆ. ಅಳವಡಿಸದಿದ್ದರೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿರುವುದಾಗಿ ತಿಳಿದುಬಂದಿದೆ.

 

ಸಂಘಟನೆಯ ತಾಲೂಕು ಅಧ್ಯಕ್ಷರಾದ ಸತೀಶ್ ಬೂಡುಮಕ್ಕಿ ಮತ್ತಿತರರು ಗ್ರಾ.ಪಂ. ಗೆ ಭೇಟಿ ನೀಡಿ ಮನವಿ ಮಾಡಿಕೊಂಡರು. ಈ ವೇಳೆ ಮಾತನಾಡಿದ ಸತೀಶ್ ಬೂಡುಮಕ್ಕಿ ಮೇನಾಲದ ಅಂಬೇಡ್ಕರ್ ಸಮುದಾಯ ಭವನದಲ್ಲಿದ್ದ ಅಂಬೇಡ್ಕರ್ ಅವರ ಭಾವ ಚಿತ್ರ ಯಾರಿಗೂ ತೊಂದರೆ ಉಂಟುಮಾಡುವ ಜಾಗದಲ್ಲಿ ಇರಲಿಲ್ಲ.ಗ್ರಾಮಸ್ಥರ ಮೆಚ್ಚುಗೆಯನ್ನು ಪಡೆದಿತ್ತು.ಆ ಭಾವುಟವನ್ನು ಏಕಾಏಕಿಯಾಗಿ ಪಂಚಾಯತ್ ಅಧಿಕಾರಿಯವರು ತೆರವುಗೊಳಿಸಿದ್ದು ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನವಾಗಿದೆ. ಈ ಘಟನೆಯು ನಮ್ಮೆಲ್ಲರಿಗೂ ನೋವುಂಟು ಮಾಡಿದ್ದು ಭಾವುಟವನ್ನು ಕೂಡಲೇ ಹಾಕಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆಯನ್ನು ಪಂಚಾಯತ್ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಐವರ್ನಾಡು ಮಾತನಾಡಿದರು. ಈ ವೇಳೆ ಅಹವಾಲು ಆಲಿಸಿದ ಗ್ರಾ.ಪಂ. ಅಧ್ಯಕ್ಷೆ ಅಧ್ಯಕ್ಷರಾದ ಸತ್ಯವತಿಯವರು ಈ ಕುರಿತು ಮುಂದಿನ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರೆನ್ನಲಾಗಿದೆ.

ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಸಂಘಟನೆಯ ಕಾರ್ಯದರ್ಶಿಗಳಾದ ಸುನೀಲ್ ಗಂಧದಗುಡ್ಡೆ,ಸಂಘಟನಾ ಕಾರ್ಯದರ್ಶಿ- ಅಜ್ಜಾವರ ಪಂಚಾಯತ್ ಸದಸ್ಯರಾದ ರಾಘವ ಮುಳ್ಯಕಜೆ, ಸಂಘಟನೆಯ ಅಜ್ಜಾವರ ಘಟಕ ಅಧ್ಯಕ್ಷರಾದ ಹರೀಶ್ ಮೇನಾಲರವರು,ಉಪಾಧ್ಯಕ್ಷರಾದ ಚಿದಾನಂದ ಗಂಧದಗುಡ್ಡೆ, ಅಜ್ಜಾವರ ಪಂಚಾಯತ್ ಮಾಜಿ ಸದಸ್ಯರಾದ ಗಣೇಶ್ ಮಾವಿನಪಳ್ಳ ಹಾಗೂ ಸಂಘಟನೆ ಪದಾಧಿಕಾರಿಗಳಾದ ದಯಾನಂದ ಗಂಧದಗುಡ್ಡೆ,ಶಶಿಧರ ಗಂಧದಗುಡ್ಡೆ, ಕಿರಣ್ ಅಡೂರು,ಮದುಸೂದನ ಕಾಟಿಪಳ್ಳ, ನಾಗರಾಜ ಕಾಂತಮಂಗಲ,ನಾಗೇಶ್ ಕಾಂತಮಂಗಲ, ದೀಕ್ಷಿತ್ ಗಂಧದಗುಡ್ಡೆ,ದಿವಾಕರ ಹನಿಯಡ್ಕರವರು ಹಾಜರಿದ್ದರು.