ಸುಳ್ಯ ವರ್ತಕರ ಸಂಘದ ಮಹಾಸಭೆ – 21 ನಿರ್ದೇಶಕರ ಆಯ್ಕೆ

0

 

 

ಸ್ವಚ್ಛ ಸುಳ್ಯ ಅಭಿಯಾನಕ್ಕೆ ನಗರ ಪಂಚಾಯತ್ ಜತೆ ವರ್ತಕರು ಕೈ ಜೋಡಿಸೋಣ : ಸುಧಾಕರ ರೈ ಪಿ.ಬಿ

ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘ ಇದರ ವಾರ್ಷಿಕ ಮಹಾಸಭೆಯು ಸೆ.೨೮ ರಂದು ಸಂಘದ ಕಟ್ಟಡದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಅಧ್ಯಕ್ಷತೆ ವಹಿಸಿದ್ದರು. ಸಂಘದ ಉಪಾಧ್ಯಕ್ಷರುಗಳಾದ ಪ್ರಭಾಕರ ನಾಯರ್, ಆದಂ ಹಾಜಿ ಕಮ್ಮಾಡಿ, ರಾಮಚಂದ್ರ ಪಿ, ಸಿ.ಎ. ಗಣೇಶ್ ಭಟ್ ವೇದಿಕೆಯಲ್ಲಿದ್ದರು.


ಪ್ರಧಾನ ಕಾರ್ಯದರ್ಶಿ ಡಿ.ಎಸ್. ಗಿರೀಶ್ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಸುರೇಶ್ಚಂದ್ರ ಕಮಿಲ ಲೆಕ್ಕಪತ್ರ ಮಂಡಿಸಿದರು. ಶ್ರೀಮತಿ ಮಧು ಮುರುಳ್ಯ ಪ್ರಾರ್ಥಿಸಿದರು. ಪ್ರಭಾಕರ ನಾಯರ್ ವಂದಿಸಿದರು.
ಸಂಘದ ನೂತನ ಸದಸ್ಯತ್ವ ಪಡೆದ ಸದಸ್ಯರಿಗೆ ಸರ್ಟಿಫಿಕೇಟ್ ವಿತರಿಸಲಾಯಿತು.
ಶ್ರದ್ಧಾಂಜಲಿ : ವರದಿ ಸಾಲಿನಲ್ಲಿ ನಿಧನರಾದ ಜ್ಯೋತಿ ಇಂಡಸ್ಟ್ರೀಸ್ ಮಾಲಕ ಜಗನ್ನಾಥ ರೈ, ರಾಘವೇಂದ್ರ ಜ್ಯುವೆಲ್ಲರ್ ಮಾಲಕ ನಾಗರಾಜ ಶೇಟ್ ರಿಗೆ ಸಭೆಯಲ್ಲಿ ಶ್ರದ್ದಾಂಜಲಿ ಸಲ್ಲಿಸಲಾಯಿತು.
೨೧ ನಿದೇಶಕರುಗಳ ಆಯ್ಕೆ : ವರ್ತಕರ ಸಂಘಕ್ಕೆ ೨೧ ನಿರ್ದೇಶಕರನ್ನು ಸಭೆಯಲ್ಲಿ ಆಯ್ಕೆ ಮಾಡಲಾಗಿದ್ದು ಅದರಂತೆ ಸುಧಾಕರ ರೈ ಪಿ.ಬಿ., ಡಿ.ಎಸ್. ಗಿರೀಶ್, ಪ್ರಭಾಕರ್ ನಾಯರ್, ಆದಂ ಹಾಜಿ ಕಮ್ಮಾಡಿ, ರಾಮಚಂದ್ರ ಆಗ್ರೋ, ಸಿ.ಎ. ಗಣೇಶ್ ಭಟ್, ಟಿ.ಎಂ. ಖಾಲಿದ್, ಜಗನ್ನಾಥ ರೈ ಪಿ, ಅಬ್ದುಲ್ ಹಮೀದ್ ಕೆ.ಎಂ., ಎಸ್. ಅಬ್ದುಲ್ ಕಟ್ಟೆಕ್ಕಾರ್, ಸುಂದರ ರಾವ್ ರೂಪಾ, ಧರ್ಮಪಾಲ ಕುರುಂಜಿ, ಶ್ಯಾಮ್ ಪ್ರಸಾದ್ ಅಡ್ಡಂತಡ್ಕ, ಹೇಮಂತ್ ಕಾಮತ್, ಶ್ರೀಮತಿ ಲತಾ ಕುದ್ಪಾಜೆ, ಅನೂಪ್ ಕೆ.ಜೆ., ಆದಿತ್ಯ ಹಿಮಗಿರಿ, ಯು.ಪಿ. ಬಶೀರ್, ರಮೇಶ್ ಶೆಟ್ಟಿ, ಸ್ಯಾನ್ ಸಿಂಗ್, ಅಬ್ದುಲ್ ರಹಿಮಾನ್ ಆಯ್ಕೆಯಾದರು. ಒಂದು ವಾರದೊಳಗೆ ನಿರ್ದೇಶಕರ ಸಭೆ ಕರೆದು ಅಲ್ಲಿ ಪದಾಧಿಕಾರಿಗಳ ಆಯ್ಕೆ ಮಾಡಲು ಸಭೆ ನಿರ್ಧರಿಸಿತು.
ಸ್ವಚ್ಛ ಸುಳ್ಯ ಅಭಿಯಾನಕ್ಕೆ ಜೋಡಿಸೋಣ : ಸಭೆಯ ಅಧ್ಯಕ್ಷತೆ ವಹಿಸಿದ್ದ ಸುಧಾಕರ ರೈಯವರು ಸಂಘದ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದವರನ್ನು ನೆನಪಿಸಿಕೊಂಡರಲ್ಲದೆ, ಸುಳ್ಯ ನಗರ ಪಂಚಾಯತ್ ಪ್ರತೀ ಗುರುವಾರ ಸ್ವಚ್ಛ ಸುಳ್ಯ ಕಲ್ಪನೆಯಲ್ಲಿ ನಗರ ಸ್ವಚ್ಛತಾ ಅಭಿಯಾನ ಕೈಗೊಂಡಿದೆ. ಈ ಅಭಿಯಾನಕ್ಕೆ ಪ್ರತಿಯೊಬ್ಬ ವರ್ತಕರು ಕೂಡಾ ಕೈ ಜೋಡಿಸೋಣ. ನಮ್ಮ ಅಂಗಡಿ ಮುಂಗಟ್ಟುಗಳನ್ನು ನಾವು ಸ್ವಚ್ಛವಾಗಿಡೋಣ. ಯಾರಾದರೂ ನಮ್ಮ ಅಂಗಡಿಯ ಎದುರಿನ ರಸ್ತೆಯಲ್ಲಿ ಗುಟ್ಕಾ ಪ್ಯಾಕೇಟ್ ಇನ್ನಿತರ ಕಸ ಎಸೆದರೆ ಕಸ ಹಾಕದಂತೆ ತಕ್ಷಣ ಆತನಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡೋಣ ಎಂದು ಅವರು ವಿನಂತಿಸಿ ಮಾಡಿಕೊಂಡರು.