ಮುರೂರಿನಲ್ಲಿ ಇನೋವಾ ಕಾರು – ಬೈಕ್ ಅಪಘಾತ

0

 

 

ದೇಲಂಪಾಡಿಯ ವ್ಯಕ್ತಿ ಮೃತ್ಯು

 

ಮಂಡೆಕೋಲು ಸಮೀಪದ ಮುರೂರು ಸಮೀಪ ಇನೋವಾ ಕಾರು ಹಾಗೂ ಬೈಕ್ ಅಪಘಾತ ಗೊಂಡು ಬೈಕ್ ಹಿಂಬದಿ ಸವಾರ ಮೃತಪಟ್ಟ ಘಟನೆ ವರದಿಯಾಗಿದೆ.

ದೇಲಂಪಾಡಿ ಮೈಯಾಳ ನಿವಾಸಿ ಕೃಷ್ಣೋಜಿ (75) ಮೃತಪಟ್ಟವರು.

ಕೃಷ್ಣೋಜಿಯವರು ಹಾಗೂ ಅವರ ಪುತ್ರ ಪದ್ಮನಾಭರು ಬೈಕ್ ನಲ್ಲಿ ಇಂದು ಬೆಳಗ್ಗೆ ಸುಳ್ಯ ಹಳೆಗೇಟಿನಲ್ಲಿರುವ ಕೃಷ್ಣೋಜಿಯವರ ಸಹೋದರಿಯ ಮನೆಗೆ ಬಂದಿದ್ದರು.
ಮಧ್ಯಾಹ್ನ ಸುಳ್ಯದಿಂದ ದೇಲಂಪಾಡಿಯ ಮನೆಗೆ ಹೋಗುತ್ತಿದ್ದ ವೇಳೆ ಮುರೂರು ಸಮೀಪ ಕಾಸರಗೋಡು ಕಡೆಯಿಂದ ಬರುತ್ತಿದ್ದ ಇನೋವಾ ಕಾರು ಹಾಗೂ ಬೈಕ್ ಢಿಕ್ಕಿ ಹೊಡೆಯಿತು. ಪರಿಣಾಮ ಬೈಕ್ ಚಲಾಯಿಸುತ್ತಿದ್ದ ಪದ್ಮನಭ ಹಾಗೂ ಹಿಂಬದಿ ಕುಳಿತಿದ್ದ ಕೃಷ್ಣೋಜಿಯವರು ರಸ್ತೆಗೆ ಬಿದ್ದರು. ಇನೋವಾ ಕಾರಿನವರು ಹಾಗೂ ಸ್ಥಳೀಯರು ಗಾಯಾಳುಗಳನ್ನು ಸುಳ್ಯ ಇನೋವಾ ಕಾರಿನಲ್ಲಿ ಹಾಕಿ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದರು. ವೈದ್ಯರು ಪರೀಕ್ಷೆ ನಡೆಸಿದಾಗ ಕೃಷ್ಣೋಜಿಯವರು ಮೃತಪಟ್ಟಿದ್ದರೆಂದು ತಿಳಿದು ಬಂದಿದೆ. ಪದ್ಮನಾಭರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಕೃಷ್ಣೋಜಿಯವರು ಸುಳ್ಯದ ಉದ್ಯಮಿಗಳಾಗಿರುವ ಸುಂದರ ರಾವ್ ರೂಪಾ ಹಾಗೂ ಭಾಸ್ಕರ್ ರಾವ್ ರವರ ಸಹೋದರ.
ಮೃತರು ಪತ್ನಿ ಹಾಗೂ ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here