ಸರಕಾರಿ ಆಸ್ಪತ್ರೆಗೆ ಹೋಗುವ ರಸ್ತೆ ಪ್ಯಾಚ್ ವರ್ಕಾದರೂ‌ ಮಾಡಿ : ನ.ಪಂ.‌ ಸದಸ್ಯರ ಮನವಿ

0

 

 

ಸುಳ್ಯ ಸರಕಾರಿ ಆಸ್ಪತ್ರೆಯ ಅವ್ಯವಸ್ಥೆಯಿಂದಾಗಿ ಆಸ್ಪತ್ರೆಗೆ ಚಿಕಿತ್ಸೆ ಗೆಂದು ಬರುವ ರೋಗಿಗಳು ತೊಂದರೆ ಅನುಭವಿಸುವಂತಾಗಿದೆ ಆದ್ದರಿಂದ ಆಸ್ಪತ್ರೆಯ ಎದುರಿನ ರಸ್ತೆಯನ್ನು ಪ್ಯಾಚ್ ವರ್ಕಾದರೂ‌ ಮಾಡಿ ಕೊಡಬೇಕೆಂದು ನ.ಪಂ.‌ಸದಸ್ಯ ರಿಯಾಜ್ ಕಟ್ಟೆಕ್ಕಾರ್ ವಿನಂತಿಸಿಕೊಂಡಿದ್ದಾರೆ.

ಈ ಕುರಿತು ಸುದ್ದಿಗೆ ಲಿಖಿತ ಹೇಳಿಕೆ ನೀಡಿರುವ ರಿಯಾಜ್ ರವರು ಸರಕಾರಿ ಆಸ್ಪತ್ರೆಯ ರಸ್ತೆ ತೀರಾ ಹದಗೆಟ್ಟಿದೆ. ಆಸ್ಪತ್ರೆಗೆ ಬರುವ ಸಾರ್ವಜನಿಕರು, ರೋಗಿಗಳು ತೀರಾ ತೊಂದರೆ ಪಡುವಂತಾಗಿದೆ. ಕೆಲ ತಿಂಗಳ ಹಿಂದೆ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರರ ಉಪಸ್ಥಿತಿಯಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ನಾನು ಮನವಿ ಮಾಡಿಕೊಂಡಾಗ 2 ತಿಂಗಳಲ್ಲಿ ಸರಿ ಪಡಿಸುವ ಭರವೆ ನೀಡಿದ್ದರು. ಆದರೆ ಇದೀಗ ಮೂರು ತಿಂಗಳಾದರೂ ರಸ್ತೆ ಸರಿಯಾಗಿಲ್ಲ. ಆದ್ದರಿಂದ ಶಾಸಕರು, ಆಸ್ಪತ್ರೆಯ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಇತ್ತ ಗಮನ ಹರಿಸಿ ಆರೋಗ್ಯಕರ ರಸ್ತೆ ನಿರ್ಮಿಸಬೇಕೆಂದು ಅವರು ವಿನಂತಿಸಿಕೊಂಡಿದ್ದಾರೆ

LEAVE A REPLY

Please enter your comment!
Please enter your name here