ಗುತ್ತಿಗಾರಿನ ಮುತ್ಲಾಜೆ – ಚಣಿಲದಲ್ಲಿ ದುರ್ಗಾ ಪೂಜೆ, ಹಗ್ಗಜಗ್ಗಾಟ

0

 

ಪುರುಷ ವಿಭಾಗ  :ಶಾಸ್ತಾಕೃಪಾ ವೀರಾಂಜನೇಯ ಕಡಂಬಾರು ಪ್ರಥಮ, ಶ್ರೀದುರ್ಗಾ ಗ್ರೂಪ್ ಬಳ್ಕಾಡಿ ದ್ವಿತೀಯ

ಮಹಿಳೆಯರ ವಿಭಾಗ :ಜೈ ಶ್ರೀರಾಮ್ ತಂಡ ಕೊಕ್ಕಡ ಪ್ರಥಮ, ನಾಗಶ್ರೀ ಫ್ರೆಂಡ್ಸ್ ಸುಳ್ಯ ದ್ವಿತೀಯ

 

ಗುತ್ತಿಗಾರಿನ ಶ್ರೀ ಶೂಲಿನಿ ದುರ್ಗಾದೇವಿ ಮತ್ತು ಶಾಸ್ತಾವು ಕ್ಷೇತ್ರ ಮುತ್ಲಾಜೆ – ಚಣಿಲ ಇಲ್ಲಿ ಕ್ಷೇತ್ರದ ಅಭಿವೃದ್ಧಿ ಸಮಿತಿ ವತಿಯಿಂದ ದುರ್ಗಾಪೂಜೆ ನಡೆದಿದ್ದು ಆ ಪ್ರಯುಕ್ತ ಸಾರ್ವಜನಿಕರ ಹಗ್ಗಜಗ್ಗಾಟ ಸ್ಪರ್ಧೆಯು ವ್ಯವಸ್ಥಿತವಾಗಿ ಸೆ.30 ರಂದು ನಡೆಯಿತು.
ಪುರುಷರು ಶಾಸ್ತಾಕೃಪಾ ವೀರಾಂಜನೇಯ ಕಡಂಬಾರು ಎ ಪ್ರಥಮ ಸ್ಥಾನ ಪಡೆಯಿತು. ಶ್ರೀದುರ್ಗಾ ಗ್ರೂಪ್ ಬಳ್ಕಾಡಿ ದ್ವಿತೀಯ ಪಡೆಯಿತು. ಹಿಂದೂ ಜಾಗರಣ ವೇದಿಕೆ ಶಿವಾಜಿನಗರ ತೃತೀಯ ಹಾಗೂ ವೀರಾಂಜನೇಯ ಕಡಂಬಾರು ಬಿ ತಂಡ ಚತುರ್ಥ ಸ್ಥಾನ ಪಡೆಯಿತು.

ಮಹಿಳೆಯರ ವಿಭಾಗದಲ್ಲಿ ಜೈ ಶ್ರೀರಾಮ್ ತಂಡ ಕೊಕ್ಕಡ ಎ ಪ್ರಥಮ, ನಾಗಶ್ರೀ ಫ್ರೆಂಡ್ಸ್ ಸುಳ್ಯ ದ್ವಿತೀಯ ಸ್ಥಾನ ಪಡೆಯಿತು, ರಾಷ್ಟ್ರ ಸೇವಿಕಾ ತಂಡ ಹಾಲೆಮಜಲು ತೃತೀಯ ಹಾಗೂ ಜೈ ಶ್ರೀರಾಮ್ ತಂಡ ಕೊಕ್ಕಡ ಬಿ ತಂಡ ಚತುರ್ಥ ಸ್ಥಾನ ಪಡೆಯಿತು. ಬಹುಮಾನ ವಿತರಣೆಯನ್ನು ಶ್ರೀ ಶೂಲಿನಿ ದೇವಿ ಮತ್ತು ಶಾಸ್ತಾವು ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ದಯಾನಂದ ಮುತ್ಲಾಜೆ, ಗೌರವಾಧ್ಯಕ್ಷ ತಿರುಮಲೇಶ್ವರ ಭಟ್ ಚಣಿಲ, ಕಾರ್ಯದರ್ಶಿ ಜಯರಾಮ ವಳಲಂಬೆ ಸ್ಥಳೀಯರಾದ ವೆಂಕಟ್ ದಂಬೆಕೋಡಿ, ಜಯಪ್ರಕಾಶ್ ಮೊಗ್ರ, ಶ್ರೇಯಸ್ ಮುತ್ಲಾಜೆ, ಭರತ್ ಹುಲಿಕೆರೆ, ಗಿರೀಶ್ ಮುತ್ಲಾಜೆ, ಕಿಶೋರ್ ಕುಮಾರ್ ಅಂಬೆಕಲ್ಲು, ದಿನಕರ ದೇರಪಜ್ಜನ ಮನೆ, ನವೀನ್ ಬಾಳುಗೋಡು, ರವಿಪ್ರಕಾಶ್ ಬಳ್ಳಡ್ಕ ಲೋಕೇಶ್ ಎಣ್ಣೆಮಜಲು, ಶ್ರೀಮತಿ ಮಂಜುಳಾ ಮುತ್ಲಾಜೆ ಮತ್ತಿತರರು ಮಾಡಿದರು. ಎಲ್ಲಾ ಕಾರ್ಯಕ್ರಮಗಳ ನಿರೂಪಣೆಯನ್ನು ಶಶಿಧರ ಮಾವಿನಕಟ್ಟೆ ನಿರ್ವಹಿಸಿದರು. ವೀರ ಮಾರುತಿ ಸ್ಫೋರ್ಟ್ ಕ್ಲಬ್ ಗುತ್ತಿಗಾರು ಹಗ್ಗಜಗ್ಗಾಟದ ವ್ಯವಸ್ಥೆಯಲ್ಲಿ ಪೂರ್ಣ ನೀಡಿ ಸಹಕರಿಸಿತು.

ಧಾರ್ಮಿಕ ಕಾರ್ಯಕ್ರಮ:ಕ್ಷೇತ್ರದಲ್ಲಿ ಬೆಳಗ್ಗೆ ಗಣಪತಿ ಹೋಮ, ಸಂಜೆ ದುರ್ಗಾ ಪೂಜೆ, ಶ್ರೀ ಕೃಷ್ಣ ಭಜನಾ ಮಂಡಳಿ ಗುತ್ತಿಗಾರು ಮತ್ತು ಶ್ರೀ ಶಂಖಪಾಲ ಸುಬ್ರಹ್ಮಣ್ಯ ಭಜನಾ ಸೇವಾ ಸವಿತಿ ವಳಲಂಬೆ ವತಿಯಿಂದ ಭಜನಾ ಕಾರ್ಯಕ್ರಮ ಜರಗಿತು. ಹಾಲೆಮಜಲು ಮತ್ತು ಮೆಟ್ಟಿನಡ್ಕದ ಭಜನಾ ತಂಡಗಳು ಅಲ್ಲಿಂದ ಕುಣಿತ ಭಜನೆಯೊಂದಿಗೆ ಟ್ಯಾಬ್ಲೆೋ ಗಳಿದ್ದು ಮೆರವಣಿಗೆಯಲ್ಲಿ ಮುತ್ಲಾಜೆ ಗೆ ಬಂದು ದುರ್ಗಾ ಪೂಜೆಯಲ್ಲಿ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಮಧ್ಯಾಹ್ನ ಮತ್ತು ರಾತ್ರಿ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.