ಕೆವಿಜಿ ಐಪಿಎಸ್ ನಲ್ಲಿ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನಾಚರಣೆ

0

 

ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಮತ್ತು ಕೆವಿಜಿ ಅಮರ ಜ್ಯೋತಿ ಪಿಯು ಕಾಲೇಜಿನವರು ಜಂಟಿಯಾಗಿ ಕೆವಿಜಿ ಐಪಿಎಸ್ ನ ಸಭಾಂಗಣದಲ್ಲಿ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನಾಚರಣೆಯನ್ನು ಆಚರಿಸಿದರು. ಈ ಕಾರ್ಯಕ್ರಮಕ್ಕೆ ಶಾಲಾ ಸಂಚಾಲಕ ಡಾ. ರೇಣುಕಾಪ್ರಸಾದ್ ಕೆ. ವಿ, ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು. ಜೆ ಶುಭ ಹಾರೈಸಿದರು.
ಆರಂಭದಲ್ಲಿ ಯುಕೆಜಿಯ ಪುಟಾಣಿಗಳು ಬಲಗೈಯಲ್ಲಿ ಗೀತೆ ಎಡಗೈಯಲ್ಲಿ ರಾಟೆ ಎನ್ನುವ ಹಾಡನ್ನು ಹಾಡುವುದರ ಮೂಲಕ ಕಾರ್ಯಕ್ರಮವನ್ನು ಆರಂಭಿಸಿದರು. ಈ ಜನ್ಮದಿನಾಚರಣೆಯ ಮಹತ್ವವನ್ನು ಆರನೇ ತರಗತಿಯ ಅನಿಂದ್ಯ ಶ್ಯಾಮ್ ಸಾತ್ವಿಕ್ ಮತ್ತು ಎರಡನೇ ತರಗತಿಯ ಅಮೇಯ ಭಾರದ್ವಾಜ್ ತಿಳಿಸಿದರು. ಯುಕೆ ಜಿಯ ಹವಿಶ್ ಟಿ.ವಿ ಗಾಂಧಿ ಚರಕವನ್ನು ಹಿಡಿದು ಗಾಂಧಿಯ ಪಾತ್ರವನ್ನು ಮಾಡಿ ಎಲ್ಲರನ್ನೂ ಮನರಂಜಿಸಿದರು. ಬಳಿಕ ಶಿಕ್ಷಕಿಯರೆಲ್ಲರು ಸೇರಿ ಭಜನಾ ಕಾರ್ಯಕ್ರಮವನ್ನು ಆರಂಭಿಸಿದರು. ಈ ಕಾರ್ಯಕ್ರಮವನ್ನು ಹತ್ತನೇ ತರಗತಿಯ ಪ್ರತಿಜ್ಞಾ ಮತ್ತು ಯಶಸ್ ಡಿ. ಪಿ ನಿರೂಪಿಸಿದರು.

LEAVE A REPLY

Please enter your comment!
Please enter your name here