ಮಂಡೆಕೋಲಿನಲ್ಲಿ ಅಶಕ್ತರಿಗೆ ವಿಕ್ರಂ ಫೌಂಡೇಷನ್ – ಹಿಂ.ಜಾ. ವೇ. ನೇತೃತ್ವದಲ್ಲಿ ನಿರ್ಮಿಸಲಾದ ಮನೆಗಳ ಹಸ್ತಾಂತರ ಸೇವೆಯಲ್ಲಿ ರಾಜಕೀಯ ಬರಬಾರದು : ಮಹೇಶ್ ವಿಕ್ರಂ ಹೆಗ್ಡೆ ಕಳಕಳಿ

0

 

ಬೆಂಗಳೂರಿನ ವಿಕ್ರಂ ಫೌಂಡೇಶನ್ ನೇತೃತ್ವದಲ್ಲಿ, ಮಂಡೆಕೋಲಿನ ಹಿಂದೂ ಜಾಗರಣಾ ವೇದಿಕೆಯ ಆಶ್ರಯದಲ್ಲಿ ಮೂರು ಅಶಕ್ತ ಕುಟುಂಬಗಳಿಗೆ ನಿರ್ಮಿಸಲಾಗಿರುವ ಮನೆಗಳ ಹಸ್ತಾಂತರ ಕಾರ್ಯಕ್ರಮ ಅ.೨ ಗಾಂಧಿ ಜಯಂತಿಯಂದು ನಡೆಯಿತು.


ಮಂಡೆಕೋಲು ಗ್ರಾಮದ ಪೇರಾಲು ಸುಂದರಿ, ಕನ್ಯಾನದ ಸತ್ಯವತಿ ಕೃಷ್ಣಪ್ಪ ಹಾಗೂ ಮೈಲೆಟ್ಟಿಪಾರೆಯ ಚಲ್ಲಿಯವರಿಗೆ ತಲಾ ೬ ಲಕ್ಷ ರೂ ವೆಚ್ಚದಲ್ಲಿ ಸುಂದರವಾದ ತಾರಸಿ ಮನೆ ನಿರ್ಮಿಸಿಕೊಡಲಾಗಿದ್ದು, ಬೆಳಗ್ಗೆ ಮೂರು ಮನೆಯಲ್ಲಿಯೂ ಗಣಹೋಮ ನಡೆಯಿತು. ಹಾಗೂ ಮೂರು ಮನೆಗಳಿಗೆ ಕೇಶವ, ಮಾಧವ ಹಾಗೂ ಮಧುಕರ ಎಂದು ನಾಮಕರಣ ಮಾಡಲಾಗಿದೆ.
ಸಭಾ ಕಾರ್ಯಕ್ರಮ : ಮಂಡೆಕೋಲು ಸಹಕಾರಿ ಸಭಾಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮೂರು ಮನೆಯವರಿಗೂ ಆರ್‌ಎಸ್‌ಎಸ್ ಕ್ಷೇತ್ರಿಯ ಕಾರ್ಯಕಾರಿಣಿ ಸದಸ್ಯ ಡಾ| ಪ್ರಭಾಕರ ಭಟ್ ಕಲ್ಲಡ್ಕ ಕೀ ಹಸ್ತಾಂತರ ಮಾಡಿದರು.
ಹಿರಿಯರಾದ ಚಂದಪ್ಪ ಗೌಡ ಪಾತಿಕಲ್ಲುರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿಂದೂ ಜಾಗರಣ ವೇದಿಕೆ ಪ್ರಾಂತ ಸಂಯೋಜಕ ದೋ ಕೇಶವ ಮೂರ್ತಿ, ವಿಕ್ರಂ ಫೌಂಡೇಷನ್ ಸ್ಥಾಪಕರಾದ ಮಹೇಶ್ ವಿಕ್ರಂ ಹೆಗ್ಡೆ, ಅಡ್ಪಂಗಾಯ ಶ್ರೀ ಅಯ್ಯಪ್ಪ ಮಂದಿದರ ಶಿವಪ್ರಕಾಶ್ ಅಡ್ಪಂಗಾಯ ವೇದಿಕೆಯಲ್ಲಿದ್ದರು.
ಸನ್ಮಾನ : ಮನೆ ನಿರ್ಮಾಣಕ್ಕೆ ಪ್ರಮುಖ ಕಾರಣಕರ್ತರಾದ ಮಹೇಶ್ ವಿಕ್ರಂ ಹೆಗ್ಡೆ ಹಾಗೂ ಸಹಕಾರ ನೀಡಿದ ಸುಭಾಶ್ ಮಾಡ, ಗುತ್ತಿಗೆದಾರ ಕುಶಾಲಪ್ಪರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಹಿಂದೂ ಜಾಗರಣ ವೇದಿಕೆ ಸಂಚಾಲಕ ಮಹೇಶ್ ಉಗ್ರಾಣಿಮನೆ, ಲಕ್ಷ್ಮಣ ಉಗ್ರಾಣಿಮನೆ ಮೊದಲಾದವರು ಸಹಕಾರ ನೀಡಿದರು.
ಕು.ಕ್ಷಮಾ ಭಟ್ ಆಶಯ ಗೀತೆ ಹಾಡಿದರು. ಮಂಡೆಕೋಲು ಗ್ರಾಮ ಪಂಚಾಯತ್ ಸದಸ್ಯ ಬಾಲಚಂದ್ರ ದೇವರಗುಂಡ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ವಿಖ್ಯಾತ್ ಬಾರ್ಪಣೆ ಕಾರ್ಯಕ್ರಮ ನಿರೂಪಿಸಿದರು.