ಎನ್.ಎಸ್.ಎಸ್ ಸೇವಾ ಸಂಗಮ ಟ್ರಸ್ಟ್ ನಿಂದ ಗಾಂಧಿ ಮತ್ತು ಶಾಸ್ತ್ರಿ ಜಯಂತಿ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು

0

ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ ನ ರಾಷ್ಟ್ರೀಯ ಸೇವಾ ಯೋಜನೆಯ ಹಿರಿಯ ಸ್ವಯಂ ಸೇವಕರ ಸಂಘ ಎನ್.ಎಸ್.ಎಸ್ ಸೇವಾ ಸಂಗಮ ಟ್ರಸ್ಟ್, ಕೆ,ವಿ.ಜಿ ಪಾಲಿಟೆಕ್ನಿಕ್ ಹಾಗೂ ಕೆ.ವಿಜಿ. ಇಂಜಿನಿಯರಿಂಗ್ ಕಾಲೇಜುಗಳ ಎನ್.ಎಸ್.ಎಸ್. ಹಾಗೂ ಯುವ ರೆಡ್ ಕ್ರಾಸ್ ಘಟಕಗಳ ಸಹಯೋಗದೊಂದಿಗೆ ಮಡಿಕೇರಿ ತಾಲೂಕಿನ ಹಳೆ ಚೆಂಬು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.

ಕಾಲೇಜಿನ ಪ್ರಾಂಶುಪಾಲ ಜಯಪ್ರಕಾಶ್ ಕೆ ಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರುಗಳಾದ ಗಣೇಶ್ ಎನ್.ಆರ್, ಬಾಲಕೃಷ್ಣ ಗೌಡ ಬೊಳ್ಳೂರು, ನಿವೃತ್ತ ಕಛೇರಿ ಅಧೀಕ್ಷಕ ರಾಮಚಂದ್ರ ಗೌಡ ಪಲ್ಲತಡ್ಕ, ವ್ಯಕ್ತಿತ್ವ ವಿಕಸನ ತರಬೇತುದಾರೆ ಡಾ. ಅನುರಾಧಾ ಕುರುಂಜಿ, ಸ್ತ್ರೀ ತಜ್ಞೆ ಡಾ. ವೀಣಾ ಫಾಲಚಂದ್ರ, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸೆಲೆಸ್ಟಿನ್ ಲೋಬೊ, ಹಳೆ ಚೆಂಬು ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಚಿದಾನಂದ, ಉಪಸ್ಥಿತರಿದ್ದು ಶುಭ ಹಾರೈಸಿದರು. ಸಮಾರಂಭದ ವೇದಿಕೆಯಲ್ಲಿ ಕೆ.ವಿ.ಜಿ ಡೆಂಟಲ್ ಕಾಲೇಜಿನ ಪ್ರಾಧ್ಯಾಪಕಿ ಡಾ ಜೆಸಿಲ್ಲಾ, ಕೆ.ವಿ.ಜಿ. ಕಾಲೇಜ್ ಆಫ್ ಇಂಜಿನಿಯರಿಂಗ್ ನ ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಡಾ. ಪ್ರಜ್ಞಾ ಎಂ.ಆರ್. ಸೇವಾ ಸಂಗಮದ ಅಧ್ಯಕ್ಷ ರಕ್ಷಿತ್ ಬೊಳ್ಳೂರು, sಸಂಘಟನಾ ಕಾರ್ಯದರ್ಶಿ ಸುಜಿತ್ ಎಂ.ಎಸ್ ಉಪಸ್ಥಿತರಿದ್ದರು. ಕೆ.ವಿ.ಜಿ. ಪಾಲಿಟೆಕ್ನಿಕ್‌ನ ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಚಂದ್ರಶೇಖರ ಬಿಳಿನಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಪಾಜೆ ಕ್ಲಸ್ಟರ್ ನ ಸಂಪನ್ಮೂಲ ವ್ಯಕ್ತಿ ಶ್ರೀಮತಿ ರೇಖಾ ಯು.ಎಸ್ ಸ್ವಾಗತಿಸಿ ಸೇವಾ ಸಂಗಮದ ಪ್ರಧಾನ ಕಾರ್ಯದರ್ಶಿ ವಿಶ್ವಕಿರಣ್ ವಂದಿಸಿದರು. ಕಿಶೋರ್ ಮತ್ತು ಪ್ರಜ್ಞಾ ಕಲ್ಪುರೆ ನಿರೂಪಿಸಿದರು.
ಉದ್ಘಾಟನಾ ಸಮಾರಂಭದ ನಂತರ ಡಾ. ವೀಣಾ ಫಾಲಚಂದ್ರ ನೇತೃತ್ವದಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಸನ್ ಸಹಯೋಗದಲ್ಲಿ ವೈದ್ಯಕೀಯ ಶಿಬಿರ, ಕೆ.ವಿ.ಜಿ. ಡೆಂಟಲ್ ಕಾಲೇಜ್ ನವರಿಂದ ದಂತ ಚಿಕಿತ್ಸಾ ಶಿಬಿರ, ಸಾಯಾ ಎಂಟರಪ್ರೈಸಸ್‌ನವರಿಂದ ಕೃಷಿ ಉಪಕರಣಗಳ ಪ್ರದರ್ಶನ, ಹಾಗೂ ಸ್ಥಳೀಯರಿಗೆ ವಿವಿಧ ಆಟೋಟ ಸ್ಫರ್ಧೆಗಳು ನಡೆದವು.