ಕಲ್ಲುಗುಂಡಿ ಮುತ್ತುಮಾರಿಯಮ್ಮ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

0
103

 

ಕಲ್ಲುಗುಂಡಿಯ ಮುತ್ತುಮಾರಿಯಮ್ಮ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವು ಸೆ.26ರಿಂದ ಪ್ರಾರಂಭಗೊಂಡಿದ್ದು, ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಜರುಗುತ್ತಿದೆ.
ನವರಾತ್ರಿ ಉತ್ಸವದ ಪ್ರಯುಕ್ತ ವಿವಿಧ ಭಜನಾ ತಂಡಗಳಿಂದ ಭಜನೆ, ಪ್ರತಿನಿತ್ಯ ಅಲಂಕಾರ ಪೂಜೆ, ಮಂಗಳವಾರ ಹಾಗೂ ಶುಕ್ರವಾರ ದುರ್ಗಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯುತ್ತಿದೆ.
ಅ.4ರವರೆಗೆ ಉತ್ಸವವು ವಿವಿಧ ವೈಧಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಪಳನಿವೇಲು, ಅಧ್ಯಕ್ಷ ಪಿ. ರಮೇಶ್, ಗೌರವ ಸಲಹೆಗಾರ ಬಿ.ಆರ್. ಪದ್ಮಯ್ಯ, ಎಸ್. ಷಣ್ಮುಖಂ ಎಸ್., ಸೇರಿದಂತೆ ಆಡಳಿತ ಮಂಡಳಿಯ ಪದಾಧಿಕಾರಿಗಳು, ಊರ ಹಾಗೂ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here