ವಿಶ್ವದ ಅತ್ಯಂತ ಎತ್ತರದ ಮಾರ್ಗ ತಲುಪಿದ ‘ರಿಕಾಲಿಂಗ್‌ ಅಮರ ಸುಳ್ಯ’ ಪುಸ್ತಕ

0

 

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿತ, ಲೇಖಕ  ಅನಿಂದಿತ್ ಗೌಡ ಕೊಚ್ಚಿ ಬಾರಿಕೆ ಅವರ ದಾಖಲಾಧಾರಿತ ಪುಸ್ತಕ, ‘ರಿಕಾಲಿಂಗ್ ಅಮರ ಸುಳ್ಯ’ ಭಾರತದ ಪಶ್ಚಿಮ ಭಾಗದ ಅನೇಕ ರಾಜ್ಯಗಳನ್ನು ಹಾದುಹೋಗುವ ಮೂಲಕ ವಿಶ್ವದ ಅತ್ಯಂತ ಎತ್ತರದ ರಸ್ತೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಉಮ್ಲಿಂಗ್ ಲಾ ಪಾಸ್ ಅನ್ನು ಅಕ್ಟೋಬರ್ ತಿಂಗಳಲ್ಲಿ ಏರಿದೆ.

ಈ ಮೂಲಕ ಭಾರತದ ಪ್ರಥಮ ಸ್ವಾತಂತ್ರ್ಯ ಹೋರಾಟವನ್ನು ವಿವಿಧೆಡೆ ಪರಿಚಯಿಸುವ ಸಲುವಾಗಿ ಹೊಸ ದಾಖಲೆಯನ್ನು ಸೃಷ್ಟಿಸಿದೆ. ಸಮುದ್ರ ಮಟ್ಟದಿಂದ 19,024 ಅಡಿ ಎತ್ತರದ ಈ ಪ್ರದೇಶಕ್ಕೆ ತುಳುನಾಡಿನ ಅನುಭವಿ ಬೈಕ್ ಸವಾರರ ತಂಡ, ಶ್ರೀ ವಿನೀತ್ ಬಿ. ಶೆಟ್ಟಿ ಅವರ ನೇತೃತ್ವದ ‘ಸ್ಕ್ರೂ ರೈಡರ್ಸ್’ ಸೆಪ್ಟೆಂಬರ್ 17 ರಂದು ಮಂಗಳೂರಿನ ತುಳು ಭವನದಿಂದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಶ್ರೀ ದಯಾನಂದ ಜಿ. ಕತ್ತಲ್ ಸಾರ್ ಅವರಿಂದ ಚಾಲನೆ ಪಡೆದಿತ್ತು.

ಈ ಕುರಿತು ಮಾತನಾಡಿರುವ ಲೇಖಕ, ಅನಿಂದಿತ್ ಗೌಡ ಕೊಚ್ಚಿ ಬಾರಿಕೆ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭ ಅಕ್ಟೋಬರ್ ತಿಂಗಳಿನಲ್ಲಿ ಈ ಸಾಧನೆಯ ಸುದ್ದಿಯ ವಿಶಿಷ್ಟತೆ ತಿಳಿಸಿದ್ದಾರೆ. ‘ರಿಕಾಲಿಂಗ್ ಅಮರ ಸುಳ್ಯ’ ಪುಸ್ತಕದಲ್ಲೊಂದು ವಿವರ ಹೇಗಿದೆ ಎಂದರೆ 1838ರ ಒಂದು ಲಭ್ಯವಾದ ದಾಖಲೆಯ ಪ್ರಕಾರ, ಕ್ರಾಂತಿ ನಡೆದ ಇಸವಿಯ ಅಕ್ಟೋಬರ್ ತಿಂಗಳಲ್ಲಿ ಅಮರ ಸುಳ್ಯ ಕ್ರಾಂತಿಯ ಕುರಿತು ಯಾವುದೇ ಮಾತನ್ನಾಡದ ರೀತಿ ಕಠಿಣ ನಿರ್ಬಂಧವನ್ನು ಅಂದಿನ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ ಸರ್ಕಾರ ಹೇರಿತ್ತು. ಆದರೆ ನೂರೆಂಬತ್ತೈದು ವರ್ಷಗಳ ನಂತರದ ಇಂದಿನ ಸ್ವಾತಂತ್ರ್ಯ ನಂತರದ ಭಾರತದಲ್ಲಿ ಅಮರ ಸುಳ್ಯ ಕ್ರಾಂತಿಯ ಬಗ್ಗೆ ಅಲ್ಲಲ್ಲಿ ಅರಿವು ಮೂಡಿಸುವ ಕಾರ್ಯಗಳು ನಡಿಯುತ್ತಿರುವುದು ವಸಾಹತು ಸಂಕೋಲೆಗಳನ್ನು ನೈಜ ಅರ್ಥದಲ್ಲಿ ಮುರಿಯುತ್ತಿರುವ ಸಂಕೇತ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಯಾವ ಅಕ್ಟೋಬರ್ ನಲ್ಲಿ ನಿರ್ಬಂಧ ವಿಧಿಸಲಾಗಿತ್ತೊ, ಅದೇ ತಿಂಗಳಲ್ಲಿ ಇಂದು ವಿಶ್ವದ ಅತ್ಯಂತ ಎತ್ತರದ ಮಾರ್ಗದ ತುದಿಯನ್ನು ತಲುಪಿರುವುದು ಸ್ವಾತಂತ್ರ್ಯ ಹೋರಾಟಗಾರರ ಆತ್ಮಕ್ಕೆ ಒಂದರ್ಥದಲ್ಲಿ ನ್ಯಾಯ ಒದಗಿಸುವ ಪ್ರಯತ್ನ ಅಂತಾನೇ ಹೇಳಬಹುದು.