ಕಮಿಲಡ್ಕ ದುರ್ಗಾದೇವಿ ಮಂದಿರದಲ್ಲಿ ಮಹಾ ನವರಾತ್ರಿ ಉತ್ಸವ

0

 

 

ವಿಶೇಷವಾಗಿ ದೇವಿಯ ಮತ್ತು ದೈವದ ದರ್ಶನ ಸೇವೆ

ಸಹಸ್ರಾರು ಸಂಖ್ಯೆಯಲ್ಲಿ ಸೇರಿದ ಭಕ್ತ ಸಮೂಹ- ವಿಶೇಷ ತುಲಾಭಾರ ಸೇವೆ

ಉಬರಡ್ಕ ಮಿತ್ತೂರು ಗ್ರಾಮದ ಉದಯಗಿರಿ ಕಮಿಲಡ್ಕ ಶ್ರೀ ದುರ್ಗಾದೇವಿ ಮಂದಿರ ,ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಅ.3 ರಂದು ಮಹಾನವರಾತ್ರಿ ಉತ್ಸವ ಹಾಗೂ ಶ್ರೀ ದೇವಿಯ ಮತ್ತು ಶ್ರೀ ವಿಷ್ಣುಮೂರ್ತಿ ದೈವದ ದರ್ಶನ ಸೇವೆಯು ಜರುಗಿತು.

ಸೆ.26 ರಂದು ಪ್ರಾತ: ಕಾಲ ಶ್ರೀ ದೇವಿಯ ಗದ್ದಿಗೆರುವ ಕಾರ್ಯಕ್ರಮ ನಡೆಯಿತು.
ಅ. 27 ರಂದು ಬೆಳಗ್ಗೆ ಹೊಸ ಅಕ್ಕಿ ನವನ್ನ ಕದಿರು ಕಟ್ಟುವ ಕಾರ್ಯಕ್ರಮ ನಡೆಯಿತು.
ಅ.3 ರಂದು ಸ್ಥಳೀಯ ಭಜಕರಿಂದ ಬೆಳಗ್ಗೆ ಭಜನಾ ಸೇವೆ ಬಳಿಕ ಶ್ರೀ ದುರ್ಗಾದೇವಿಯ ಪಾತ್ರಿ ರವಿಪ್ರಸಾದ್ ಕಮಿಲಡ್ಕ ರವರಿಂದ ದರ್ಶನ ಸೇವೆ ಹಾಗೂ ಶ್ರೀ ಮಹಾವಿಷ್ಣುಮೂರ್ತಿ ದೈವದ ಪಾತ್ರಿ ರಾಮ ಮಣಿಯಾಣಿ ಆಲೆಟ್ಟಿ ಯವರಿಂದ ದೈವದ ದರ್ಶನ ಸೇವೆಯು ಪ್ರದರ್ಶನ ಗೊಂಡಿತು.

ಈ ಸಂದರ್ಭದಲ್ಲಿ ವಿಷ್ಣುಮೂರ್ತಿ ದೈವದ ಮಾರಿಕಳ ಪ್ರವೇಶವಾಯಿತು. ಬಳಿಕ ಭಕ್ತಾದಿಗಳ ಹರಕೆಯ ತುಲಾಭಾರ ಸೇವೆ ,ಪ್ರೇತ ಉಚ್ಚಾಟನೆ, ಹರಕೆ ಒಪ್ಪಿಸುವ ಕಾರ್ಯ ನಡೆಯಿತು. ಮಧ್ಯಾಹ್ನ ಆಗಮಿಸಿದ ಭಕ್ತಾದಿಗಳಿಗೆ ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು. ಅಪರಾಹ್ನ ಶ್ರೀ ದೇವಿಯ ಮಂಗಳ ಸ್ನಾನ ನಡೆಯಿತು. ಊರ ಹಾಗೂ ಪರ ಊರಿನಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪ್ರಸಾದ ಸ್ವೀಕರಿಸಿದರು.