ಸುಬ್ರಹ್ಮಣ್ಯದಲ್ಲಿ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ವತಿಯಿಂದ ಶಾರದೋತ್ಸವ

0
69

ಸುಬ್ರಹ್ಮಣ್ಯ: ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಸುಬ್ರಹ್ಮಣ್ಯ ಮತ್ತು ಅಂಗನವಾಡಿ ಕೇಂದ್ರ ದೇವರಗದ್ದೆ ಇದರ ಆಶ್ರಯದಲ್ಲಿ ಅ.3 ರಂದು 21ನೇ ವರ್ಷದ ಶಾರದೋತ್ಸವವು ಭಕ್ತಿ ಸಡಗರದಿಂದ ಆರಂಭವಸಯಿತು. ಬೆಳಗ್ಗೆ ಭವ್ಯ ಮೆರವಣಿಗೆ ಯಲ್ಲಿ ಮಾತೆಯನ್ನು ತಂದು ಪ್ರತಿಷ್ಢಾಪಿಸಲಾಯಿತು.

ಬಳಿಕ ಕುಕ್ಕೆಶ್ರೀ ಭಜನಾ ಮಂಡಳಿ ಸುಬ್ರಹ್ಮಣ್ಯ ಮತ್ತು ಸಾರ್ವಜನಿಕರಿಂದ ಭಜನೆ ನೆರವೇರಿತು.ಬಳಿಕ ಮಹಾಪೂಜೆ ನಡೆದು ಪ್ರಸಾದ ವಿತರಣೆ ನೆರವೇರಿತು.ನಂತರ ವಿವಿಧ ಸ್ಪರ್ಧೆಗಳು ನೆರವೇರಿತು. ಸಂಜೆ ಸ್ಥಳೀಯ ಪುಟಾಣಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಗಾನ ಸರಿ ಕಲಾ ತಂಡ ಪುತ್ತೂರು ಇವರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಸಮಿತಿ ಅಧ್ಯಕ್ಷ ಅಪ್ಪಯ್ಯ ಕೋಡಿಕಜೆ, ಕಾರ್ಯದರ್ಶಿ ಕೆ.ಹೊನ್ನಪ್ಪ ಗೌಡ, ಪೂರ್ವಾಧ್ಯಕ್ಷರಾದ ಶಿವರಾಮ ರೈ, ಮಾಧವ.ಡಿ,ಗ್ರಾ.ಪಂ ಸದಸ್ಯರಾದ ಹರೀಶ್ ಇಂಜಾಡಿ, ಸೌಮ್ಯ ಭರತ್ ಕಲ್ಲಗುಡ್ಡೆ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರಶೇಖರ್, ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಸ್ಮಿತಾ ಎನ್, ಅಂಗನವಾಡಿ ಕಾರ್ಯಕರ್ತೆ ಕಮಲಾ ಮಾನಾಡು ಮತ್ತು ಸಮಿತಿ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here