ಎಲಿಮಲೆ ಅಪಘಾತ: ಗಾಯಾಳು ವಿದ್ಯಾರ್ಥಿನಿಯೂ ಮೃತ್ಯು

0
15775

ಸಹೋದರ ಸಹೋದರಿಯನ್ನು ಬಲಿ ತೆಗೆದುಕೊಂಡ ಭೀಕರ ಅಪಘಾತ

ಪ್ರತಿಭಾವಂತ ವಿದ್ಯಾರ್ಥಿಗಳ ದಾರುಣ ಅಂತ್ಯ

 

ಎಲಿಮಲೆ ಮತ್ತು ಜಬಳೆ ಮಧ್ಯೆ ಇಂದು ಮಧ್ಯಾಹ್ನ ಸಂಭವಿಸಿದ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿಯೂ ಮೃತಪಟ್ಟಿದ್ದು, ಸಾವನ್ನಪ್ಪಿದವರ ಸಂಖ್ಯೆ ಎರಡಕ್ಕೇರಿದೆ. ಸಹೋದರ ಮತ್ತು ಸಹೋದರಿ ಅಪಘಾತದಲ್ಲಿ ದಾರುಣ ಅಂತ್ಯ ಕಂಡಿದ್ದಾರೆ.


ಎಲಿಮಲೆ ಮತ್ತು ಜಬಳೆ ಮಧ್ಯೆ ಈ ಅಪಘಾತ ಸಂಭವಿಸಿತ್ತು. ಕಡಪಾಲ ಬಾಜಿನಡ್ಕ ದೇವಿದಾಸ್ ಎಂಬವರ ಪುತ್ರ ನಿಶಾಂತ್ ಚಲಾಯಿಸುತ್ತಿದ್ದ ಸ್ಕೂಟಿ ಮತ್ತು ಮಾರುತಿ ಕಾರು ಪರಸ್ಪರ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ನಿಶಾಂತ್ ಹಾಗೂ ಆತನ ಸಹೋದರಿ ಮೋಕ್ಷಾರನ್ನು ಸ್ಥಳೀಯರು ತಕ್ಷಣವೇ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದಿದ್ದರು. ಆಸ್ಪತ್ರೆಗೆ ತಲುಪುವ ವೇಳೆಗಾಗಲೇ ನಿಶಾಂತ್ ಸಾವನ್ನಪ್ಪಿದರು. ಮೋಕ್ಷಾಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯುತತಿದ್ದ ವೇಳೆ ಆಕೆಯೂ ಸಾವನ್ನಪ್ಪಿದಳೆಂದು ತಿಳಿದು ಬಂದಿದೆ.

ಮೃತ ನಿಶಾಂತ್ ಸುಳ್ಯ ಜೂನಿಯರ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿದ್ದು, ಮೋಕ್ಷಾ ದೇವಚಳ್ಳ ಸ.ಮಾ.ಹಿ.ಪ್ರಾ.ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ. ಇಬ್ಬರು ಕೂಡಾ ಪ್ರತಿಭಾವಂತ ವಿದ್ಯಾರ್ಥಿಗಳಾಗಿದ್ದರು.

LEAVE A REPLY

Please enter your comment!
Please enter your name here