ಡಿ.10 ರಂದು ಗೂನಡ್ಕದಲ್ಲಿ ಸುಳ್ಯ ತಾಲೂಕು 26ನೇ ಕನ್ನಡ ಸಾಹಿತ್ಯ ಸಮ್ಮೇಳನ

0

 

ಅ.15 ರಂದು ಸಜ್ಜನ ಸಭಾಂಗಣದಲ್ಲಿ ಸ್ವಾಗತ ಸಮಿತಿ ರಚನೆ ಸಭೆ

ಸುಳ್ಯ ತಾಲೂಕು ಕನ್ನಡ ಪರಿಷತ್ತು ಇದರ ತಾಲೂಕು ಘಟಕದ ಮಾಸಿಕ ಸಭೆ ಅ.1 ರಂದು ಸುಳ್ಯದ ಕನ್ನಡ ಭವನದಲ್ಲಿ ನಡೆಯಿತು.

 

ಸುಳ್ಯ ತಾಲೂಕು 26 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಗೂನಡ್ಕ ಸಜ್ಜನ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಸುವುದೆಂದು ಈಗಾಗಲೇ ತೀರ್ಮಾನಿಸಿದ್ದು,
ಅ.1 ರಂದು ನಡೆದ ಕಸಾಪ ತಾಲೂಕು ಘಟಕದ ಮಾಸಿಕ ಸಭೆಯಲ್ಲಿ ಡಿ. 10 ರಂದು ಶನಿವಾರ ಸಾಹಿತ್ಯ ಸಮ್ಮೇಳನ ನಡೆಸುವುದೆಂದು ದಿನಾಂಕ ನಿಗದಿಪಡಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಕಸಾಪ ಅಧ್ಯಕ್ಷ ಚಂದ್ರಶೇಖರ ಪೇರಾಲು ವಹಿಸಿದ್ದರು.
ವೇದಿಕೆಯಲ್ಲಿ ಸಜ್ಜನ ಪ್ರತಿಷ್ಠಾನ ಗೂನಡ್ಕ ಇದರ ಅಧ್ಯಕ್ಷರಾದ ಡಾ.ಉಮ್ಮರ್ ಬೀಜದಕಟ್ಟೆ,ಗೌರವ ಕಾರ್ಯದರ್ಶಿಗಳಾದ ತೇಜಸ್ವಿ ಕಡಪಳ, ಶ್ರೀಮತಿ ಚಂದ್ರಮತಿ ,ಗೌರವ ಸಲಹೆಗಾರರಾದ ಹರೀಶ್ ಬಂಟ್ವಾಳ್ ಉಪಸ್ಥಿತರಿದ್ದರು.
ಸಭೆಯಲ್ಲಿ ಸ್ವಾಗತ ಸಮಿತಿ ರಚಿಸುವ ಬಗ್ಗೆ ,ಸಾಹಿತ್ಯ ಸಮ್ಮೇಳನದಲ್ಲಿ ಮೆರವಣಿಗೆ, ಗೋಷ್ಠಿ ,ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಬಗ್ಗೆ ಚರ್ಚಿಸಲಾಯಿತು.
ಸ್ವಾಗತ ಸಮಿತಿ ರಚಿಸುವ ಬಗ್ಗೆ ಅ.15 ಶನಿವಾರದಂದು ಗೂನಡ್ಕ ಸಜ್ಜನ ಸಭಾಂಗಣದಲ್ಲಿ ಸಭೆ ಕರೆಯಲಾಗುವುದುದೆಂದು ತೀರ್ಮಾನಿಸಲಾಯಿತು.


ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನಿರ್ದೇಶಕರುಗಳಾದ ಪ್ರೊ.ಬಾಲಚಂದ್ರ ಗೌಡ,ಪ್ರೊ.ಸಂಜೀವ ಕುದ್ಪಾಜೆ, ಜಯರಾಮ ಶೆಟ್ಟಿ, ಸಂಕೀರ್ಣ ಚೊಕ್ಕಾಡಿ, ರಮೇಶ್ ನೀರಬಿದರೆ, ಶರೀಫ್ ಜಟ್ಟಿಪಳ್ಳ, ಯೋಗಿಶ್ ಹೊಸೊಳಿಕೆ, ಲತಾಶ್ರೀ ಸುಪ್ರೀತ್ ಮೋಂಟಡ್ಕ, ಶಶ್ಮಿಭಟ್ ಅಜ್ಜಾವರ, ಚರಿಷ್ಮಾ ಕಡಪಳ ಉಪಸ್ಥಿತರಿದ್ದರು.