ಮುಕ್ಕೂರಿನಲ್ಲಿ ಏಳನೇ ವರ್ಷದ ಶ್ರೀ ಶಾರದೋತ್ಸವ ಪ್ರಾರಂಭ

0

 

ಮುಕ್ಕೂರು – ಪೆರುವಾಜೆ ಶಾಲಾ ವಠಾರದಲ್ಲಿ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ವತಿಯಿಂದ ಏಳನೇ ವರ್ಷದ ಶ್ರೀ ಶಾರದೋತ್ಸವವು ಸೆ.05 ರಂದು ಪ್ರಾರಂಭಗೊಂಡಿತು.
ಬೆಳಿಗ್ಗೆ ಶ್ರೀ ಶಾರದಾ ದೇವಿಯ ಪ್ರತಿಷ್ಠೆ ನಡೆಯಿತು.
ಗಂಟೆ 9.30 ಕ್ಕೆ ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ.

ಬೆಳಿಗ್ಗೆ ಗಂಟೆ 10.00 ರಿಂದ ವಿದ್ಯಾರಂಭ ( ಅಕ್ಷರಾಭ್ಯಾಸ) ಮಹಾಪೂಜೆ,ವಾಹನ ಪೂಜೆ ಇತ್ಯಾದಿ ಸೇವೆಗಳು ನಡೆಯಲಿದೆ.
ಶ್ರೀ ಜಲದುರ್ಗಾದೇವಿ ಮಹಿಳಾ ಭಜನಾ ಮಂಡಳಿ ಪೆರುವಾಜೆ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಮಧ್ಯಾಹ್ನ ಗಂಟೆ 12.00 ಕ್ಕೆ ಮಹಾಪೂಜೆ,ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಲಿದೆ.
ಗಂಟೆ 2.30 ಕ್ಕೆ ಶ್ರೀ ಶಾರದಾ ದೇವಿಯ ವೈಭವದ ಶೋಭಾಯಾತ್ರೆ ನಡೆದು ಶ್ರೀ ಜಲದುರ್ಗಾ ಮಕ್ಕಳ ಕುಣಿತ ಭಜನಾ ತಂಡ ಪೆರುವಾಜೆ ಇವರ ಕುಣಿತ ಭಜನೆಯೊಂದಿಗೆ ಮುಕ್ಕೂರು ವಠಾರದಿಂದ ಹೊರಟು ಕುಂಡಡ್ಕ ಗೌರಿಹೊಳೆಯಲ್ಲಿ ಜಲಸ್ತಂಭನಗೊಳಿಸಲಾಗುವುದು.

ಧಾರ್ಮಿಕ ಸಭಾ ಕಾರ್ಯಕ್ರಮ
ಅಪರಾಹ್ನ ಗಂಟೆ 2.00 ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.
ಶಾರದೋತ್ಸವ ಸಮಿತಿ ಅಧ್ಯಕ್ಷ ಕಿರಣ್ ಚಾಮುಂಡಿಮೂಲೆ ಸಭಾಧ್ಯಕ್ಷತೆ ವಹಿಸಲಿದ್ದಾರೆ.
ಸವಣೂರು ಹಿಂದೂ ಜಾಗರಣಾ ವೇದಿಕೆ ಗೌರವಾಧ್ಯಕ್ಷ ಗಿರಿಶಂಕರ ಸುಲಾಯ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಾಪ್ಟ್ ವೇರ್ ಇಂಜಿನಿಯರ್ ಹಾಗೂ ಪ್ರಗತಿಪರ ಕೃಷಿಕ ನರಸಿಂಹ ತೇಜಸ್ವಿ ಕಾನಾವು ,ಮುಕ್ಕೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ದಯಾಕರ ಆಳ್ಬ ಬೋಳಕುಮೇರು, ಪ್ರಗತಿಪರ ಕೃಷಿಕ ಸಂತೋಷ್ ರೈ ಕಾಪು, ಸೌದಿ ಅರೇಬಿಯಾದಲ್ಲಿ ಉದ್ಯೋಗಿಯಾಗಿರುವ ಬಾಲಕೃಷ್ಣ ಗೌಡ ಕಂಡಿಪ್ಪಾಡಿ ಭಾಗವಹಿಸಲಿದ್ದಾರೆ.
ಶಾರದೋತ್ಸವ ಕಾರ್ಯಕ್ರಮದಲ್ಲಿ ಊರ ಹಾಗೂ ಪರವೂರ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಶಾರದಾಂಬೆಯ ಸೇವೆಯಲ್ಲಿ ಭಾಗಿಗಳಾಗಬೇಕಾಗಿ ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷ‌ ಕಿರಣ್ ಚಾಮುಂಡಿಮೂಲೆಯವರು ತಿಳಿಸಿದ್ದಾರೆ.