ಕಟೀಲು ಮೇಳದ ಕಲಾವಿದ, ಪ್ರಸಿದ್ಧ ಮದ್ದಳೆಗಾರ ಚಿದಾನಂದ ಕುದ್ಕುಳಿ ಜಾಂಡೀಸ್ ಗೆ ಬಲಿ

0

ಕಟೀಲು ಮೇಳದಲ್ಲಿದ್ದ ಪ್ರಸಿದ್ಧ ಕಲಾವಿದರೊಬ್ಬರು ಜಾಂಡೀಸ್ ಗೆ ಬಲಿಯಾದ ಘಟನೆ ವರದಿಯಾಗಿದೆ.

ಮರ್ಕಂಜ ಗ್ರಾಮದ ಕುದ್ಕುಳಿ ಯವರಾಗಿದ್ದು, ಪ್ರಸ್ತುತ ಬೆಳ್ತಂಗಡಿ ತಾಲೂಕಿನ ನಾರಾವಿಯಲ್ಲಿ ನೆಲೆಸಿರುವ ದಿ| ಮೋಂಟಪ್ಪ ಗೌಡ ಕುದ್ಕುಳಿಯವರ ಪುತ್ರ ಚಿದಾನಂದ ಎಂಬವರೇ ಜಾಂಡೀಸ್ ಗೆ ಬಲಿಯಾದ ಕಲಾವಿದ. ಅವರಿಗೆ ಅಂದಾಜು 28 ವರ್ಷ ವಯಸಾಗಿತ್ತು.


ಚಿದಾನಂದರವರು ಮರ್ಕಂಜದ ಕುದ್ಕುಳಿಯಲ್ಲಿ ನೆಲೆಸಿದ್ದ ಸಂದರ್ಭದಲ್ಲಿ ಕುಮಾರ ಸುಬ್ರಹ್ಮಣ್ಯ ಭಟ್ ವಳಕುಂಜರವರ ಮಾರ್ಗದರ್ಶನದಲ್ಲಿ ಮದ್ದಳೆ ಕಲಿತು ಕಟೀಲು ಮೇಳಕ್ಕೆ ಸೇರ್ಪಡೆಗೊಂಡರು. ಬಳಿಕ ಮೇಳದಲ್ಲಿ ಭಾಗವತರಾಗಿ, ನಾಟ್ಯ ಕಲಾವಿದರಾಗಿದ್ದ ಅವರು ಮದ್ದಳೆಯಲ್ಲಿ ಹೆಸರುವಾಸಿಯಾಗಿದ್ದರು. ಸತೀಶ್ ಶೆಟ್ಟಿ ಪಾಟ್ಲರವರಂತಹ ಪ್ರಸಿದ್ಧ ಭಾಗವತರಿಗೆ ಹಿಮ್ಮೇಳದಲ್ಲಿ ಮದ್ದಳೆಯಲ್ಲಿ ಸಾಥ್ ನೀಡುತ್ತಿದ್ದರು.
ಇವರು ಸುಮಾರು 15 ವರ್ಷಗಳಿಂದಲೂ ಹೆಚ್ಚು ವರ್ಷಗಳಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಇವರು ಕಳೆದ ಕೆಲವು ದಿನಗಳಿಂದ ಜಾಂಡೀಸ್ ಖಾಯಿಲೆಯಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದರು.
ಅವಿವಾಹಿತರಾಗಿರುವ ಚಿದಾನಂದರವರು ಸಹೋದರ ಮಂಗಳೂರಿನಲ್ಲಿ ನೆಲೆಸಿರುವ ರತ್ನಾಕರ ಗೌಡ ಹಾಗೂ ಸಹೋದರಿಯರನ್ನು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.