ಕಾಯರ್ತೋಡಿ ಶ್ರೀ ವರದಾಯಿನಿ ವ್ಯಾಘ್ರ ಚಾಮುಂಡಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

0
41

ಕಾಯರ್ತೋಡಿ ಶ್ರೀ ವರದಾಯಿನಿ ವ್ಯಾಘ್ರ ಚಾಮುಂಡಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಸೆ.26 ರಂದು ಆರಂಭಗೊಂಡು ಅ.05 ರಂದು ಸಂಪನ್ನಗೊಂಡಿತು.


ಬೆಳಿಗ್ಗೆ ಗಣಪತಿ ಹವನ ನಡೆದು ಮಧ್ಯಾಹ್ನ ಮಹಾಪೂಜೆ ಬಳಿಕ ಪ್ರಸಾದ ವಿತರಣೆ ನಡೆಯಿತು. ರಾತ್ರಿ ದುರ್ಗಾ ನಮಸ್ಕಾರ ಪೂಜೆ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ಸೆ.೨೯ ರಂದು ಮಹಾಗುರು ಕಾಲಬೈರವೇಶ್ವರನಿಗೆ ಅಭಿಷೇಕ ಹಾಗೂ ಅ.೨ ರಂದು ಅಕ್ಷರಾಭ್ಯಾಸ ನಡೆಯಿತು. ಅ.೩ ರಂದು ಸಾರ್ವಜನಿಕ ದುರ್ಗಾ ಹೋಮ ನಡೆದು, ಅ.೪ ರಂದು ವಾಹನಪೂಜೆ ನಡೆಯಿತು.


ಭಕ್ತಾಧಿಗಳ ಅಪೇಕ್ಷೆಯಂತೆ ತಿಂಗಳ ಪ್ರಥಮ ಶುಕ್ರವಾರ ಭಕ್ತಾಧಿಗಳ ದೇಣಿಗೆಯಿಂದ ಮಧ್ಯಾಹ್ನ ಅನ್ನಸಂತರ್ಪಣಾ ಕಾರ್ಯಕ್ರಮವು ಎರಡು ತಿಂಗಳಿನಿಂದ ನಡೆದು ಬರುತ್ತಿದೆ. ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರ ಡಿ.ಎಸ್.ಶೇಷಪ್ಪ, ಉತ್ಸವ ಸಮಿತಿ ಅಧ್ಯಕ್ಷ ಮತ್ತು ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಭಾಗವಹಿಸಿದರು.

LEAVE A REPLY

Please enter your comment!
Please enter your name here