ಹಾಲೆಮಜಲು : ಕುಣಿತ ಭಜನೆ ತರಬೇತಿ ಉದ್ಘಾಟನೆ

0
267

ನಾಲ್ಕೂರು ಗ್ರಾಮದ ಹಾಲೆಮಜಲು ನವಶಕ್ತಿ ಭಜನಾ ಸಂಘ ಹಾಗೂ ಅಮೃತ ಯುವತಿ ಮಂಡಲದ ಸಂಯುಕ್ತ ಆಶ್ರಯದಲ್ಲಿ ಹಾಲೆಮಜಲಿನ ಶ್ರೀ ವೆಂಕಟೇಶ್ವರ ಸಭಾಭವನದಲ್ಲಿ ಮಕ್ಕಳಿಗೆ ಏಳು ದಿನಗಳ ಕಾಲ ಕುಣಿತ ಭಜನೆ ತರಬೇತಿ ಕಾರ್ಯಕ್ರಮ ನಡೆಯಲಿದ್ದು, ಇದರ ಉದ್ಘಾಟನೆಯನ್ನು ನಾಲ್ಕೂರು ವಿಜಯ ಗ್ರಾಮ ಸಮಿತಿಯ ಅಧ್ಯಕ್ಷ ಡಿ.ಆರ್.ಉದಯಕುಮಾರ್ ರವರು ದೀಪ ಬೆಳಗಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಭಜನಾ ತರಬೇತುದಾರರಾದ ರಮೇಶ್ ಮೆಟ್ಟಿನಡ್ಕ, ಭಜನಾ ಸಮಿತಿಯ ಸಂಚಾಲಕಿ ಪವಿತ್ರ ಕುಕ್ಕುಜೆ, ಅಮೃತ ಯುವತಿ ಮಂಡಲದ ಅಧ್ಯಕ್ಷ ಶ್ರೀಮತಿ ದಿವ್ಯ ಸುಜನ್ ಗುಡ್ಡೆಮನೆ, ಕಾರ್ಯದರ್ಶಿ ಭವ್ಯ ಮುಗುಪ್ಪು ಸೇರಿದಂತೆ ಊರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here