ಕ್ರಿಕೆಟ್ ಪಂದ್ಯಾದಲ್ಲಿ ಉಳಿಕೆಯಾದ ರೂ.40 ಸಾವಿರ

0

ಇಬ್ಬರು ಮಕ್ಕಳ ಚಿಕಿತ್ಸೆಗೆ ನೀಡಿದ ಫ್ರೆಂಡ್ಸ್ ಪೇರಾಲು

ಅ.2 ರಂದು ಫ್ರೆಂಡ್ಸ್ ಪೇರಾಲು ತಂಡ ಪೇರಾಲು ಶಾಲೆಯಲ್ಲಿ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾಟದಲ್ಲಿ ಉಳಿತಾಯವಾದ ರೂ.40 ಸಾವಿರ ಹಣವನ್ನು ಇಬ್ಬರು ಮಕ್ಕಳ ಚಿಕಿತ್ಸೆಗೆ ನೀಡಲು ಆಯೋಜಕರು ನಿರ್ಧರಿಸಿದ್ದಾರೆ.

ಗುತ್ತಿಗಾರಿನ ಸಮೀಕ್ಷಾ ಎಂಬ ಬಾಲಕಿ ಕ್ಯಾನ್ಸರ್ ಕಾಯಿಲೆಯಿಂದ ಹಾಗೂ ಬೀರಮಂಗಲದ ಹಾರ್ದಿಕ ಎಂಬ ಬಾಲಕ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು ಇವರ ಚಿಕಿತ್ಸೆಗೆ ಹಣದ ಅವಶ್ಯಕತೆ ಇದೆ.

ಮಕ್ಕಳ ಚಿಕಿತ್ಸೆಗೆ ಹಣ ನೀಡಲು ನಿರ್ಧರಿಸಿದ ಪೇರಾಲಿನ ಯುವಕರ ತಂಡ ಕ್ರಿಕೆಟ್ ಪಂದ್ಯಾಟ ಆಯೋಜಿಸಿ ಅದರಲ್ಲಿ ಬರುವ ಲಾಭದ ಹಣವನ್ನು ನೀಡಲು ನಿರ್ಧರಿಸಿತು.‌ ಅದರಂತೆ ಅ.2 ರಂದು ಪಂದ್ಯಾಟ ನಡೆಯಿತು. ಒಟ್ಟು 38 ತಂಡಗಳು‌ ಭಾಗವಹಿಸಿತ್ತು. ಒಂದು ತಂಡದ ನೋಂದಣಿ ಶುಲ್ಕ ರೂ. 800 ಪಡೆದುಕೊಂಡಿದ್ದರು.

ಪಂದ್ಯಾಟ ಮುಗಿದು ಬಹುಮಾನ ವಿತರಣೆಯಾದ ಬಳಿಕ ಉಳಿಕೆ ಹಣ ಎಣಿಸಿದಾಗ ರೂ.40 ಸಾವಿರ ಸಂಗ್ರಹವಾಗಿತ್ತು. ಈ ಹಣವನ್ನು ಸಮೀಕ್ಷಾ ಹಾಗೂ ಹಾರ್ದಿಕ್ ಗೆ ತಲಾ 20 ಸಾವಿರ ದಂತೆ ನೀಡಲು ನಿರ್ಧಾರಕೈಗೊಳ್ಳಲಾಯಿತು.

ಅ.6 ರಂದು ಪೇರಾಲು ಫ್ರೆಂಡ್ಸ್ ತಂಡ ಹಾರ್ದಿಕ್ ನ ಮನೆಗೆ ಭೇಟಿ ನೀಡಿ ಸಹಾಯ ಹಸ್ತ ನೀಡಲಾಗಿದೆ ಎಂದು ಫ್ರೆಂಡ್ಸ್ ಪೇರಾಲು ತಂಡದ ಅಶ್ವಿನ್ ಪೇರಾಲು ತಿಳಿಸಿದ್ದಾರೆ.