ಕುಕ್ಕಟ್ಟೆ ಶ್ರೀ ಕ್ಷೇತ್ರ ಕಾಳಿಕಾ ಪರಮೇಶ್ವರಿ ಭದ್ರಕಾಳಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ, ಸಾಮೂಹಿಕ ಚಂಡಿಕಯಾಗ

0

 

ಮುರುಳ್ಯ ಗ್ರಾಮದ ಕುಕ್ಕಟ್ಟೆ ಶ್ರೀ ಕ್ಷೇತ್ರ ಕಾಳಿಕಾ ಪರಮೇಶ್ವರಿ ಭದ್ರಕಾಳಿ ದೇವಸ್ಥಾನದಲ್ಲಿ ಸೆ.೨೬ ರಿಂದ ನವರಾತ್ರಿ ಉತ್ಸವ ನಡೆಯುತ್ತಿದ್ದು, ಪತ್ರಿ ದಿನ ಭಜನಾ ಕಾರ್‍ಯಕ್ರಮ, ಮಹಾಪೂಜೆ, ಪ್ರಸಾದ ವಿತರಣೆ ನಡೆಯುತ್ತಿದೆ. ದೇವಳದಲ್ಲಿ ದಿನನಿತ್ಯ ವಿವಿಧ ಧಾರ್ಮಿಕ ಕಾರ್‍ಯಕ್ರಮಗಳು ನಡೆದು ಅ.೩ ನೇ ಸೋಮವಾರದಂದು ಮೂಡಬಿದ್ರೆ ಎನ್.ಕೆ.ಕೇಶವ ತಂತ್ರಿಗಳ ಆಚಾರ್ಯತ್ವದಲ್ಲಿ ಸಾಮೂಹಿಕ ಚಂಡಿಕಯಾಗ ನಡೆಯಿತು. ಈ ಸಂದರ್ಭದಲ್ಲಿ ದೇವಳದ ಆಡಳಿತ ಮೊಕ್ತೇಸರರಾದ ಜನಾರ್ಧನ ಆಚಾರ್ಯ ಕುಕ್ಕಟ್ಟೆ, ಅಧ್ಯಕ್ಷ ಧನಂಜಯ ಆಚಾರ್ಯ ಏನೆಕಲ್ಲು, ಗೌರವಾಧ್ಯಕ್ಷ ಬಾಲಕೃಷ್ಣ ಆಚಾರ್ಯ, ಕಾರ್‍ಯದರ್ಶಿ ಪುರುಷೋತ್ತಮ ಆಚಾರ್ಯ, ದೇವಳದ ಪ್ರಧಾನ ಅರ್ಚಕ ಪುರೋಹಿತ ಬಾಲಕೃಷ್ಣ ಪುರೋಹಿತರು, ಚಿನ್ನಯ್ಯ ಆಚಾರ್ಯ, ಸೇವಾ ಸಮಿತಿ ಪದಾಧಿಕಾರಿಗಳು, ಭಕ್ತಾದಿಗಳು ಉಪಸ್ಥಿತರಿದ್ದರು.ಜೀರ್ಣೋದ್ದಾರಗೊಂಡು ಬ್ರಹ್ಮ ಕಲಶಶೋತ್ಸವ ನಡೆದದು ಹಿರಿತನ ಅಲ್ಲ ಉಳಿದ ಕಾಮಗಾರಿಗಳು ಸುತ್ತುಪೌಳಿ, ತೀರ್ಥಬಾವಿ ಅನೇಕ ಕೆಲಸ ಕಾರ್‍ಯಗಳು ಬಾಕಿ ಇದೆ, ಭಕ್ತಾಧಿಗಳು ಕೈಜೋಡಿಸಬೇಕೆಂದು ಪುರೋಹಿತ ಬಾಲಕೃಷ್ಣ ಹೇಳಿದರು.
ಜೀರ್ಣೊದ್ದಾರ ಗೌರವಾಧ್ಯಕ್ಷ ಬಾಲಕೃಷ್ಣ ಮರೋಳಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜನಾರ್ದನ ‍ಆಚಾರ್ಯ ಕಾಣಿಯೂರು, ರಮೇಶ ಆಚಾರ್ಯ ಕೊಳೆಂಜಿಕೋಡಿ, ಕೃಷ್ಣಯ್ಯ ಆಚಾರ್ಯ ಇಂದ್ರಾಜೆ, ಸರೋಜಿನಿ ಆಚಾರ್ಯ ಕಡಬ ಇನ್ನಿತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here