ಕುಡ್ಲದ ಪಿಲಿಪರ್ಬ ಸ್ಪರ್ಧೆಯಲ್ಲಿ ಸೋನ ಅಡ್ಕಾರು ಅವರಿಗೆ ವೈಯಕ್ತಿಕ ಬಹುಮಾನ

0

 

ಸಣ್ಣ ಹುಲಿವೇಷ ಸ್ಪರ್ಧೆಯಲ್ಲಿ ಸುಳ್ಯಕ್ಕೆ ಮೊದಲ ಪ್ರಶಸ್ತಿ

ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಅರ್ಪಿಸುವ ಸಂಸದ ನಳಿನ್ ಕುಮಾರ್ ಕಟೀಲು ಮಾರ್ಗದರ್ಶನದಲ್ಲಿ , ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಮಂಗಳೂರಿನ ನೆಹರೂ ಮೈದಾನದಲ್ಲಿ ಅ.2ರಂದು ಜರುಗಿದ ತುಳುನಾಡಿನ ಸಾಂಪ್ರದಾಯಿಕ ಕಲೆ ಕುಡ್ಲದ ಪಿಲಿಪರ್ಬದ ಸಣ್ಣಹುಲಿ ವೇಷ ಸ್ಪರ್ಧೆಯಲ್ಲಿ ಸುಳ್ಯದ ಸೋನಾ ಅಡ್ಕಾರು ಅವರು ವೈಯುಕ್ತಿಕ ಬಹುಮಾನ ಪಡೆದುಕೊಂಡಿದ್ದು, ಸುಳ್ಯಕ್ಕೆ ಸಣ್ಣಹುಲಿ ವೇಷ ಸ್ಪರ್ಧೆಯಲ್ಲಿ ಮೊದಲ ಪ್ರಶಸ್ತಿ ಲಭಿಸಿದೆ.

ಮಂಗಳೂರಿನ ಮುಳಿಹಿತ್ಲು ಪ್ರೆಂಡ್ಸ್ ಕ್ಲಬ್ (M.F.C.) ಟೀಮ್ ನಲ್ಲಿ ಸೋನಾ ಅಡ್ಕಾರು ಅವರು ಸಣ್ಣಹುಲಿ ವೇಷ ಮತ್ತು ಕುಣಿತದಲ್ಲಿ ಭಾಗವಹಿಸಿದ್ದು, ಸ್ಮರಣಿಕೆ ಹಾಗೂ ನಗದು ಬಹುಮಾನ ಪಡೆದುಕೊಂಡಿದ್ದಾರೆ.
ಕುಡ್ಲ ಪಿಲಿ ಪರ್ಬ ಸ್ಪರ್ಧೆಯಲ್ಲಿ ಮಂಗಳೂರಿನ ಬಲಿಷ್ಠ 12 ಟೀಮ್ ಗಳು ಭಾಗವಹಿಸಿದ್ದು, ಎಲ್ಲಾ 12 ಟೀಮ್ ಗಳ ಪೈಕಿ ಮುಳಿಹಿತ್ಲು ಫ್ರೆಂಡ್ಸ್ ಕ್ಲಬ್ ವತಿಯಿಂದ ಸ್ಪರ್ಧಿಸಿದ ಸೋನಾ ಅಡ್ಕಾರು ಅವರು ವೈಯಕ್ತಿಕ ಪ್ರಶಸ್ತಿ ಪಡೆದುಕೊಂಡಿದ್ದಾರೆ.


ತರುಣ್ ಮಂಗಳೂರು ಅವರು ಈಕೆಗೆ ಕೊರ್ಯೋಗ್ರಫಿ ಮಾಡಿದ್ದಾರೆ. ಸುಳ್ಯದ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿನಿಯಾಗಿರುವ ಸೋನಾ ಅಡ್ಕಾರು ಅವರು ಜಾಲ್ಸೂರು ಗ್ರಾಮದ ಅಡ್ಕಾರಿನ ಶರತ್ ಅಡ್ಕಾರು ಹಾಗೂ ಶ್ರೀಮತಿ ಶೋಭಾ ಶರತ್ ದಂಪತಿಗಳ ಪುತ್ರಿ.