Breaking News

ಸುಳ್ಯ ಕೇಶವಕೃಪಾ ವೇದ-ಯೋಗ-ಕಲಾ ಶಿಬಿರದಲ್ಲಿ ಚುನಾವಣೆ

Advt_Headding_Middle

ಸುಳ್ಯದ ಹಳೆಗೇಟು ವಿದ್ಯಾನಗರದ ಶ್ರೀ ಕೇಶವಕೃಪಾ ವೇದ-ಯೋಗ-ಕಲಾ ಶಿಬಿರದಲ್ಲಿ ಶಿಬಿರಾರ್ಥಿ ಎಳೆ ಮಕ್ಕಳಲ್ಲಿ ಮತದಾನದ ಜಾಗೃತಿ ಮೂಡಿಸುವ ಸಲುವಾಗಿ ಶಿಬಿರ ನಾಯಕನ ಆಯ್ಕೆಗೆ ಅಣಕು ಚುನಾವಣೆಯನ್ನು ಪ್ರಾಯೋಗಿಕವಾಗಿ ಅಳವಡಿಸಿ ಚುನಾವಣಾ ಅರಿವು ಮೂಡಿಸಿದರು.
ಸಾರ್ವತ್ರಿಕ ಚುನಾವಣೆಗಳಲ್ಲಿ ಯಾವ ರೀತಿಯ ಶಿಷ್ಟಾಚಾರಗಳ ಮೂಲಕ ನಡೆಸಲ್ಪಡುವುದೋ ಅದೇ ರೀತಿ ಚುನಾವಣಾ ಆಯೋಗದಿಂದ ಚುನಾವಣಾ ಘೋಷಣೆ, ದಿನಾಂಕ ನಿಗದಿ, ನಾಮಪತ್ರ ಸಲ್ಲಿಕೆ, ಪರಿಶೀಲನೆ, ನಾಮಪತ್ರ ಹಿಂತೆಗೆತ ಹಾಗೂ ಪ್ರತಿಯೊಬ್ಬ ಅಭ್ಯರ್ಥಿಗೂ ಅವರ ಆಯ್ಕೆಯ ಚಿಹ್ನೆಯನ್ನು ನೀಡುವುದರ ಮೂಲಕ ಚುನಾವಣಾ ವಿಧಿವಿಧಾನಗಳು ಹಂತ ಹಂತವಾಗಿ ನಡೆಯಿತು. ನಾಯಕನ ಸ್ಥಾನಕ್ಕೆ ನಾಲ್ಕು ನಾಮಪತ್ರ ಸಲ್ಲಿಸಲ್ಪಟ್ಟು ಚತುಷ್ಕೋಣ ಸ್ಪರ್ಧೆ ಇದ್ದರೂ ಇದ್ದರೂ ಪ್ರಬಲ ವಿದ್ಯಾರ್ಥಿಗಳಾದ ಇಬ್ಬರಲ್ಲಿ ಮಾತ್ರ ನೇರ ಸ್ಪರ್ಧೆ ಏರ್ಪಟ್ಟಿತ್ತು.
ಎರಡು ಮತಗಟ್ಟೆಗಳನ್ನು ಸೃಷ್ಟಿಸಿ ಎರಡು ಹಂತಗಳಲ್ಲಿ ಚುನಾವಣೆ ನಡೆಸಲಾಯಿತು. ಹೊಸಮನೆ ಹಾಗೂ ಹಳೆಮನೆ ಎಂಬ ಹೆಸರಿನ ಮತಗಟ್ಟೆಗಳಲ್ಲಿ ಮತ ಚಲಾಯಿಸಬೇಕಿತ್ತು. ಮತದಾರ ಶಿಬಿರಾರ್ಥಿಗಳಿಗೆ 1 ದಿನ ಮೊದಲೇ ಗುರುತು ಚೀಟಿ ನೀಡಿದ್ದು ಮತ್ತು ಗುರುತು ಚೀಟಿ ಕಡ್ಡಾಯ ಮಾಡಲಾಗಿತ್ತು. ಶಿಬಿರಾರ್ಥಿ ಶಿಬಿರಕ್ಕೆ ಗೈರು ಹಾಜರಾದ ಶಿಬಿರಾರ್ಥಿಯ ಹೆಸರಿನಲ್ಲಿ ನಕಲಿ ಪ್ರಯತ್ನಿಸಿದ್ದರಿಂದ ಭದ್ರತಾ ಸಿಬ್ಬಂದಿಯ ಸಹಕಾರದಿಂದ ಕಾನೂನು ಶಿಸ್ತು ಕ್ರಮ ಕೈಗೊಂಡು ‘ನಕಲಿ ಮತದಾನ ಅಪರಾಧ’ ಎಂಬ ಅರಿವು ಮೂಡಿಸಿತು. ಗುರುತು ಚೀಟಿ ತರದ ಶಿಬಿರಾರ್ಥಿಗೆ ಅವಕಾಶ ನಿರಾಕರಿಸಲ್ಪಟ್ಟಿತ್ತು. ಈ ಮೂಲಕ ಗುರುತು ಚೀಟಿಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಲಾಯಿತು.
ಮತಗಟ್ಟೆ ಅಧಿಕಾರಿಗಳಾಗಿ ಶಿಬಿರದ ಆಚಾರ್‍ಯ ಗುರುವೃಂದ ಕಾರ್‍ಯ ನಿರ್ವಹಿಸುವ ಮೂಲಕ ತಮ್ಮ ಕರ್ತವ್ಯವನ್ನು ನಿರ್ವಹಿಸಿದರು. ಚುನಾವಣೆಗೆ ಬ್ಯಾಲೆಟ್ ಪೇಪರ್ ಮುದ್ರಿಸಲಾಗಿತ್ತು. ಸರತಿಯ ಸಾಲಿನಲ್ಲಿ ನಿಂತು ಮತಗಟ್ಟೆ ಅಧಿಕಾರಿಗಳಿಗೆ ಗುರುತಿನ ಚೀಟಿ ತೋರಿಸಿ ಎಡಗೈ ತೋರು ಬೆರಳಿಗೆ ಶಾಯಿ ಗುರುತು ಹಾಕಿಸಿ ಶಿಸ್ತಿನಿಂದ ರಹಸ್ಯ ಮತಹಾಕಿ ಹೊರ ಬಂದ ಶಿಬಿರಾರ್ಥಿಗಳಿಗೆ ಪ್ರಜಾಪ್ರಭುತ್ವದಲ್ಲಿ ಹಿರಿಯರು ಚಲಾಯಿಸುವ ಮತದಾನದ ಅನುಭವ ಸ್ವತಃ ಪಡೆದುಕೊಂಡರು.
ಮತ ಎಣಿಕೆಯ ವೇಳೆ ಶಿಬಿರ ಸಂಚಾಲಕ ಪ್ರಕಾಶ್ ಮೂಡಿತ್ತಾಯರ ಮಾರ್ಗದರ್ಶನದಲ್ಲಿ ಮೇಲ್ವಿಚಾರಕರಾದ ಎಂ.ಎಸ್.ನಾಗರಾಜ್‌ರಾವ್ ಶಿವಮೊಗ್ಗ, ವೇ.ಮೂ. ಗಣಪತಿ ಭಟ್, ವೇ.ಮೂ. ಸುದರ್ಶನ ಭಟ್, ಪ್ರಧಾನಾಚಾರ್‍ಯ ವೇ.ಮೂ. ಪುರೋಹಿತ ನಾಗರಾಜ ಭಟ್, ಶ್ರೀದೇವಿ ನಾಗರಾಜ ಭಟ್, ಕು| ಯಶೋಧಾ ಮಾತಾಜಿಯವರು ಸಹಕರಿಸಿದರು. ಎಣಿಕೆಯನ್ನು ಅಭ್ಯರ್ಥಿಗಳ ಸಮ್ಮುಖದಲ್ಲಿ ಎರಡು ಮತಗಟ್ಟೆಗಳ ಮತಗಳನ್ನು ಪ್ರತ್ಯೇಕವಾಗಿ ೪ ಸುತ್ತುಗಳಲ್ಲಿ ಎಣಿಕೆ ಮಾಡಿ ಪ್ರತೀ ಎಣಿಕೆಯ ನಂತರವೂ ಅಭ್ಯರ್ಥಿಗಳು ಪಡೆದ ಮತಗಳ ವಿವರಗಳನ್ನು ಧ್ವನಿವರ್ಧಕದಲ್ಲಿ ಯೋಜಿತ ಅಧಿಕಾರಿ ಶ್ರೀವತ್ಸ ಭಾರದ್ವಾಜರು ಘೋಷಿಸುತ್ತಿದ್ದರು. ಪ್ರತೀ ಸಲ ಘೋಷಿಸಿದಾಗಲೂ ಗುಂಪು ಸೇರಿದ ಶಿಬಿರಾರ್ಥಿಗಳು ತಮ್ಮ ತಮ್ಮ ನೆಚ್ಚಿನ ನಾಯಕನಿಗೆ ಜಯಕಾರ ಹಾಕುತ್ತಿದ್ದರು. ಕೊನೆಯಲ್ಲಿ ಅಂತಿಮ ಸುತ್ತಿನ ಫಲಿತಾಂಶ ಪ್ರಕಟವಾದಾಗ ಶಿಬಿರ ನಾಯಕನಾಗಿ ಯಜುರ್ವೇದ ತೃತೀಯ ವರ್ಗದ ವಿದ್ಯಾರ್ಥಿ ಚಿ| ರಾಘವೇಂದ್ರ ಕೌಶಲ್ ಹಾಗೂ ಉಪನಾಯಕನಾಗಿ ಯಜುರ್ವೇದ ತೃತೀಯ ವರ್ಗದ ವಿದ್ಯಾರ್ಥಿ ಚಿ| ನಾಗರಾಜ ಜಿ. ಭಟ್ ಆಯ್ಕೆಯಾದರು. ಚುನಾವಣೆಯಲ್ಲಿ ಸೋತ ಅಭ್ಯರ್ಥಿ ವಿಜೇತ ನಾಯಕರಿಗೆ ಸಿಹಿ ತಿನಿಸಿದ್ದು ಫಲಿತಾಂಶವನ್ನು ಕ್ರೀಡಾ ಸ್ಪೂರ್ತಿಯಿಂದ ಸ್ವೀಕರಿಸಿದ್ದರ ಸಂಕೇತವಾಗಿತ್ತು.

sullia keshavakripa chunavane-matagatteyalli sarati saalinalli shibirarthigalusullia keshavakripa chunavane-matadana madida santasadondige   sullia keshavakripa chunavane-abhyarthigala sammukhadalli mata enikesullia keshavakripa chunavane-vijayee naayakana vijayotsavadalli

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.