HomePage_Banner
HomePage_Banner
Breaking News

ಕರಿಯಮಲೆಯ ಹುಡುಗಿಗೆ ಪಿಯುಸಿಯಲ್ಲಿ ಶೇ.75

ಸುಳ್ಯ ತಾಲೂಕಿನ ಬಂಟಮಲೆಯ ಕರಿಯಮಲೆ ಕಾಡಿನ ಮಧ್ಯದಲ್ಲಿ ವಾಸವಾಗಿರುವ ಏಕೈಕ ಮಲೆಕುಡಿಯ ಕುಟುಂಬದ ಹೆಣ್ಣು ಮಗಳೊಬ್ಬಳು ಪಿಯುಸಿಯಲ್ಲಿ 450 ಅಂಕಗಳೊಂದಿಗೆ ಉತ್ತೀರ್ಣಳಾಗಿದ್ದಾಳೆ.
ಪ್ರತಿದಿನ 15 ಕಿ.ಮೀ ಕಾಡಿನ ಮಧ್ಯೆ ನಡೆದು ಬಂದು ಹೈಸ್ಕೂಲು ಮುಗಿಸಿದ ಕರಿಯಮಲೆಯ ಲೋಕಯ್ಯರವರ ಪುತ್ರಿ ಪವಿತ್ರಾ ಪ್ರಥಮ ಪಿಯುಸಿ ವಾಣಿಜ್ಯ ವಿಬಾಗದಲ್ಲಿ ಅನುತ್ತೀರ್ಣಳಾಗಿ ಉನ್ನತ ಶಿಕ್ಷಣದ ಕನಸಿನಿಂದ ದೂರವಾಗಿದ್ದಳು. ಆದರೂ ಅನುತ್ತೀರ್ಣ ಹಾಗೂ ಓದು ನಿಲ್ಲಿಸಿದ ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸುತ್ತಿರುವ ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯ ಮೂಲಕ 2014-15ನೇ ಸಾಲಿನಲ್ಲಿ ಪಿಯುಸಿ ಖಾಸಗಿಯಾಗಿ ಪರೀಕ್ಷೆ ಬರೆದಿರುವ ಈಕೆ ಪ್ರಥಮ ಪ್ರಯತ್ನದಲ್ಲೇ ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾಗಿದ್ದಾಳೆ.
ಸುಳ್ಯ ತಾಲೂಕಿನ ಕೂತ್ಕುಂಜ ಗ್ರಾಮಕ್ಕೊಳಪಟ್ಟ ಓಟೆಕಜೆಯ ದಟ್ಟಕಾಡಿನ ಮಧ್ಯೆ ಈಗಲೂ ಮಲೆಕುಡಿಯ ಕುಟುಂಬವೊಂದು ಜೀವ ಸಾಗಿಸುತ್ತಿದೆ. ಪ್ರತಿದಿನ ಕಾಡು ಪ್ರಾಣಿಗಳ ಕೂಗಿನ ಮಧ್ಯೆ ಮೂಲಭೂತ ಸೌಲಭ್ಯಗಳ ಕೊರತೆಯ ನಡುವೆಯೂ ತಮ್ಮ ನೆಲದ ಅಸ್ತ್ತಿತ್ವಕ್ಕಾಗಿ ಜೀವನ ಸಾಗಿಸುತ್ತಿರುವ ಆ ಮಲೆಕುಡಿಯ ಜನಾಂಗದ ಕುಟುಂಬದ ಹೆಣ್ಣು ಮಗಳು ಪವಿತ್ರಾ. ಓದಿನ ಆಸೆಯಿಂದ ಸುಬ್ರಹ್ಮಣ್ಯದ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗ ಆರಿಸಿಕೊಂಡಿದ್ದ ಈಕೆ ಅನುತ್ತೀರ್ಣಗೊಂಡು ಮನೆಯಲ್ಲೇ ಬಾಕಿಯಾಗಿದ್ದಳು. ಆದರೆ ತನ್ನ ಓದಿನ ಆಸೆಯನ್ನು ಬಿಡದ ಈಕೆಯನ್ನು ತಂದೆ ಲೋಕಯ್ಯರು ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಗೆ ಸೇರಿಸಿದರು. ಪ್ರತಿದಿನ ಕಾಡಿನ ಮಧ್ಯೆ 15 ಕಿ.ಮೀ. ನಡೆದು ತರಗತಿಗೆ ಹಾಜರಾಗುವುದು ಕಷ್ಟವಾದರೂ ವಾರದಲ್ಲಿ ಎರಡು ದಿವಸ ಸಂಸ್ಥೆಗೆ ಬಂದು ತರಗತಿ ಪಡೆಯುತ್ತಿದ್ದಳು. ಉಳಿದ ದಿನಗಳಲ್ಲಿ ಮನೆಯಲ್ಲೇ ಓದಿ ಪರೀಕ್ಷೆ ಬರೆದು ೪೫೦ ಅಂಕಗಳೊಂದಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾಗಿದ್ದಾಳೆ. ಕರಿಯಮಲೆಯ ಗುಡಿಸಲಿನಲ್ಲಿ ವಿದ್ಯುತ್ ಇಲ್ಲದೆ ಸೀಮೆಎಣ್ಣೆ ದೀಪದಡಿಯಲ್ಲಿ ಓದಿ ಈಕೆ ಈ ಸಾಧನೆ ಮಾಡಿದ್ದಾಳೆ.

pavithra

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

1 Comment

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.