ಕೆವಿಜಿ ಐಪಿಎಸ್‌ನಲ್ಲಿ ಇಸ್ರೋ ನಿವೃತ್ತ ವಿಜ್ಞಾನಿಯಿಂದ ಉಪಗ್ರಹ ಕುರಿತು ಮಾಹಿತಿ

Advt_Headding_Middle
Advt_Headding_Middle

ಸುಳ್ಯದ ಕೆ.ವಿ.ಜಿ. ಐಪಿಎಸ್‌ನಲ್ಲಿ ಬಾಹ್ಯಾಕಾಶ ವಿಜ್ಞಾನದ ಕುರಿತು ಮಾಹಿತಿ ನೀಡುವ ಜೂ.8ರಂದು ನಡೆಯಿತು.
ಭಾರತೀಯ ಬಾಹ್ಯಾಕಾಶ ಸಂಶೊಧನಾ ಸಂಸ್ಥೆ-ಇಸ್ರೋದ ನಿವೃತ್ತ ವಿಜ್ಞಾನಿ, ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಸಹೋದ್ಯೋಗಿ ಡಾ.ಸಿ.ಡಿ.ಪ್ರಸಾದ್ ಬಾಹ್ಯಾಕಾಶ, ಉಪಗ್ರಹಗಳು, ಉಪಗ್ರಹ ಉಡಾವಣಾ ನೌಕೆ ಕುರಿತು ಪ್ರಾತ್ಯಾಕ್ಷಿಕೆ ಮೂಲಕ ತರಬೇತಿ ನೀಡಿ, ಭಾರತೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ವಿಕ್ರಮ್ ಸಾರಾಭಾ ಅವರ ಕೊಡುಗೆ ಮಹತ್ತರವಾದುದುದು ಎಂದರಲ್ಲದೆ ಸಾರಾಭಾಯಿ ಅವರು ತನ್ನ ಸ್ವಂತ ಕೈಯಿಂದ ಹಣ ಖರ್ಚು ಮಾಡಿ ತಿರುವನಂತಪುರದ ಬಳಿಯಲ್ಲಿ ವಿವಿಧ ಕ್ಷೇತ್ರಗಳ ತಜ್ಞರನ್ನು ಸೇರಿಸಿಕೊಂಡು ಬಾಹ್ಯಾಕಾಶ ಕುರಿತು ಸ್ವತಂತ್ರವಾಗಿ ಸಂಶೋಧನಾ ಸಂಸ್ಥೆ ಆರಂಭಿಸಿದರಿಂದ ಇಂದು ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಇಷ್ಟು ಮುಂದುವರಿಯಲು ಸಾಧ್ಯವಾಗಿದೆ. ಅಂದು ಕೇರಳದ ಮುಖ್ಯಮಂತ್ರಿಯಾಗಿದ್ದ ಇಎಂಎಸ್ ನಂಬೂದಿರಿಪಾಡ್ ಸಂಸ್ಥೆಗೆ ಒಂದು ಗ್ರಾಮವನ್ನು ಉಚಿತವಾಗಿ ನೀಡಿ ಪ್ರೋತ್ಸಾಹಿಸಿದ್ದರು. ಅಲ್ಲಿದ್ದ ಚರ್ಚಿನ ಕೊಠಡಿಯಲ್ಲಿ ಮೊದಲ ಉಪಗ್ರಹ ತಯಾರಿಸಲಾಗಿದೆ. ಯು.ಆರ್.ರಾವ್, ಎಪಿಜೆ ಅಬ್ದುಲ್ ಕಲಾಂ, ಕಸ್ತೂರಿ ರಂಗನ್ ಮೊದಲಾದವರ ಸಹಕಾರದೊಂದಿಗೆ ಅಲ್ಲಿ ಸಾಕಷ್ಟು ಸಂಶೋಧನೆಗಳು ನಡೆದಿವೆ. ಬೆಂಗಳೂರಿನಲ್ಲಿ ಇಸ್ರೋ, ಡಿಆರ್‌ಡಿಒ ಸಂಸ್ಥೆಗಳ ಹುಟ್ಟಿಗೂ ಇದು ಕಾರಣವಾಗಿದೆ ಎಂದವರು ಹೇಳಿದರು.
ಶಾಲಾ ಪ್ರಾಂಶುಪಾಲ ಪಿ.ಭುಜಂಗ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ವೈಜ್ಞಾನಿಕ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಬೇಕು. ಹಣ ಸಂಪಾದನೆ ಒಂದೇ ಅವರ ಗುರಿಯಾಗಬಾರದು. ಪರದೇಶಗಳ ಸಂಸ್ಥೆಗಳ ಡಿಯಲ್ಲಿ ಗುಲಾಮರಾಗಿ ಸೇವೆ ಸಲ್ಲಿಸುವ ಬದಲು ತಾವೇ ಮಹತ್ತರವಾದ ಸಾಧನೆ ಮಾಡಿ ವಿದೇಶಿಯರಿಗೂ ಕೆಲಸ ಕೊಡುವಂತಾಗಬೇಕು. ಅದಕ್ಕೆ ಪೂರ್ವಭಾವಿಯಾಗಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಹೇಳಿದರು.
ಶಿಕ್ಷಕಿ ಸುಜನಿ ವೇದಿಕೆಯಲ್ಲಿದ್ದರು. ಶ್ರೇಯಾ ಸ್ವಾಗತಿಸಿ, ಅನುಜ್ಞಾ ವಂದಿಸಿದರು. ಶೃಂಗಾ ಕಾರ್ಯಕ್ರಮ ನಿರೂಪಿಸಿದರು.

kvg ips nalli isro vijani yinda mahithi karyagara (2) kvg ips nalli isro vijani yinda mahithi karyagara (4) kvg ips nalli isro vijani yinda mahithi karyagara (6) kvg ips nalli isro vijani yinda mahithi karyagara (8) kvg ips nalli isro vijani yinda mahithi karyagara (9) kvg ips nalli isro vijani yinda mahithi karyagara (10) kvg ips nalli isro vijani yinda mahithi karyagara (12)

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.