ಪುನರ್ಪುಳಿ ಕೃಷಿಯಲ್ಲಿ ದಾಖಲೆ ಬರೆದ ನಾರಾಯಣ ರೈ

Advt_Headding_Middle
Advt_Headding_Middle

ಪುನರ್ಪುಳಿಯನ್ನು ವಾಣಿಜ್ಯಿಕವಾಗಿ ಬೆಳೆದು ಅದನ್ನು ಮೌಲ್ಯವರ್ಧನೆ ಮಾಡಿ ವಿದೇಶಗಳಿಗೆ ರಫ್ತು ಮಾಡುತ್ತಿರುವ ಹಿರಿಯ ಕೃಷಿಕರೊಬ್ಬರು ಕೌಡಿಚ್ಚಾರು ಸಮೀಪದ ಬಳ್ಳಿಕಾನದಲ್ಲಿದ್ದಾರೆ.
ಪುತ್ತೂರಿನಲ್ಲಿ ದಿನೇಶ ಭವನ ಹೋಟೇಲ್, ಬಾರ್, ವಸತಿಗೃಹ ನಡೆಸುತ್ತಿರುವ ಬಳ್ಳಿಕಾನ ನಾರಾಯಣ ರೈ ಅವರು ಕೃಷಿಯಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡಿದವರು. 92ರ ಹರೆಯದಲ್ಲೂ ಗುಡ್ಡ ಹತ್ತಿ ಇಳಿದು ತಾವು ನೆಟ್ಟ ಗಿಡಗಳನ್ನು ಮುಟ್ಟಿ ಆರೈಕೆ ಮಾಡುತ್ತಾರೆ. 10 ವರ್ಷಗಳ ಹಿಂದೆ ಶಿವಮೊಗ್ಗಕ್ಕೆ ಹೋಗಿದ್ದಾಗ ಅಲ್ಲಿನ ರೈತರೊಬ್ಬರು ಪುನರ್ಪುಳಿಯನ್ನು ವಾಣಿಜ್ಯಿಕವಾಗಿ ಕೃಷಿ ಮಾಡಿದ್ದನ್ನು ನೋಡಿದ ನಾರಾಯಣ ರೈಗಳು ಅಲ್ಲಿಂದ ಗಿಡಗಳನ್ನು ತಂದು ತಮ್ಮ ಜಮೀನಿನಲ್ಲಿ ನೆಟ್ಟದ್ದು. ಪ್ರತಿ ವರ್ಷ 2ರಿಂದ 3 ಸಾವಿರ ಗಿಡಗನ್ನು ಅವರು ತಮ್ಮ ಗುಡ್ಡ ಜಮೀನಿನಲ್ಲಿ ನೆಡುತ್ತಾರೆ.
ಪುನರ್ಪುಳಿಯಲ್ಲಿ 13.5ರಷ್ಟು ಹೈಡ್ರೋ ಸಿಟ್ರಿಕ್ ಏಸಿಡ್ ಇದೆ. ಇದನ್ನು ಮೈಸೂರಿನ ಸಿಎಫ್ ಟಿಆರ್ ಐನವರು ಪರೀಕ್ಷೆ ಮಾಡಿ ದೃಢಪಡಿಸಿದ್ದಾರೆ. ಪುನರ್ಪಳಿಯಲ್ಲಿ ಕೊಬ್ಬು ಕರಗಿಸುವ ಗುಣ ಇರುವ ಹೈಡ್ರೋ ಸಿಟ್ರಿಕ್ ಇರುವುದರಿಂದ ಇದಕ್ಕೆ ವಿದೇಶಗಳಲ್ಲಿ ಭಾರಿ ಬೇಡಿಕೆ ಇದೆ. 10 ವರ್ಷಗಳ ಹಿಂದೆ 10 ರೂಪಾಯಿ ಇದ್ದ ಪುನರ್ಪುಳಿಗೆ ಈಗ 150 ರೂಪಾಯಿವರೆಗೆ ಧಾರಣೆ ಏರಿಕೆ ಆಗಿದೆ. ಜ್ಯೂಸ್ ತಯಾರಿಕೆಯೊಂದಿಗೆ ಔಷಧಿ ತಯಾರಿಕೆಯಲ್ಲೂ ಇದನ್ನು ಬಳಸುತ್ತಾರೆ. ಅಲ್ಲದೆ ಇದರ ಬೀಜದಿಂದ ಕೋಕುಂ ಬಟರ್ ಹೆಸರಿನಲ್ಲಿ ಎಣ್ಣೆಯನ್ನೂ ತೆಗೆದು ಮಾರಾಟ ಮಾಡಬಹುದು ಎನ್ನುತ್ತಾರೆ ನಾರಾಯಣ ರೈ.
ತೆಂಗು, ಅಡಿಕೆಯಂತೆ ಇದಕ್ಕೆ ನೀರು, ಗೊಬ್ಬರ, ಮುಚ್ಚಿಗೆ, ಔಷಧಿ ಯಾವುದರ ಅಗತ್ಯವೂ ಇಲ್ಲ. 12 ಅಡಿಗೆ ಒಂದರಂತೆ 5 ವರ್ಷಕ್ಕೆ ಫಸಲು ಬರಲು ಆರಂಭವಾಗುತ್ತದೆ. 10 ವರ್ಷದ ಮರದಿಂದ 1ರಿಂದ 2 ಕ್ವಿಂಟಾಲ್ವರೆಗೆ ಪುನರ್ಪುಳಿ ಪಡೆಯಬಹುದು ಎನ್ನುವ ಅವರು ತಾವು ಬೆಳೆಸಿದ ಪುನರ್ಪುಳಿಯನ್ನು ಸ್ವತಃ ತಾವೇ ಸಂಸ್ಕರಿಸಿ, ಮೌಲ್ಯವರ್ಧನೆ ಮಾಡಿ, ವಿದೇಶಗಳಿಗೂ ರಫ್ತು ಮಾಡುತ್ತಾರೆ.
ಸಾವಿರಾರು ಹಲಸು ಗಿಡ ನೆಟ್ಟು ಹಲಸಿನ ಕೃಷಿ ಮಾಡಿ ಕೈಸುಟ್ಟುಕೊಂಡ ನಾರಾಯಣ ರೈ, ನೂರಾರು ಎಮ್ಮೆಗಳನ್ನು ಸಾಕಿ ಹೈನುಗಾರಿಕೆಯನ್ನು ಮಾಡಿದ್ದರು. ಆದರೆ ಹೆಚ್ಚಿನ ಕೂಲಿಯಾಳುಗಳು ಬೇಕಾಗುವುದರಿಂದ ಇದನ್ನು ನಿಲ್ಲಿಸಬೇಕಾಯಿತು. ವರ್ಷದಲ್ಲಿ ಮಾರ್ಚ್ ತಿಂಗಳಲ್ಲಿ ಮಾತ್ರ ಪುನರ್ಪುಳಿ ಫಸಲು ನೀಡುತ್ತದೆ. ಕೊಯಿಲು ಮಾಡಿ ಬೀಜ ಬೇರ್ಪಡಿಸಿ ಮೂರು ದಿನ ಬಿಸಿಲಿನಲ್ಲಿ ಒಣಗಿಸಿದರೆ ಸಾಕು. ಬೇರೆ ಕೂಲಿಯಾಳುಗಳ ಅಗತ್ಯವೂ ಇಲ್ಲ. ಮಾರುಕಟ್ಟೆಯೂ ಸಾಕಷ್ಟು ಇರುವುದರಿಂದ ಗುಡ್ಡ ಪ್ರದೇಶದಲ್ಲಿ ರಬ್ಬರ್ ಬದಲು ಪುನರ್ಪುಳಿ ನಾಟಿ ಮಾಡಿ ಹೆಚ್ಚಿನ ಆದಾಯ ಪಡೆಯಬಹುದು ಎಂಬ ಸಲಹೆಯನ್ನು ಅವರು ನೀಡುತ್ತಾರೆ.

DSC DSC03049 DSC03050 DSC03052 DSC03056 DSC03058

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.