ಸುಳ್ಯ: ಪ್ರೌಢಶಾಲೆ ವಿದ್ಯಾರ್ಥಿ ಸರ್ಕಾರಕ್ಕೆ ಚುನಾವಣೆ

Advt_Headding_Middle
Advt_Headding_Middle

ಸುಳ್ಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ಸರ್ಕಾರಕ್ಕೆ ಜೂನ್ 27 ರಂದು ಚುನಾವಣೆ ನಡೆಯಿತು.
ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸ್ಥಾನಕ್ಕೆ ತಲಾ ನಾಲ್ವರು ವಿದ್ಯಾರ್ಥಿಗಳು ಸ್ಫರ್ಧಿಸಿದ್ದರು. ಸಾರ್ವತ್ರಿಕ ಚುನಾವಣೆಗೆ ವ್ಯವಸ್ಥೆ ಮಾಡುವಂತೆ ಮತಪತ್ರಗಳನ್ನು ಮುದ್ರಿಸಲಾಗಿತ್ತು. ಎರಡು ಬೂತ್‌ಗಳನ್ನು ರಚಿಸಲಾಗಿತ್ತು. ವಿದ್ಯಾರ್ಥಿಗಳು ಸರದಿ ಸಾಲಿನಲ್ಲಿ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು. ಶಿಕ್ಷಕ ಲೋಕಯ್ಯ ಗೌಡ ಚುನಾವಣಾಧಿಕಾರಿಯಾಗಿದ್ದರು. ಶಿಕ್ಷಕಿಯರು ಮತಗಟ್ಟೆ ಅಧಿಕಾರಿಗಳಾಗಿ ಸಹಕರಿಸಿದರು. ಉಪಪ್ರಾಂಶುಪಾಲೆ ಜಯಶ್ರೀ ನೇತೃತ್ವ ವಹಿಸಿದ್ದರು.
ಮುಖ್ಯಮಂತ್ರಿಯಾಗಿ 10ನೇ ಎ ವಿಭಾಗದ ಎಂ.ಕೆ.ಧನುಷ್, ಉಪ ಮುಖ್ಯಮಂತ್ರಿಯಾಗಿ 9ನೇ ಎ ವಿಭಾಗದ ಬಿ.ಸುಂದರ ಚುನಾಯಿತರಾದರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.