HomePage_Banner
HomePage_Banner
Breaking News

ಕಲ್ಕ ಜಯಾನಂದ ಕೊಲೆ ಪ್ರಕರಣ: ಪತ್ನಿ ಲಲಿತಾ ಸಹಿತ ಐವರು ಆರೋಪಿಗಳ ಬಂಧನ, ಆರೋಪಿಗಳು ಪೊಲೀಸ್ ಕಸ್ಟಡಿಗೆ

ಕಲ್ಕ ಜಯಾನಂದ ಕೊಲೆ ಆರೋಪಿಗಳಿಗೆ ಪೊಲೀಸ್ ಕಸ್ಟಡಿ Read More…

ನಿಗೂಢವಾಗಿ ನಾಪತ್ತೆಯಾಗಿದ್ದ ಪಂಜ ಸಮೀಪದ ಕೂತ್ಕುಂಜ ಗ್ರಾಮದ ಕಕ್ಯಾನ ಕಲ್ಕದ ಜಯಾನಂದ ಗೌಡರವರ ಶವ ಪೆರುವಾಜೆ ಗ್ರಾಮದ ಒಡ್ಯ ಕಾಡಿನಲ್ಲಿ ಜುಲೈ ೨೯ರಂದು ಪತ್ತೆಯಾಗಿದೆ. ಕಲ್ಕ ಜಯಾನಂದರವರನ್ನು ಅಪಹರಿಸಿ ಕೊಲೆ ನಡೆಸಲಾಗಿದೆ ಎಂಬುದನ್ನು ವಿಚಾರಣೆಯ ವೇಳೆ ಖಚಿತಪಡಿಸಿಕೊಂಡಿರುವ ಪೊಲೀಸರು ಕೊಲೆಗೆ ಪ್ರೇರಣೆ ನೀಡಿದ ಆರೋಪದಲ್ಲಿ ಜಯಾನಂದರವರ ಪತ್ನಿ ಲಲಿತಾ, ಕೊಲೆ ಕೃತ್ಯಕ್ಕೆ ಮುಂಚೂಣಿಯಲ್ಲಿ ನಿಂತಿದ್ದ ಧನಂಜಯ ಪಂಜ ಕರುಂಬು ನೆಕ್ಕಿಲ, ಕೊಲೆಗೆ ಸಹಕಾರ ನೀಡಿದ ಚಂದ್ರಕಾಂತ್ ಕರುಂಬು ನೆಕ್ಕಿಲ, ದಿನೇಶ್ ಮಜಲಡ್ಕ ಕಾಯಿಮಣ ಮತ್ತು ಚಿಂತನ್ ಕೊಪ್ಪ ಚಾರ್ವಾಕ ಎಂಬವರನ್ನು ಬಂಧಿಸಿದ್ದಾರೆ. ಜಯಾನಂದರವರ ಪತ್ನಿ ಲಲಿತಾ ಹಾಗೂ ಧನಂಜಯರವರ ನಡುವೆ ಇದ್ದ ಅನೈತಿಕ ಸಂಭಂಧವೇ ಕೊಲೆಗೆ ಕಾರಣ ಎಂದು ತಿಳಿದು ಬಂದಿದೆ.
ಕಕ್ಯಾನ ಕಲ್ಕ ಜಯಾನಂದರವರು ಜುಲೈ ೧೪ ರಂದು ತಮ್ಮ ಮನೆಯಿಂದ ಬೈಕ್‌ನಲ್ಲಿ ಹೊರಟವರು ನಿಂತಿಕಲ್ಲಿನಿಂದ ಕಾಣಿಯೂರು ಗ್ರಾಮದ ಪುಣ್ಚತ್ತಾರಿನಲ್ಲಿರುವ ತಮ್ಮ ಸಹೋದರ ವಿಶ್ವನಾಥರವರಿಗೆ ಫೋನ್ ಕರೆ ಮಾಡಿ ತಾನು ಕೂವೆತ್ತೋಡಿಗೆ ಜೋತಿಷ್ಯರಲ್ಲಿಗೆ ಹೋಗಿ ಬರುತ್ತೇನೆಂದು ಹೇಳಿದ್ದವರು ಸಂಜೆ ತನಕ ಅವರು ಅಣ್ಣನ ಮನೆಗೂ ಬಾರದೆ, ಅವರ ಮನೆಗೂ ಹೋಗದೆ ನಾಪತ್ತೆಯಾಗಿದ್ದರು. ಸಂಬಂಧಿಕರು ಇವರ ಪತ್ತೆಗಾಗಿ ಹುಡುಕಾಡಿ ಪತ್ತೆಯಾಗದೇ ಇದ್ದ ಹಿನ್ನೆಲೆಯಲ್ಲಿ ಜಯಾನಂದರವರ ಪತ್ನಿ ಲಲಿತರವರು ಜು.೧೬ ರಂದು ಸುಬ್ರಹಣ್ಯ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದರು. ಜಯಾನಂದರವರ ನಿಗೂಢ ನಾಪತ್ತೆ ಹಲವು ಅನುಮಾನಗಳಿಗೆ ಎಡೆ ಮಾಡಿದ್ದರಿಂದ ವಿವಿದೆಡೆ ತೀವ್ರ ಹುಡುಕಾಟ ಆರಂಭವಾಗಿತ್ತು. ನಂತರ ಬೆಳ್ಳಾರೆ ಸಮೀಪದ ನೆಟ್ಟಾರಿನಲ್ಲಿ ಇವರ ಬೈಕ್ ಪತ್ತೆಯಾಗಿದ್ದು ಇದನ್ನು ಬೆಳ್ಳಾರೆ ಪೊಲೀಸರು ವಶಪಡಿಸಿಕೊಂಡಿದ್ದರು. ಜುಲೈ ೧೬ರಂದು ವಿಷಯ ತಿಳಿದ ಮನೆಯವರು ನೆಟ್ಟಾರಿನ ಪರಿಸರದಲ್ಲಿ ಜಯಾನಂದರವರಿಗಾಗಿ ಹುಡುಕಾಟ ನಡೆಸಿದರು. ಹಾಗಿದ್ದರೂ ಅವರ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ.
ಜಯಾನಂದರವರು ನಾಪತ್ತೆಯಾಗುವ ಘಟನೆ ನಡೆಯುವ ಒಂದು ತಿಂಗಳ ಹಿಂದೆ ರಾತ್ರಿ ವೇಳೆ ಜಯಾನಂದರವರು ಒಬ್ಬರೇ ತಮ್ಮ ಬೈಕಿನಲ್ಲಿ ಮನೆಗೆ ಹೋಗುತ್ತಿದ್ದ ವೇಳೆ ಅವರನ್ನು ಹಿಂಬಾಲಿಸಿದ ಜೀಪೊಂದು ಬೈಕಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಅಲ್ಪಸ್ವಲ್ಪ ಗಾಯಗೊಂಡಿದ್ದ ಜಯಾನಂದರವರು ಬಳಿಕ ಚೇತರಿಸಿಕೊಂಡಿದ್ದರು. ಈ ಬಗ್ಗೆ ಜಯಾನಂದರು ಪೊಲೀಸರಿಗೆ ದೂರು ನೀಡಿರಲಿಲ್ಲ. ಬೈಕ್‌ಗೆ ಡಿಕ್ಕಿ ಹೊಡೆದ ಜೀಪನ್ನು ಪಂಜದ ಕರುಂಬು ನೆಕ್ಕಿಲ ನಿವಾಸಿ ಧನಂಜಯ ಎಂಬವರು ಚಲಾಯಿಸಿಕೊಂಡಿದ್ದರು ಎಂಬ ವದಂತಿ ಪಂಜ ಪೇಟೆಯಲ್ಲಿ ಹರಡಿತ್ತು. ಇದರಿಂದ ಇವರ ಬಗ್ಗೆ ಜನರಲ್ಲಿ ಸಂಶಯ ಮೂಡಲಾರಂಭಿಸಿತ್ತು. ಪೊಲೀಸರು ಧನಂಜಯರವರ ಮೊಬೈಲ್ ಫೋನ್ ಕರೆಗಳ ಟ್ರಾಪ್ ಮಾಡಿದ್ದರೆನ್ನಲಾಗಿದ್ದು ಇದರಿಂದ ಕೆಲವೊಂದು ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಧನಂಜಯರವರ ಜತೆ ಸತತವಾಗಿ ಮೊಬೈಲ್ ಫೋನ್ ಮೂಲಕ ಮಾತನಾಡುತ್ತಿದ್ದ ಪಂಜ ಕರುಂಬು ನೆಕ್ಕಿಲು ನಿವಾಸಿ ಚಂದ್ರಕಾಂತ್ ಎಂಬವರನ್ನು ಪೊಲೀಸರು ಜು.೨೫ರಂದು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದರು. ಆದರೆ ಇವರಿಂದ ಯಾವುದೇ ಮಾಹಿತಿ ಲಭಿಸಲಿಲ್ಲ ಎನ್ನಲಾಗಿದೆ. ಚಂದ್ರಕಾಂತ್‌ರವರನ್ನು ತಮ್ಮ ವಶದಲ್ಲಿರಿಸಿಕೊಂಡು ಧನಂಜಯರವರಿಗೆ ಬಲೆ ಬೀಸಿದ ಪೊಲೀಸರು ಧನಂಜಯರವರು ಬೆಳಿಗ್ಗೆ ಪಂಜ ಹಾಲು ಸೊಸೈಟಿಗೆ ಹಾಲು ತೆಗೆದುಕೊಂಡು ಬರುತ್ತಾರೆ ಎಂಬ ಮಾಹಿತಿ ಕಲೆ ಹಾಕಿ ಅಲ್ಲಿಗೆ ಹೋಗಿದ್ದರು. ಈ ಸಂದರ್ಭ ಹಾಲು ಸೊಸೈಟಿ ಬಳಿ ಇದ್ದ ಧನಂಜಯವರು ಪೊಲೀಸ್ ಜೀಪನ್ನು ಕಂಡು ಅಲ್ಲಿಂದ ಮನೆಗೆ ಓಡಿ ಹೋಗಿದ್ದರು. ಆದರೂ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದರು. ಈ ವೇಳೆ ತಾವು ಜಯಾನಂದರವರನ್ನು ಕೊಲೆ ಮಾಡಿರುವುದಾಗಿ ಧನಂಜಯರವರು ಪೊಲೀಸರಿಗೆ ಮಾಹಿತಿ ನೀಡಿದ್ದು ಕೊಲೆ ನಡೆಸಲು ಜಯಾನಂದರವರ ಪತ್ನಿ ಲಲಿತಾರವರು ಪ್ರೇರಣೆ ನೀಡಿದ್ದರು ಎಂದು ಬಹಿರಂಗಪಡಿಸಿದರು. ಬಳಿಕ ಚಂದ್ರಕಾಂತ್‌ರವರ ವಿಚಾರಣೆ ಮುಂದುವರಿಸಿದಾಗ ತಾನೂ ಕೊಲೆ ಕೃತ್ಯದಲ್ಲಿ ಭಾಗಿಯಾಗಿರುವುದಾಗಿ ಪೊಲೀಸ್ ವಶದಲ್ಲಿದ್ದ ಚಂದ್ರಕಾಂತ್ ತಿಳಿಸಿದರು. ನಂತರ ಕೊಲೆಗೆ ಸಹಕಾರ ನೀಡಿದ ಚಾರ್ವಾಕ ಕೊಪ್ಪ ನಿವಾಸಿ ಚಿಂತನ್, ಕಾಯಿಮಣ ಗ್ರಾಮದ ಮಜಲಡ್ಕ ದಿನೇಶ ಮತ್ತು ಕೊಲೆಗೆ ಪ್ರೇರಣೆ ನೀಡಿದ ಲಲಿತಾರವರನ್ನು ಪೊಲೀಸರು ಬಂಧಿಸಿದರು. ಐವರೂ ಆರೋಪಿಗಳನ್ನು ಜಯಾನಂದರವರ ಶವ ಪತ್ತೆಯಾದ ಕಾಡಿಗೆ ಕರೆದುಕೊಂಡು ಬಂದು ಪೊಲೀಸರು ವಿಚಾರಣೆ ನಡೆಸಿದರು. ಸುಳ್ಯ ವೃತ್ತ ನಿರೀಕ್ಷಕ ಬಿ.ಎಸ್. ಸತೀಶ್ ನೇತೃತ್ವದಲ್ಲಿ ಘಟನಾ ಸ್ಥಳದಲ್ಲಿಯೇ ಸುಳ್ಯ ಆರೋಗ್ಯ ಕೇಂದ್ರದ ವೈದ್ಯರು ಮೃತ ಶರೀರದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಬಿಟ್ಟು ಕೊಟ್ಟಿದ್ದಾರೆ. ಕೊಲೆ ಆರೋಪಿಗಳ ಪೈಕಿ ಮಜಲಡ್ಕ ದಿನೇಶನು ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮಹಿಳೆಯೋರ್ವರ ಕರಿಮಣಿ ಅಪಹರಿಸಿದ ಪ್ರಕರಣದ ಆರೋಪಿ ಎಂದು ತಿಳಿದು ಬಂದಿದೆ.
ಶವ ಪತ್ತೆಯಾದ ಸ್ಥಳದಲ್ಲಿ ಕಾಣಿಯೂರು, ಪುಣ್ಚತ್ತಾರು, ಪಂಜ, ಬೆಳ್ಳಾರೆ, ಸವಣೂರು ಮುಂತಾದ ಕಡೆಗಳಿಂದ ನೂರಾರು ಮಂದಿ ಜಮಾಯಿಸಿದ್ದರು. ಶವ ಎಲ್ಲಿ ಇದೆ ಎಂದು ಪೊಲೀಸರು ಆರಂಭದಲ್ಲಿ ಮಾಹಿತಿ ನೀಡದೇ ಇದ್ದುದರಿಂದ ಪತ್ರಕರ್ತರು ಹಾಗೂ ಸಾರ್ವಜನಿಕರು ಕಾಡಿನ ವಿವಿದೆಡೆ ತಿರುಗಾಡಿದ್ದರು. ಸರ್ಕಲ್ ಇನ್ಸ್‌ಪೆಕ್ಟರ್ ಆಗಮಿಸಿದ ಬಳಿಕ ಶವ ಇರುವ ಸ್ಥಳದ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಎಸ್ ಪಿ ಡಾ| ಶರಣಪ್ಪ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ನಾಪತ್ತೆ ಪ್ರಕರಣ ಇದೀಗ ಕೊಲೆ ಕೇಸಾಗಿ ಪರಿವರ್ತಿಸಲ್ಪಟ್ಟಿದೆ.
ಕೂವೆತ್ತೋಡಿ ಜೋತಿಷ್ಯರಲ್ಲಿಗೆ ಹೊರಟಿದ್ದ ಜಯಾನಂದರನ್ನು ಅರ್ಧ ದಾರಿಯಲ್ಲಿ ಅಪಹರಿಸಿ ವಾಹನವೊಂದರಲ್ಲಿ ಕರೆದುಕೊಂಡು ಬಂದು ಒಡ್ಯ ಕಾಡಿನಲ್ಲಿ ಅವರ ಕುತ್ತಿಗೆಗೆ ಹಗ್ಗದಿಂದ ಬಿಗಿದು ಕೊಲೆ ಮಾಡಲಾಗಿದೆ. ಧನಂಜಯ ಮತ್ತು ಜಯಾನಂದರವರ ಪತ್ನಿ ಲಲಿತಾರವರ ನಡುವೆ ಇದ್ದ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದುದರಿಂದ ಜಯಾನಂದರವರನ್ನು ಕೊಲೆ ಮಾಡಲಾಗಿದೆ, ಲಲಿತಾರವರು ಪ್ರೇರಣೆ ನೀಡಿದ ಪ್ರಕಾರ ಜಯಾನಂದರವರ ಚಲನವಲನದ ನಿಗಾ ಇರಿಸಿ ಧನಂಜಯರವರು ಕೊಲೆಗೆ ಯೋಜನೆ ರೂಪಿಸಿದ್ದು ಉಳಿದ ಮೂವರು ಆರೋಪಿಗಳು ಈ ಕೃತ್ಯಕ್ಕೆ ಕೈ ಜೋಡಿಸಿದ್ದಾರೆ ಎಂದು ಪೊಲೀಸರು ಪ್ರಥಮ ವರ್ತಮಾನ ವರದಿ ಸಿದ್ಧಪಡಿಸಿದ್ದಾರೆ.

20150729050727

20150729045447

kalka jayananda kole-bayalu (1)

kalka jayananda kole-bayalu (2)

20150729041601

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.