ಪ್ರಶಸ್ತಿ ಪುರಸ್ಕಾರ – ಸುದ್ದಿ ಸುಳ್ಯ https://sullia.suddinews.com ಸದಾ ಹೊಸತನ... Tue, 27 Sep 2022 07:26:12 +0000 en-US hourly 1 https://wordpress.org/?v=5.5.10 ಪಂಜದ ಅನ್ವಿತಾ ಶೆಟ್ಟಿ ಯೋಗಾಸನದಲ್ಲಿ ನೊಬೆಲ್ ವಿಶ್ವ ದಾಖಲೆ https://sullia.suddinews.com/archives/615625 https://sullia.suddinews.com/archives/615625#respond Tue, 27 Sep 2022 07:26:12 +0000 http://sullia.suddinews.com/?p=615625 ದಾವಣಗೆರೆಯ ಸಪ್ತಋಷಿ ಯೋಗಾಸನ ಕ್ರೀಡಾ ಅಕಾಡೆಮಿ ವಾರ್ಷಿಕೋತ್ಸವದಂದು ನಡೆದ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 80 ವಿದ್ಯಾರ್ಥಿಗಳಲ್ಲಿ
ಕಡಬ ಸೈಂಟ್ ಆನ್ಸ್ ಸ್ಕೂಲ್ ನ 3ನೇ ತರಗತಿ ವಿದ್ಯಾರ್ಥಿನಿ ಪಂಜದ ಅನ್ವಿತಾ ಶೆಟ್ಟಿ ವೃಕ್ಷಾಸನ, ಉತ್ಕಟಾಸನ, ಧನುರ್ ಆಸನ, ಸರ್ವಾಂಗಾಸನದಲ್ಲಿ ನಿರಂತರ 120 ಸೆಕೆಂಡುಗಳ ಕಾಲ ಯೋಗ ಪ್ರದರ್ಶಿಸಿ ನೊಬೆಲ್ ವರ್ಲ್ಡ್ ರೆಕಾರ್ಡ್ ಬುಕ್ ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾಳೆ.


ನಿರಂತರ ಯೋಗ ಕೇಂದ್ರ ಪಂಜ ಇದರ ಯೋಗ ಶಿಕ್ಷಕ ಶರತ್ ಮರ್ಗಿಲಡ್ಕ ರವರ ಶಿಷ್ಯೆಯಾಗಿರುವ ಇವಳು. ಪಂಜದ ಪಲ್ಲೋಡಿ ಜಗನಾಥ್ ಶೆಟ್ಟಿ ಮತ್ತು ಶ್ರೀಮತಿ ಜಯಲಕ್ಷ್ಮಿ. ಜೆ. ಶೆಟ್ಟಿ ರವರ ಪುತ್ರಿ.

]]>
https://sullia.suddinews.com/archives/615625/feed 0
ಯೋಗಾಸನದಲ್ಲಿ ನಂದನ್ ಪಲ್ಲೋಡಿ  ನೊಬೆಲ್ ವಲ್ಡ್ ರೆಕಾರ್ಡ್ 2022 https://sullia.suddinews.com/archives/615621 https://sullia.suddinews.com/archives/615621#respond Tue, 27 Sep 2022 07:22:29 +0000 http://sullia.suddinews.com/?p=615621 ಯೋಗಾಸನದಲ್ಲಿ ಪಂಜದ ನಂದನ್ ಪಲ್ಲೋಡಿ ನೋಬೆಲ್ ವರ್ಲ್ಡ್ ರೆಕಾರ್ಡ್ ಸಾಧನೆ ಮಾಡಿದ್ದಾನೆ. ಈತಯೋಗಶಿಕ್ಷಕರಾದ ಶರತ್ ಮರ್ಗಿಲಡ್ಕರವರ ಜೊತೆ ಮಾರ್ಗದರ್ಶನ ಪಡೆಯುತ್ತಿದ್ದು,ಪಂಜ ಸರಕಾರಿ ಶಾಲೆಯಲ್ಲಿ4 ನೇ ತರಗತಿಯಲ್ಲಿ ವ್ಯಾಸಂಗ ಮಾಡುತಿದ್ದಾನೆ.

ಇವರು ಪಂಜದ ಪಲ್ಲೋಡಿಅಶೋಕ್ ಮತ್ತು ಶ್ರೀಮತಿ ನಮಿತಾ ಅಶೋಕ್ ರವರ ಪುತ್ರ.

]]>
https://sullia.suddinews.com/archives/615621/feed 0
ಯೋಗಾಸನದಲ್ಲಿ ಸಾನ್ವಿ ದೊಡ್ಡಮನೆಗೆ ನೊಬೆಲ್ ವರ್ಲ್ಡ್ ರೆಕಾರ್ಡ್ 2022 https://sullia.suddinews.com/archives/615613 https://sullia.suddinews.com/archives/615613#respond Tue, 27 Sep 2022 07:16:10 +0000 http://sullia.suddinews.com/?p=615613 ಯೋಗಾಸನದಲ್ಲಿ ಸಾನ್ವಿ ದೊಡ್ಡಮನೆ ನೊಬೆಲ್ ವರ್ಲ್ಡ್ ರೆಕಾರ್ಡ್ – 2022 ಕ್ಕೆ ಭಾಜನರಾಗಿದ್ದು, ಭಾರತದಿಂದ ಪ್ರಸ್ತುತಪಡಿಸಲಾದ ಇಂಟರ್ನ್ಯಾಷನಲ್ ಎಕ್ಸಲೆನ್ಸ್ ಯೋಗಾಸನ ಪ್ಲೇಯರ್ -2022 ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.


ಈಕೆ ಯೋಗಗುರುಗಳಾದ ಶರತ್ ಮರ್ಗಿಲಡ್ಕ ನಿರಂತರ ಯೋಗ ಕೇಂದ್ರ ಸುಳ್ಯ ಇವರೊಂದಿಗೆ ಯೋಗತರಬೇತಿ ಪಡೆಯುತ್ತಿದ್ದಾರೆ ಹಾಗೂ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ 5 ನೇ ತರಗತಿ ವಿದ್ಯಾರ್ಥಿ. ಕಡಬದ ಶ್ರೀ ಮೂಕಾಂಬಿಕಾ ಮಾರುತಿ ಆಟೋ ವರ್ಕ್ಸ್ ನ ಮಾಲಕರಾದ ಪಂಜದ ನಿತ್ಯಾನಂದ ದೊಡ್ಡಮನೆ ಹಾಗೂ ಸೀತಾಲಕ್ಷ್ಮಿ ದಂಪತಿಯ ಪುತ್ರಿ.

]]>
https://sullia.suddinews.com/archives/615613/feed 0
ಗಾಂಧಿ ಗ್ರಾಮ ಪುರಸ್ಕಾರಕ್ಕೆ ಸಂಪಾಜೆ ಗ್ರಾ.ಪಂ. ಆಯ್ಕೆ https://sullia.suddinews.com/archives/614777 https://sullia.suddinews.com/archives/614777#respond Sat, 24 Sep 2022 04:38:42 +0000 http://sullia.suddinews.com/?p=614777 ಗಾಂಧಿ ಗ್ರಾಮ ಪುರಸ್ಕಾರಕ್ಕೆ ಕಳೆದ ವರ್ಷ ಆಯ್ಕೆಯಾಗಿದ್ದ ಸಂಪಾಜೆ ಗ್ರಾಮ ಪಂಚಾಯತ್ ಸೇರಿ ರಾಜ್ಯದ 176 ಗ್ರಾಮ ಪಂಚಾಯತ್‌ಗಳಿಗೆ ಪ್ರಶಸ್ತಿ ಮೊತ್ತ ತಲಾ 5 ಲಕ್ಷದಂತೆ ರಾಜ್ಯ ಸರಕಾರ ಬಿಡುಗಡೆ ಮಾಡಿದೆ.

2020-21ನೇ ಸಾಲಿನಲ್ಲಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಕಳೆದ ವರ್ಷವೇ ಗ್ರಾಮ ಪಂಚಾಯತ್‌ಗಳನ್ನು ಆಯ್ಕೆ ಮಾಡಲಾಗಿದ್ದರೂ ಪ್ರಶಸ್ತಿ ಮೊತ್ತ ಬಿಡುಗಡೆ ಮಾಡಿರಲಿಲ್ಲ ಮತ್ತು ಪ್ರಶಸ್ತಿ ಪ್ರದಾನ ನಡೆಯಲಿಲ್ಲ.  ಸುಳ್ಯ ತಾಲೂಕಿನ ಸಂಪಾಜೆ ಸೇರಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಐದು ಪಂಚಾಯತ್‌ಗಳು ಗಾಂಧಿಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದೆ. ರಾಜ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಗ್ರಾಮ ಪಂಚಾಯಿತಿಗಳನ್ನು ಪ್ರೋತ್ಸಾಹಿಸಲು 2013-14ನೇ ಸಾಲಿನಿಂದ ಪ್ರತಿ ತಾಲೂಕಿಗೆ ಒಂದರಂತೆ ಗ್ರಾಮ ಪಂಚಾಯತಿಯನ್ನು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಮಾಡಿ ತಲಾ ರೂ.5 ಲಕ್ಷಗಳ ಪ್ರೋತ್ಸಾಹ ಧನ ನೀಡಿ ಗೌರವಿಸಲಾಗುತ್ತಿದೆ. 250 ಅಂಕಗಳ ಪುಶ್ನಾವಳಿಗಳಿಗೆ ಉತ್ತರಿಸುವ ಮೂಲಕ ರಾಜ್ಯದ ಗ್ರಾಮ ಪಂಚಾಯತಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ. ಅತೀ ಹೆಚ್ಚು ಅಂಕಗಳನ್ನು ಗಳಿಸಿರುವ ತಾಲೂಕಿನ ಐದು ಗ್ರಾಮ ಪಂಚಾಯತಿಗಳನ್ನು ಪ್ರಾಥಮಿಕ ಹಂತದಲ್ಲಿ ಆಯ್ಕೆ ಮಾಡಿ, ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕಳುಹಿಸಲಾಗಿತ್ತು. ಜಿಲ್ಲಾ ಮಟ್ಟದ ಅಧಿಕಾರಿಗಳ ನೇತೃತ್ವದ ತಂಡವು ಮಾರ್ಗಸೂಚಿಗಳನಸಾರ ಸ್ಥಳ, ದಾಖಲೆಗಳನ್ನು ಪರಿಶೀಲನೆ ಮಾಡಿ ವರದಿಯನ್ನು ಜಿಲ್ಲಾ ಪಂಚಾಯಿತಿಗೆ ಸಲ್ಲಿಸಲಾಗಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದ ಆಯ್ಕೆ ಸಮಿತಿಯು 176 ತಾಲೂಕುಗಳಿಗೆ ಮಿತಿಗೊಳಿಸಿ, ತಾಲ್ಲೂಕಿಗೆ ಒಂದರಂತೆ ಗ್ರಾಮ ಪಂಚಾಯತಿಗಳನ್ನು ಗಾಂಧಿ ಗ್ರಾಮ ಪುರಸ್ಕಾರಕ್ಕಾಗಿ ಆಯ್ಕೆ ಮಾಡಿ ಶಿಫಾರಸ್ಸು ಮಾಡಲಾಗಿತ್ತು.

]]>
https://sullia.suddinews.com/archives/614777/feed 0
ಸುಳ್ಯ ತಾಲೂಕು ಭಜನಾ ಪರಿಷತ್ತಿನ ಗೌರವಾಧ್ಯಕ್ಷ ಅರ್ಗುಡಿ ವಿಶ್ವನಾಥ ರೈಯವರಿಗೆ ಧರ್ಮಸ್ಥಳದಲ್ಲಿ ಹಿರಿಯ ಸಾಧಕ ಭಜಕ ಪ್ರಶಸ್ತಿ ಪ್ರದಾನ https://sullia.suddinews.com/archives/614665 https://sullia.suddinews.com/archives/614665#respond Fri, 23 Sep 2022 08:23:41 +0000 http://sullia.suddinews.com/?p=614665  

ಸುಳ್ಯ ತಾಲೂಕು ಭಜನಾ ಪರಿಷತ್ ನ ಸ್ಥಾಪಕಾಧ್ಯಕ್ಷರು, ಬೀದಿಗುಡ್ಡೆಯ ಸಿದ್ಧಿವಿನಾಯಕ ಭಜನಾ ಮಂಡಳಿ ಸಂಪ್ಯಾಡಿ ಇದರ ಸ್ಥಾಪಕಾಧ್ಯಕ್ಷ ಅರ್ಗುಡಿ ವಿಶ್ವನಾಥ ರೈಯವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ಭಜನಾ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಧರ್ಮಾಧಿಕಾರಿ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಡಡೆಯವರು ಹಿರಿಯ ಸಾಧಕ ಭಜಕ ಪ್ರಶಸ್ತಿಯನ್ನು ನೀಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಾಣಿಲ ಕ್ಷೇತ್ರದ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶೀರ್ವದಿಸಿದರು.


ಇವರು ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನ ಸೇರಿದಂತೆ ಬಳ್ಪ ಗ್ರಾಮದ ಹಲವು ದೇವಸ್ಥಾನಗಳ ಜೀರ್ಣೋದ್ಧಾರ, ಬ್ರಹ್ಮ ಕಲಶೋತ್ಸವ ಸಮಿತಿ, ಜಾತ್ರಾ ಸಮಿತಿಗಳಲ್ಲಿ ಪದಾಧಿಕಾರಿಯಾಗಿ ದುಡಿದು ಧಾರ್ಮಿಕ, ಕೃಷಿ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿದ್ದರು. ಪ್ರಸ್ತುತ
ಸುಳ್ಯ ತಾಲೂಕು ಭಜನಾ ಪರಿಷತ್ತಿನ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ದ.ಕ., ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳ 15 ತಾಲೂಕುಗಳಲ್ಲಿ 15 ಸಾಧಕರನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಸುಳ್ಯ ತಾಲೂಕಿನಲ್ಲಿ ವಿಶ್ವನಾಥ ರೈಯವರು ಪ್ರಥಮವಾಗಿ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

]]>
https://sullia.suddinews.com/archives/614665/feed 0
ಮಂಗಳೂರು ವಿಶ್ವವಿದ್ಯಾನಿಲಯದ ಸಂಸ್ಥಾಪನಾ ದಿನಾಚರಣೆಯ ಸನ್ಮಾನಕ್ಕೆ ಡಾ. ರವಿ ಕಕ್ಕೆಪದವು ಆಯ್ಕೆ https://sullia.suddinews.com/archives/614662 https://sullia.suddinews.com/archives/614662#respond Fri, 23 Sep 2022 07:34:17 +0000 http://sullia.suddinews.com/?p=614662  

ಮಂಗಳೂರು ವಿಶ್ವವಿದ್ಯಾನಿಲಯದ ಸಂಸ್ಥಾಪನಾ ದಿನಾಚರಣೆ ಸಂದರ್ಭದಲ್ಲಿ ಸಮಾಜಸೇವಕ ಸುಬ್ರಹ್ಮಣ್ಯದ ಉದ್ಯಮಿ ಡಾ. ರವಿ ಕಕ್ಕೆಪದವುರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ವಿಶ್ವವಿದ್ಯಾಲಯ ಪ್ರತೀ ವರ್ಷ ಸಂಸ್ಥಾಪನಾ ದಿನಾಚರಣೆ ಆಚರಿಸಿಕೊಂಡು ಬರುತ್ತಿದ್ದು, ಈ ವರ್ಷದ ಕಾರ್ಯಕ್ರಮ ಸೆ. 29ರಂದು ಮಂಗಳ ಗಂಗೋತ್ರಿಯ ಮಂಗಳ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಸನ್ಮಾನ ನಡೆಯಲಿದ್ದು, ಡಾ. ರವಿ ಕಕ್ಕೆಪದವುರವರ ಸಮಾಜ ಸೇವೆಯನ್ನು ಗುರುತಿಸಿ ಸನ್ಮಾನ ನಡೆಯಲಿದೆ.

]]>
https://sullia.suddinews.com/archives/614662/feed 0
ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸ್ಕ್ಯಾಡ್ಸ್ ಪ್ರಥಮ ಸ್ಥಾನ- ಪ್ರಶಸ್ತಿ https://sullia.suddinews.com/archives/614388 https://sullia.suddinews.com/archives/614388#respond Thu, 22 Sep 2022 04:29:45 +0000 http://sullia.suddinews.com/?p=614388  


ಮಂಗಳೂರಿನಲ್ಲಿ ಸೆ.21 ರಂದು ಜರುಗಿದ ದಕ್ಷಿಣ ಕನ್ನಡ ಕೃಷಿ ಅಭಿವೃದ್ಧಿ ಸಹಕಾರ ಸಂಘ ಮಂಗಳೂರು ಇದರ ವಾರ್ಷಿಕ ಮಹಾಸಭೆಯಲ್ಲಿ 2021 22ನೇ ಸಾಲಿನಲ್ಲಿ ಅತ್ಯಧಿಕ ಮೌಲ್ಯದ ಕೃಷಿ ಯಂತ್ರೋಪಕರಣ ಹಾಗೂ ಬಿಡಿಭಾಗಗಳನ್ನು ಖರೀದಿಸಿ ಸದಸ್ಯರಿಗೆ ವಿತರಿಸುವಲ್ಲಿ ತಾಲೂಕು ಕ್ಷೇತ್ರದಲ್ಲಿ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪ್ರಥಮ ಸ್ಥಾನ -ಪ್ರಶಸ್ತಿ ಲಭಿಸಿದೆ. ಮಂಗಳೂರಿನಲ್ಲಿ ನಡೆದ ಮಹಾಸಭೆಯಲ್ಲಿ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ದ ಅಧ್ಯಕ್ಷ ಸುಬ್ರಹ್ಮಣ್ಯ ಕುಳ, ಮುಖ್ಯ ಕಾರ್ಯನಿರ್ವಣಾಧಿಕಾರಿ ನೇಮಿರಾಜ ಪಲ್ಲೋಡಿ‌ ಯವರನ್ನು ಅಭಿನಂದನಾ ಪತ್ರ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ನಿರ್ದೇಶಕ ಗಣೇಶ್ ಪೈ ಉಪಸ್ಥಿತರಿದ್ದರು..

]]>
https://sullia.suddinews.com/archives/614388/feed 0
ಆರು ಮಂದಿ ಶಿಕ್ಷಕರಿಗೆ ‘ಮಲೆನಾಡು ಸಿರಿ’ ಶಿಕ್ಷಕ ಪ್ರಶಸ್ತಿ ಪ್ರದಾನ https://sullia.suddinews.com/archives/614293 https://sullia.suddinews.com/archives/614293#respond Wed, 21 Sep 2022 11:03:03 +0000 http://sullia.suddinews.com/?p=614293  

 

ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೀಡಲಾಗುವ ‘ಮಲೆನಾಡು ಸಿರಿ’ ಶಿಕ್ಷಣ ಪ್ರಶಸ್ತಿ ಪ್ರದಾನ ಸಮಾರಂಭ ಸೆ.21 ರಂದು ಸುಳ್ಯದ ಸಂಧ್ಯಾರಶ್ಮಿ ಸಭಾಂಗಣದಲ್ಲಿ ನಡೆಯಿತು.

 

ಪ್ರಶಸ್ತಿಗೆ ಆಯ್ಕೆಯಾಗಿರುವ ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು ಶಿಕ್ಷಕ ಚಂದ್ರಶೇಖರ ಕೆ.ಎಸ್., ಸಂಪಾಜೆ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಜಯಶ್ರೀ, ಸುಳ್ಯ ರೋಟರಿ ವಿದ್ಯಾಸಂಸ್ಥೆ ಶಿಕ್ಷಕಿ ಉಷಾ, ಕೋಲ್ಚಾರ್ ಪ್ರಾಥಮಿಕ ಶಾಲಾ ಶಿಕ್ಷಕಿ ಜಲಜಾಕ್ಷಿ ಡಿ, ಸುಳ್ಯ ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯ ದೈ.ಶಿ.ಶಿಕ್ಷಕ ಕೊರಗಪ್ಪ, ಕೊಲ್ಲಮೊಗ್ರ ಅಂಗನವಾಡಿ ಕಾರ್ಯಕರ್ತೆ ನಳಿನಿಯವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮಲೆನಾಡು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಿಯಾಜ್ ಕಟ್ಟೆಕಾರ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ತಹಶೀಲ್ದಾರ್ ಅನಿತಾಲಕ್ಷ್ಮೀ ಉದ್ಘಾಟಿಸಿದರು.

 

ತಾ.ಪಂ. ಇ.ಒ. ಭವಾನಿಶಂಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ. ಮಹಾದೇವ, ನ.ಪಂ.ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ನ.ಪಂ. ಮಾಜಿ ಅಧ್ಯಕ್ಷ ಎಸ್.ಸಂಶುದ್ದೀನ್,  ಶರೀಫ್ ಕಂಠಿ,ನ.ಪಂ. ಸದಸ್ಯ ರಿಯಾಜ್ ಕಟ್ಟೆಕಾರ್, ಸಿಡಿಪಿಒ ಶ್ರೀಮತಿ ರಶ್ಮಿ ನೆಕ್ರಾಜೆ, ಕ್ಷೇತ್ರ ಸಮನ್ವಯಾಧಿಕಾರಿ ಶ್ರೀಮತಿ ಶೀತಲ್, ಸುಳ್ಯ ಸುದ್ದಿ ಬಿಡುಗಡೆ ಸಂಸ್ಥೆ ಕಚೇರಿ ಮ್ಯಾನೇಜರ್ ಯಶ್ವಿತ್ ಕಾಳಮ್ಮನೆ, ಜನತಾ ಗ್ರೂಪ್ ನ ಹಮೀದ್ ಜನತಾ, ಕೆ.ಎಫ್.ಡಿ.ಸಿ. ಅಧಿಕಾರಿ ಚಿಕ್ಕಮುತ್ತಯ್ಯ ವೇದಿಕೆಯಲ್ಲಿದ್ದರು.  ಖಾಲಿದ್ ಟಿ.ಎಂ., ಶಹೀದ್ ಪಾರೆ, ಗಣೇಶ್ ನಾಗಪಟ್ಟಣ, ಶಿಯಾಬ್ ಕೇರ್ಪಳ , ಇಬ್ರಾಹಿಂ ಕೆ.ಬಿ. ಇದ್ದರು.

ಪತ್ರಕರ್ತ ಸಂಘದ ಶರೀಫ್ ಜಟ್ಟಿಪಳ್ಳ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಣ ಸಂಯೋಜಕ ಚಂದ್ರಶೇಖರ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಆಶಾ ಅಂಬೆಕಲ್ಲು ಸನ್ಮಾನಿತರನ್ನು ಪರಿಚಯಿಸಿದರು.
ಮಲೆನಾಡು ಚಾರಿಟೇಬಲ್ ಟ್ರಸ್ಟ್ ನಿರ್ದೇಶಕ ಸಿದ್ದೀಕ್ ಕೊಕ್ಕೊ ಸಹಕರಿಸಿದರು.

]]>
https://sullia.suddinews.com/archives/614293/feed 0
ಮಂಡೆಕೋಲು ಸಹಕಾರಿ ಸಂಘಕ್ಕೆ ಸ್ಕ್ಯಾಡ್ಸ್ ಪ್ರಶಸ್ತಿ https://sullia.suddinews.com/archives/614263 https://sullia.suddinews.com/archives/614263#respond Wed, 21 Sep 2022 09:21:19 +0000 http://sullia.suddinews.com/?p=614263

ದಕ್ಷಿಣ ಕನ್ನಡ ಕೃಷಿ ಅಭಿವೃದ್ಧಿ ಸಹಕಾರ ಸಂಘ ನಿಯಮಿತ ಮಂಗಳೂರು ಇದರ ವಾರ್ಷಿಕ ಮಹಾಸಭೆಯಲ್ಲಿ 2021/22 ನೇ ಸಾಲಿನಲ್ಲಿ ಅತ್ಯಂತ ಹೆಚ್ಚಿನ ವ್ಯಾಪಾರ ವಹಿವಾಟು ನಡೆಸಿರುವ ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸ್ಕ್ಯಾಡ್ಸ್ ಪ್ರಶಸ್ತಿ ಲಭಿಸಿದೆ.
ಸೆ.21 ರಂದು ಮಂಗಳೂರಿನಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮಂಡೆಕೋಲು ಸಹಕಾರಿ ಸಂಘದ ಅಧ್ಯಕ್ಷ ರಾಮಕೃಷ್ಣ ಪೇರಾಲುಗುತ್ತು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್ ಪ್ರಶಸ್ತಿ ಸ್ವೀಕರಿಸಿದರು.

]]>
https://sullia.suddinews.com/archives/614263/feed 0
ಆರು ಮಂದಿ ಶಿಕ್ಷಕರಿಗೆ ಮಲೆನಾಡ ಸಿರಿ ಶಿಕ್ಷಕ ಪ್ರಶಸ್ತಿ https://sullia.suddinews.com/archives/613062 https://sullia.suddinews.com/archives/613062#respond Fri, 16 Sep 2022 10:50:17 +0000 http://sullia.suddinews.com/?p=613062  

ಸುಳ್ಯದ ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಆರು ಮಂದಿ ಶಿಕ್ಷಕರಿಗೆ ಮಲೆನಾಡ ಸಿರಿ ಶಿಕ್ಷಕ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

 

 

ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು ಸಹಶಿಕ್ಷಕ ಚಂದ್ರಶೇಖರ ಕೆ.ಎಸ್., ಸಂಪಾಜೆ ಸರಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಜಯಶ್ರೀ, ಸುಳ್ಯ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ದೈಹಿಕ ಶಿಕ್ಷಣ ಶಿಕ್ಷಕ ಕೊರಗಪ್ಪ, ಸುಳ್ಯ ರೋಟರಿ ಆಂಗ್ಲ ಮಾಧ್ಯಮ ಪ್ರೌಢಶಾಲಾ ಶಿಕ್ಷಕಿ ಶ್ರೀಮತಿ ಉಷಾ, ಕೋಲ್ಚಾರ್ ಸರಕಾರಿ ಶಾಲಾ ಸಹಶಿಕ್ಷಕಿ ಶ್ರೀಮತಿ ಜಲಜಾಕ್ಷಿ ಕೆ.ಡಿ., ಹಾಗೂ ಕೊಲ್ಲಮೊಗ್ರು ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ನಳಿನಿ ಯವರನ್ನು ಪ್ರಶಸ್ತಿ ಗೆ ಆಯ್ಕೆ ಮಾಡಲಾಗಿದೆ ಎಂದು ಮಲೆನಾಡು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಿಯಾಜ್ ಕಟ್ಟೆಕಾರ್, ನಿರ್ದೇಶಕ ಸಿದ್ದಿ ಕೊಕ್ಕೋ ತಿಳಿಸಿದ್ದಾರೆ.

]]>
https://sullia.suddinews.com/archives/613062/feed 0