ಧಾರ್ಮಿಕ – ಸುದ್ದಿ ಸುಳ್ಯ https://sullia.suddinews.com ಸದಾ ಹೊಸತನ... Tue, 27 Sep 2022 11:49:34 +0000 en-US hourly 1 https://wordpress.org/?v=5.5.10 ಕೇರ್ಪಡ  : ನವರಾತ್ರಿ ಉತ್ಸವ https://sullia.suddinews.com/archives/615813 https://sullia.suddinews.com/archives/615813#respond Tue, 27 Sep 2022 11:49:34 +0000 http://sullia.suddinews.com/?p=615813

ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಸೆ.25 ರಂದು ಆರಂಭಗೊಂಡು, ಇಂದು ಮೂರನೇ‍ ದಿನದ ವಿಶೇಷ ನವರಾತ್ರಿ ಉತ್ಸವ ನಡೆಯಲಿದೆ.

ಸೆ.26 ರಿಂದ ಬೆಳಿಗ್ಗೆ ಮಧ್ಯಾಹ್ನ ರಾತ್ರಿ ವಿಶೇಷ ಪೂಜೆ, ರಂಗಪೂಜೆ ನಡೆಯಲಿದ್ದು, ಸೇವಾ ಪೂಜೆಗಳು ಹಾಗೂ ಭಜನಾ ಕಾರ್ಯಕ್ರಮ ನಡೆಯುತ್ತಿದೆ.

]]>
https://sullia.suddinews.com/archives/615813/feed 0
ಮಿನುಂಗೂರು ದೇವಸ್ಥಾನದಲ್ಲಿ ಚಂಡಿಕಾಯಾಗ https://sullia.suddinews.com/archives/615788 https://sullia.suddinews.com/archives/615788#respond Tue, 27 Sep 2022 11:16:32 +0000 http://sullia.suddinews.com/?p=615788

ಮರ್ಕಂಜ ಹಾಗೂ ನೆಲ್ಲೂರು ಕೆಮ್ರಾಜೆ ಗ್ರಾಮಗಳ ಪಂಚಸ್ಥಾಪನೆಗಳ ಮಿನುಂಗೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಚಂಡಿಕಾಯಾಗ ವು ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಇಂದು ನಡೆಯಿತು. ‌


ಈ ಸಂದರ್ಭದಲ್ಲಿ ದೇವಸ್ಥಾನದ ವಿವಿಧ ಸಮಿತಿಗಳ ಅಧ್ಯಕ್ಷ ರು ಪದಾಧಿಕಾರಿಗಳು ಸೇರಿದಂತೆ ದೇವಾಲಯದ ಭಕ್ತಾಧಿಗಳು ಉಪಸ್ಥಿತರಿದ್ದರು.

]]>
https://sullia.suddinews.com/archives/615788/feed 0
ನೆಲ್ಲಿಕುಮೇರಿ ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನದಲ್ಲಿ ನವರಾತ್ರಿ ಉತ್ಸವಕ್ಕೆ ಚಾಲನೆ https://sullia.suddinews.com/archives/615612 https://sullia.suddinews.com/archives/615612#respond Tue, 27 Sep 2022 07:25:21 +0000 http://sullia.suddinews.com/?p=615612 ನೆಲ್ಲಿಕುಮೇರಿ ಶ್ರೀ ಮುತ್ತುಮಾರಿಯಮ್ಮ ದೇವಸ್ಥಾನದ 10ನೇ ವರ್ಷದ ನವರಾತ್ರಿ ಉತ್ಸವಕ್ಕೆ ಆಡಳಿತ ಸಮಿತಿ ಗೌರವಾಧ್ಯಕ್ಷ ರಾಜಾರಾಮ್ ಕೀಲಾರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.


ಆಡಳಿತ ಸಮಿತಿಯ ಮೊಕ್ತೇಸರ ಪಳನಿವೇಲು, ನಿಕಟ ಪೂರ್ವ ಅಧ್ಯಕ್ಷ ವಿ. ಜ್ಞಾನಶೀಲನ್, ಅಧ್ಯಕ್ಷ ರಮೇಶ್, ಸದಸ್ಯ ಸತೀಶ, ಶ್ರೀ ಮಹಾವಿಷ್ಣುಮೂರ್ತಿ ದೇವಳದ ಅಧ್ಯಕ್ಷ ಗ್ರಾ.ಪಂ. ಸದಸ್ಯ ಜಗದೀಶ್, ಲಯನ್ಸ್ ಕ್ಲಬ್ ಪದಾಧಿಕಾರಿಗಳು ಹಾಗೂ ಉದ್ಯಮಿಗಳಾದ ಕಿಶೋರ್ ಕುಮಾರ್ ಮತ್ತು ಭಕ್ತಾಧಿಗಳು ಉಪಸ್ಥಿತರಿದ್ದರು.

ಸೆ. 26 ರಿಂದ ಅ. 04 ರ ವರೆಗೆ ವಿವಿಧ ವೈಧಿಕ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿಜೃಂಭಣೆಯಿಂದ ನವರಾತ್ರಿ ಉತ್ಸವವು ಜರಗಲಿರುವುದು ಎಂದು ಆಡಳಿತ ಸಮಿತಿ ತಿಳಿಸಿದೆ.

]]>
https://sullia.suddinews.com/archives/615612/feed 0
ಕಾಯರ್ತೋಡಿ ಶ್ರೀ ವರದಾಯಿನಿ ವ್ಯಾಘ್ರ ಚಾಮುಂಡಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಆರಂಭ https://sullia.suddinews.com/archives/615595 https://sullia.suddinews.com/archives/615595#respond Tue, 27 Sep 2022 05:28:46 +0000 http://sullia.suddinews.com/?p=615595

ಕಾಯರ್ತೋಡಿ ಶ್ರೀ ವರದಾಯಿನಿ ವ್ಯಾಘ್ರ ಚಾಮುಂಡಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಸೆ.26 ರಂದು ಆರಂಭಗೊಂಡಿತು.


ಬೆಳಿಗ್ಗೆ ಗಣಪತಿ ಹವನ ನಡೆದು ಮಧ್ಯಾಹ್ನ ಮಹಾಪೂಜೆ ಬಳಿಕ ಪ್ರಸಾದ ವಿತರಣೆ ನಡೆಯಿತು. ರಾತ್ರಿ ದುರ್ಗಾ ನಮಸ್ಕಾರ ಪೂಜೆ ಹಾಗೂ ಭಜನಾ ಕಾರ್ಯಕ್ರಮ ನಡೆಯಿತು.

]]>
https://sullia.suddinews.com/archives/615595/feed 0
ಸೆ.05 : ಮುಕ್ಕೂರಿನಲ್ಲಿ ಶ್ರೀ ಶಾರದೋತ್ಸವ https://sullia.suddinews.com/archives/615575 https://sullia.suddinews.com/archives/615575#respond Tue, 27 Sep 2022 04:38:29 +0000 http://sullia.suddinews.com/?p=615575 ಮುಕ್ಕೂರು – ಪೆರುವಾಜೆ ಶಾಲಾ ವಠಾರದಲ್ಲಿ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ವತಿಯಿಂದ ಏಳನೇ ವರ್ಷದ ಶ್ರೀ ಶಾರದೋತ್ಸವವು ಸೆ.05 ರಂದು ನಡೆಯಲಿದೆ. ಬೆಳಿಗ್ಗೆ ಗಂಟೆ 8.00 ಕ್ಕೆ ಪ್ರತಿಷ್ಠೆ, ಗಂಟೆ 9.30 ರಿಂದ ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ ಗಂಟೆ 10.00 ರಿಂದ ವಿದ್ಯಾರಂಭ ( ಅಕ್ಷರಾಭ್ಯಾಸ) ಮಹಾಪೂಜೆ,ವಾಹನ ಪೂಜೆ ಇತ್ಯಾದಿ ಸೇವೆಗಳು ನಡೆಯಲಿದೆ. ಶ್ರೀ ಜಲದುರ್ಗಾದೇವಿ ಮಹಿಳಾ ಭಜನಾ ಮಂಡಳಿ ಪೆರುವಾಜೆ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಗಂಟೆ 12.00 ಕ್ಕೆ ಮಹಾಪೂಜೆ,ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಲಿದೆ. ಗಂಟೆ 2.30 ಕ್ಕೆ ಶ್ರೀ ಶಾರದಾ ದೇವಿಯ ವೈಭವದ ಶೋಭಾಯಾತ್ರೆ ನಡೆದು ಶ್ರೀ ಜಲದುರ್ಗಾ ಮಕ್ಕಳ ಕುಣಿತ ಭಜನಾ ತಂಡ ಪೆರುವಾಜೆ ಇವರ ಕುಣಿತ ಭಜನೆಯೊಂದಿಗೆ ಮುಕ್ಕೂರು ವಠಾರದಿಂದ ಹೊರಟು ಕುಂಡಡ್ಕ ಗೌರಿಹೊಳೆಯಲ್ಲಿ ಜಲಸ್ತಂಭನಗೊಳಿಸಲಾಗುವುದು.

Om Namo Shri Sharade - Tech Intel [English] (podcast) | Listen Notes

ಧಾರ್ಮಿಕ ಸಭಾ ಕಾರ್ಯಕ್ರಮ

ಅಪರಾಹ್ನ ಗಂಟೆ 2.00 ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಶಾರದೋತ್ಸವ ಸಮಿತಿ ಅಧ್ಯಕ್ಷ ಕಿರಣ್ ಚಾಮುಂಡಿಮೂಲೆ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಸವಣೂರು ಹಿಂದೂ ಜಾಗರಣಾ ವೇದಿಕೆ ಗೌರವಾಧ್ಯಕ್ಷ ಗಿರಿಶಂಕರ ಸುಲಾಯ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಾಪ್ಟ್ ವೇರ್ ಇಂಜಿನಿಯರ್ ಹಾಗೂ ಪ್ರಗತಿಪರ ಕೃಷಿಕ ನರಸಿಂಹ ತೇಜಸ್ವಿ ಕಾನಾವು ,ಮುಕ್ಕೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ದಯಾಕರ ಆಳ್ಬ ಬೋಳಕುಮೇರು, ಪ್ರಗತಿಪರ ಕೃಷಿಕ ಸಂತೋಷ್ ರೈ ಕಾಪು, ಸೌದಿ ಅರೇಬಿಯಾದಲ್ಲಿ ಉದ್ಯೋಗಿಯಾಗಿರುವ ಬಾಲಕೃಷ್ಣ ಗೌಡ ಕಂಡಿಪ್ಪಾಡಿ ಭಾಗವಹಿಸಲಿದ್ದಾರೆ.
ಶಾರದೋತ್ಸವ ಕಾರ್ಯಕ್ರಮದಲ್ಲಿ ಊರ ಹಾಗೂ ಪರವೂರ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಶಾರದಾಂಬೆಯ ಸೇವೆಯಲ್ಲಿ ಭಾಗಿಗಳಾಗಬೇಕಾಗಿ ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷ‌ ಕಿರಣ್ ಚಾಮುಂಡಿಮೂಲೆಯವರು ತಿಳಿಸಿದ್ದಾರೆ.

]]>
https://sullia.suddinews.com/archives/615575/feed 0
ಪೆರುವಾಜೆ ದೇವಸ್ಥಾನದಲ್ಲಿ ಸಂಭ್ರಮದ ನವರಾತ್ರಿ ಉತ್ಸವ https://sullia.suddinews.com/archives/615545 https://sullia.suddinews.com/archives/615545#respond Tue, 27 Sep 2022 04:11:10 +0000 http://sullia.suddinews.com/?p=615545 ಮನರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವು ಭಕ್ತಿ,ಸಂಭ್ರಮದಿಂದ ನಡೆಯುತ್ತಿದ್ದು ಸೆ.26 ರಂದು ರಾತ್ರಿ ಶ್ರೀ ದೇವರಿಗೆ ಭಕ್ತಾದಿಗಳ ಸಾಮೂಹಿಕ ರಂಗಪೂಜೆ ನಂತರ ಮಹಾಪೂಜೆ ನಡೆಯಿತು. ಬಳಿಕ ಅನ್ನಸಂತರ್ಪಣೆ ನಡೆಯಿತು.


ಶ್ರೀರಾಮ ಭಜನಾ ಮಂಡಳಿ ಕಲ್ಮಡ್ಕ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ರಾತ್ರಿ ಅಂಬಿಕ ಯಕ್ಷ ಕಲಾ ವೃಂದ ಪುತ್ತೂರು, ಅಂಬಿಕ ವಿದ್ಯಾಲಯ ಪುತ್ತೂರು ಇಲ್ಲಿನ ವಿದ್ಯಾರ್ಥಿಗಳಿಂದ ಏಕಾದಶಿ ಶ್ರೀ ದೇವಿಮಹಾತ್ಮೆ ಯಕ್ಷಗಾನ ನಡೆಯಿತು.

]]>
https://sullia.suddinews.com/archives/615545/feed 0
ಬೆಳ್ಳಾರೆ: ಗೌರಿಪುರಂ ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ನವರಾತ್ರಿ ಉತ್ಸವ https://sullia.suddinews.com/archives/615540 https://sullia.suddinews.com/archives/615540#respond Tue, 27 Sep 2022 04:06:50 +0000 http://sullia.suddinews.com/?p=615540

ಬೆಳ್ಳಾರೆಯ ಗೌರಿಹೊಳೆಯ ಸಮೀಪವಿರುವ ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ನವರಾತ್ರಿ ಉತ್ಸವಗಳು ಸೆ. 25ರಂದು ಆರಂಭಗೊಂಡಿದ್ದು, ಅ. 4ರ ತನಕ ನಡೆಯಲಿದೆ. ಪ್ರತೀ ದಿನ ರಾತ್ರಿ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ನವರಾತ್ರಿಯ ಪ್ರತೀ ದಿನ ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.

]]>
https://sullia.suddinews.com/archives/615540/feed 0
ಕೋಟೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ https://sullia.suddinews.com/archives/615541 https://sullia.suddinews.com/archives/615541#respond Tue, 27 Sep 2022 04:05:52 +0000 http://sullia.suddinews.com/?p=615541

ಕಳಂಜ ಗ್ರಾಮದ ಕೋಟೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವಗಳು ಸೆ. 26ರಂದು ಆರಂಭಗೊಂಡಿದೆ. ಪ್ರತೀ ದಿನ ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನೆರವೇರಲಿದೆ.

]]>
https://sullia.suddinews.com/archives/615541/feed 0
ಬಳ್ಪ ಶ್ರೀ ತ್ರಿಶೂಲಿನೀ ಮತ್ತು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಹಾನವರಾತ್ರಿ ಉತ್ಸವ ಆರಂಭ https://sullia.suddinews.com/archives/615534 https://sullia.suddinews.com/archives/615534#respond Tue, 27 Sep 2022 04:04:18 +0000 http://sullia.suddinews.com/?p=615534 ಬಳ್ಪ ಶ್ರೀ ತ್ರಿಶೂಲಿನೀ ಮತ್ತು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಹಾನವರಾತ್ರಿ ಉತ್ಸವಗಳು ಸೆ. 26ರಿಂದು ಆರಂಭಗೊಂಡಿದ್ದು, ಅ. 5ರ ತನಕ ಜರಗಲಿದೆ.
ಪ್ರತೀ ದಿನ ಮಧ್ಯಾಹ್ನ ಮತ್ತು ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.

ಸೆ. 26ರಂದು ಬೆಳಿಗ್ಗೆ ಪಂಚಾಮೃತ ಅಭಿಷೇಕ, ಅಲಂಕಾರ ಪೂಜೆ, ಹೂವಿನ ಪೂಜೆ, ಹರಿವಾಣ ಪೂಜೆ, ರಾತ್ರಿ ಹೂವಿನ ಪೂಜೆ, ಹರಿವಾಣ ಪೂಜೆ, ರಂಗಪೂಜೆ ನಡೆಯಿತು. ಸೆ. 29ರಂದು ಕದಿರು ತುಂಬಿಸುವುದು, ನವಾನ್ನ ನಡೆಯಲಿದೆ. ಸೆ. 30ರಂದು ಚಂಡಿಕಾ ಹೋಮ, ಅ. 2ರಂದು ಸಂಜೆ ಶಾರದಾ ಪೂಜೆ ಆರಂಭಗೊಳ್ಳಲಿದೆ. ಅ. 4ರಂದು ಮಹಾನವಮಿ, ಬೆಳಿಗ್ಗೆ 11.00ರಿಂದ ಆಯುಧ ಪೂಜೆ ನಡೆಯಲಿದೆ.

ಅ. 5 ವಿಜಯದಶಮಿಯಂದು ಬೆಳಿಗ್ಗೆ ಶ್ರೀ ಮಹಾಗಣಪತಿ ದೇವರಿಗೆ ಅಪ್ಪಸೇವೆ, ಶ್ರೀ ನಾಗದೇವರು, ದೈವಗಳಿಗೆ ತಂಬಿಲ ಸೇವೆ, ಪಂಚಾಮೃತ ಅಭಿಷೇಕ, ಹೂವಿನ ಪೂಜೆ, ಸಪ್ತಶತೀ ಪಾರಾಯಣ, ಮಧ್ಯಾಹ್ನ 11.00ರಿಂದ ಅಕ್ಷರಾಭ್ಯಾಸ, ಮಹಾಪೂಜೆ, ರಾತ್ರಿ ಸಾಮೂಹಿಕ ರಂಗಪೂಜೆ, ರಕ್ತೇಶ್ವರಿ, ಗುಳಿಗ ದೈವಗಳಿಗೆ ತಂಬಿಲ ನಡೆಯಲಿದೆ.

]]>
https://sullia.suddinews.com/archives/615534/feed 0
ಕುಂಜತ್ತಾಡಿ ಶ್ರೀ ವನದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಆರಂಭ https://sullia.suddinews.com/archives/615531 https://sullia.suddinews.com/archives/615531#respond Tue, 27 Sep 2022 04:02:13 +0000 http://sullia.suddinews.com/?p=615531 ಬಳ್ಪ ಗ್ರಾಮದ ಕುಂಜತ್ತಾಡಿ ಶ್ರೀ ವನದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವಗಳು ಸೆ. 26ರಿಂದ ಅ. 4ರ ತನಕ ಜರಗಲಿದೆ. ಪ್ರತೀ ದಿನ ಮಧ್ಯಾಹ್ನ ಮತ್ತು ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.


ಸೆ. 26ರಂದು ಗಣಪತಿ ಹವನ, ಸಂಜೆ ದುರ್ಗಾ ಪೂಜೆ ನಡೆಯಿತು. ಇಂದು ಸಂಜೆ ದುರ್ಗಾ ಪೂಜೆ, ಸೆ. 28ರಂದು ದುರ್ಗಾ ನಮಸ್ಕಾರ ಪೂಜೆ ನಡೆಯಲಿದೆ. ಸೆ. 29ರಂದು ಬೆಳಿಗ್ಗೆ ವನದುರ್ಗಾ ಹೋಮ, ಸಂಜೆ ಆಶ್ಲೇಷ ಬಲಿ, ದುರ್ಗಾಪೂಜೆ ನಡೆಯಲಿದೆ. ಅ. 4ರಂದು ಬೆಳಿಗ್ಗೆ ಖದಿರು ಕಟ್ಟುವುದು, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಮಹಾನವಮಿ ಮಹೋತ್ಸವ, ಹೊಸ್ತಾರೋಗಣೆ, ಅಕ್ಷರಾಭ್ಯಾಸ ನಡೆಯಲಿದೆ. ಸಂಜೆ 7.00 ಗಂಟೆಯಿಂದ ಸಾಮೂಹಿಕ ದುರ್ಗಾ ನಮಸ್ಕಾರ ಪೂಜೆ, ಮಹಾಪೂಜೆ, ದೇವತಾ ಪ್ರಾರ್ಥನೆ, ಮಂತ್ರಾಕ್ಷತೆ ನಡೆಯಲಿದೆ. ರಾತ್ರಿ ಆಯುಧ ಪೂಜೆ ನಡೆಯಲಿದೆ.

]]>
https://sullia.suddinews.com/archives/615531/feed 0