ಹನುಮಂತನ ಹೆಸರಿನ ಬಜರಂಗದಳ ಸಂಘಟನೆಯನ್ನು ಬಲಪಡಿಸುವುದೇ ಶೌರ್ಯ ರಥ ಯಾತ್ರೆಯ ಉದ್ದೇಶ -ರಘು ಜಿ.ಸಕಲೇಶಪುರ
ಭಾರತದ ಇತಿಹಾಸವೆ ಶೌರ್ಯದ ಇತಿಹಾಸ, ಗೆಲುವಿನ ಇತಿಹಾಸ, ಶೌರ್ಯದ ಇತಿಹಾಸ ಹೊಂದಿದೆ. ಸಂಘಟನೆಯ ವತಿಯಿಂದ ಹಿರಿಯರ ಕಲ್ಪನೆಯಂತೆ ಶೌರ್ಯ ರಥಯಾತ್ರೆಯ ಮೂಲಕ ಧರ್ಮದ ಜಾಗೃತಿಗಾಗಿ ಇಡೀ ದೇಶಾದ್ಯಂತ ಸಂಚರಿಸುತ್ತಿದೆ. ಹಿಂದೂ ಬಾಂಧವರಲ್ಲಿ ಹಿರಿಯರು ತುಂಬಿದ ಆತ್ಮ ವಿಶ್ವಾಸವನ್ನು ಹೆಚ್ಚಿಸುವ ಉದ್ದೇಶದಿಂದ ರಥ ಯಾತ್ರೆ ಸಾಗುತ್ತಿದೆ ಎಂದು ಬಜರಂಗದಳ ದ.ಕ ಪ್ರಾಂತ ಕಾರ್ಯಕಾರಿಣಿ ಸದಸ್ಯರಘುಜಿ.ಸಕಲೇಶಪುರ ದಿಕ್ಸೂಚಿ ಭಾಷಣ ಮಾಡಿದರು.
ಸುಳ್ಯದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳದ ಶೌರ್ಯ ಜಾಗರಣ ರಥ ಯಾತ್ರೆ ಆಗಮನದ ಸಂದರ್ಭದಲ್ಲಿ ಚೆನ್ನಕೇಶವ ದೇವಸ್ಥಾನದ ಮುಂಭಾಗದ ವೇದಿಕೆಯಲ್ಲಿ ಅ. 6 ರಂದು ನಡೆದ ಹಿಂದೂ ಶೌರ್ಯ ಸಂಗಮದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಜರಂಗದಳ ಸಂಘಟನೆಯು 1984 ರಲ್ಲಿ ಶ್ರೀ ರಾಮ ಜಾನಕಿ ರಥ ಯಾತ್ರೆಯ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಅನ್ಯ ಧರ್ಮದವರು ಸವಾಲು ಹಾಕಿದಾಗ ರಥದ ರಕ್ಷಣೆಯನ್ನು ಮಾಡುವ ಸಲುವಾಗಿ ಹುಟ್ಟಿಕೊಂಡಿದೆ.
ಸನಾತನ ಹಿಂದೂ ಧರ್ಮದ ಬಗ್ಗೆ ಅರಿವನ್ನು ಮೂಡಿಸುವ ಉದ್ದೇಶಕ್ಕಾಗಿ ಬಜರಂಗದಳದ ಯಾತ್ರೆ ನಡೆಸಲಾಗುತ್ತಿದೆ.
ಹಿಂದೂಗಳ ರಕ್ಷಣೆಗಾಗಿ ಹುಟ್ಟಿಕೊಂಡಿರುವ ವಿಶ್ವ ಹಿಂದೂ ಪರಿಷತ್ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಪಣತೊಟ್ಟಿರುವ ದೊಡ್ಡ ಸಂಘಟನೆಯಾಗಿದ್ದು ಮಂದಿರ ನಿರ್ಮಾಣವನ್ನು 2023ರಲ್ಲಿಸಾಕಾರಗೊಳಿಸುತ್ತಿದೆ. ತಪಸ್ವಿಗಳು ಶಕ್ತಿ ತುಂಬಿದ ಹಿಂದೂ ಸಂಘಟನೆಯ ವಿರುದ್ಧ ಧ್ವನಿ ಎತ್ತಿದರೆ ಉಳಿಗಾಲವಿಲ್ಲ.
ಹಿರಿಯರ ಶೌರ್ಯವನ್ನು ನೆನೆಪಿಸುವ ಸಲುವಾಗಿ ರಥ ಯಾತ್ರೆ ಸಾಗುತ್ತಿದೆ.
ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಮತ್ತು ಶಿವಮೊಗ್ಗದ ಹರ್ಷ ರವರನ್ನು ಚಕ್ರವ್ಯೂಹ ಹೆಣೆದು ಕೊಲೆ ಮಾಡಿದ್ದಾರೆ. ಅವರಿಬ್ಬರೂ ಮಹಾಭಾರತದ ಅಭಿಮನ್ಯುವಾಗಿದ್ದರು. ಹನುಮಂತನ ಶೌರ್ಯ ಏನೆಂಬುದು ಜಗತ್ತಿಗೆ ತಿಳಿದಿದೆ. ನಮ ಧರ್ಮದ ಮೇಲೆ ಅನ್ಯ ಮತೀಯರು ದಬ್ಬಾಳಿಕೆಗೆ ಮುಂದಾದರೆ ಹನುಮಂತನ ಹೆಸರು ಇಟ್ಟಿರುವ ಬಜರಂಗದಳ ಕಾರ್ಯಕರ್ತರು ಹಿಂದೇಟುಹಾಕುವವರಲ್ಲ. ಸಂಘಟನಾತ್ಮಕ ಹೋರಾಟದ ಮೂಲಕ ಅಖಂಡ ಭಾರತದ ಸಂಕಲ್ಪ ಮಾಡುವಂತಾಗಬೇಕು. ರಾಮ ಮಂದಿರ ನಿರ್ಮಾಣವಾದ ನಂತರ ರಾಮ ರಾಜ್ಯ ನಿರ್ಮಾಣವಾಗುವ ತನಕ ಕಾರ್ಯಕರ್ತರು ವಿರಮಿಸುವಂತಿಲ್ಲ ಎಂದು ಕರೆ ನೀಡಿದರು.
ರಥಯಾತ್ರೆ ಸಮಿತಿ ಅಧ್ಯಕ್ಷ
ವೆಂಕಟ್ ವಳಲಂಬೆ ಅಧ್ಯಕ್ಷತೆ ವಹಿಸಿ ಮಾತನಾಡಿ “ಧರ್ಮದ ಜಾಗೃತಿಗಾಗಿ ಹಿರಿಯರು ಹುಟ್ಟು ಹಾಕಿದ ಸಂಘಟನೆಯನ್ನು ಬಲಪಡಿಸುವ ಸಲುವಾಗಿ ರಥ ಯಾತ್ರೆ ದೇಶಾದ್ಯಂತ ಸಂಚರಿಸಿ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕಾರ್ಯ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಸಮಿತಿಗೌರವಾಧ್ಯಕ್ಷೆ ಶಾಸಕಿ ಕು.ಭಾಗೀರಥಿ ಮುರುಳ್ಯ, ಮಾಜಿ ಸಚಿವ ಎಸ್.ಅಂಗಾರ, ಬಜರಂಗದಳ ದ.ಕ ಪ್ರಾಂತ ಸಹಸಂಯೋಜಕ ಮುರಳಿಕೃಷ್ಣ ಹಸಂತಡ್ಕ, ವಿ.ಹೆಚ್.ಪಿ.ತಾಲೂಕು ಅಧ್ಯಕ್ಷ ಸೋಮಶೇಖರ ಪೈಕ, ಮಂಗಳೂರು ವಿಭಾಗ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ,ವಿ.ಹೆಚ್.ಪಿ ಕಡಬ ತಾಲೂಕು ಅಧ್ಯಕ್ಷ ರಾಧಾಕೃಷ್ಣ ಕೊಲ್ಪೆ, ಕಾರ್ಯದರ್ಶಿ ರಜತ್ ಅಡ್ಕಾರ್, ಕಾರ್ಯದರ್ಶಿ ಜಯಂತ ಕಲ್ಲಗದ್ದೆ, ಕಾರ್ಯದರ್ಶಿ ನವೀನ್ ಎಲಿಮಲೆ, ಹರಿಪ್ರಸಾದ್ ಎಲಿಮಲೆ,
ಭಾನುಪ್ರಕಾಶ್ ಪೆಲತ್ತಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿಶ್ವ ಹಿಂದೂ ಪರಿಷತ್ ಇದರ ಸ್ಥಾಪನೆಯಾಗಿ 60 ಪೂರೈಸಿದ ಹಿನ್ನೆಲೆಯಲ್ಲಿ ದೇಶಾದ್ಯಂತ ಶೌರ್ಯ ಜಾಗರಣ ರಥಯಾತ್ರೆಯು ಸಂಚರಿಸುತ್ತಿದ್ದು ಹಿಂದೂ ಬಾಂಧವರ ಸಂಘಟನೆಗಾಗಿ ಚಿತ್ರದುರ್ಗದಿಂದ ಹೊರಟ ಶೌರ್ಯ ಜಾಗರಣ ರಥಯಾತ್ರೆ ಸುಳ್ಯಕ್ಕೆ ಆಗಮಿಸಿದೆ ಎಂದು ಪ್ರಾಸ್ತಾವಿಕವಾಗಿ
ಡಾ.ಕೃಷ್ಣ ಪ್ರಸನ್ನ ರವರು ತಿಳಿಸಿದರು.
ಕು. ಯಶಸ್ವಿ ಪ್ರಾರ್ಥಿಸಿ ದರು. ಹರಿಪ್ರಸಾದ್ ಎಲಿಮಲೆ ಸ್ವಾಗತಿಸಿದರು. ಸಂದೀಪ್ ವಳಲಂಬೆ ವಂದಿಸಿದರು. ಶ್ರೀಮತಿ ಶ್ರೀದೇವಿ ನಾಗರಾಜ್ ಭಟ್ ಕಾರ್ಯಕ್ರಮ ನಿರೂಪಿಸಿದರು.
ರಥಬೀದಿಯಲ್ಲಿರುವ
ಚೆನ್ನಕೇಶವ ದೇವರ ಕಟ್ಟೆಯ ಬಳಿ
ವಿಶ್ವ ಹಿಂದೂ ಪರಿಷತ್ ಬಜರಂಗದಳ ಸುಳ್ಯ ಪ್ರಖಂಡ ಹಾಗೂ ಕಡಬ ಪ್ರಖಂಡದ ವತಿಯಿಂದ ರಥಕ್ಕೆ ಭವ್ಯ ಸ್ವಾಗತ ನೀಡಲಾಯಿತು.
ಅಲ್ಲಿಂದ ಕಾಲ್ನಡಿಗೆಯ ಮೆರವಣಿಗೆಯೊಂದಿಗೆ ರಥ ಯಾತ್ರೆ ಸಾಗಿ ಬಂತು. ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಕೇಸರಿ ಧ್ವಜ ಹಿಡಿದು ಸಾಗಿ ಬಂದರು.
ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು, ದುರ್ಗಾವಾಹಿನಿಯ ಮಹಿಳಾ ಸದಸ್ಯರು ಭಾಗವಹಿಸಿದರು.