ಗುತ್ತಿಗಾರು ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಗೆ ಮೊಟ್ಟೆ ಚಿಕ್ಕಿ ನೀಡುವ ಬಗ್ಗೆ ಶಿಕ್ಷಣ ಸಚಿವರಿಗೆ ಮನವಿ

0

ಆರ್‌ಟಿಐ ಕಾರ್ಯಕರ್ತ ಮತ್ತು ಯುವಜನ ಸಂಯುಕ್ತ ಮಂಡಳಿರಿ ಸುಳ್ಯ ಇದರ ನಿರ್ದೇಶಕರಾದ ದಿನೇಶ್ ಹಾಲೆಮಜಲುರವರಿಂದ ಮಾನ್ಯ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪರವರಿಗೆ ಗುತ್ತಿಗಾರು ಪೂರ್ವ ಪ್ರಾರ್ಥಮಿಕ ಶಾಲೆಯ ಮಕ್ಕಳಿಗೂ ಮೊಟ್ಟೆ ಚಿಕ್ಕಿ ಸಿಗುವ ಕುರಿತು ಮನವಿ ಮಾಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರಿನಲ್ಲಿರುವ ಪಿಎಂ ಶ್ರೀ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಸರಕಾರದ ಆದೇಶದಂತೆ ಪೂರ್ವ ಪ್ರಾಥಮಿಕ ಶಾಲೆ ನಡೆಯುತ್ತಿದೆ ಆದರೆ ಆ ಮಕ್ಕಳಿಗೆ ಮೊಟ್ಟೆ ಮತ್ತು ಚಿಕ್ಕಿಯ ಭಾಗ್ಯ ಇಲ್ಲದಂತಾಗಿದೆ. ಒಂದರಿಂದ ಏಳನೇ ತರಗತಿವರೆಗೆ ಅಕ್ಷರ ದಾಸೋಹದಲ್ಲಿ ಮಕ್ಕಳು ಅನ್ನ ಸಾಂಬಾರಿನೊಂದಿಗೆ ಮೊಟ್ಟೆ ಮತ್ತು ಚಿಕ್ಕಿಯನ್ನು ಸವಿಯುತ್ತಿರುವಾಗ ಈ ಪುಟ್ಟ ಮಕ್ಕಳು ಅವರನ್ನು ನೋಡಿ ಒಂದು ತರಹ ಆಸೆ ಪಡುವಂತ ಪ್ರಮೇಯ ಕಂಡುಬರುತ್ತಿದೆ.


ಆದ್ದರಿಂದ ತಾವುಗಳು ಈ ವಿಚಾರದ ಬಗ್ಗೆ ಗಂಭೀರವಾಗಿ ಪರಿಗಣಿಸಿ, ಈ ಶಾಲೆಯಲ್ಲಿ ನಡೆಯುತ್ತಿರುವ ಪೂರ್ವ ಪ್ರಾರ್ಥಮಿಕ ಶಾಲೆ ಅಂದರೆ ಎಲ್‌ಕೆಜಿ, ಯುಕೆಜಿ. ಮಕ್ಕಳಿಗೂ ಅಕ್ಷರ ದಾಸೋಹ ಯೋಜನೆಯಡಿ ಮುಂದಿನ ತಿಂಗಳಿನಿಂದಲೇ ಮೊಟ್ಟೆ ಮತ್ತು ಚಿಕ್ಕಿಯನ್ನು ನೀಡುವಂತೆ ಸಂಬಂಧಪಟ್ಟವರಿಗೆ ಸೂಚಿಸಿ ಅನುಷ್ಠಾನಗೊಳಿಸಬೇಕಾಗಿ ಮನವಿಯಲ್ಲಿ ವಿನಂತಿಸಲಾಗಿದೆ.