ತಾ.ಮಟ್ಟದ ಪದವಿಪೂರ್ವ ಕಾಲೇಜುಗಳ ವಾಲಿಬಾಲ್ ಪಂದ್ಯಾಟ

0

ಗುತ್ತಿಗಾರು ಕಾಲೇಜಿನ ಬಾಲಕರ ಹಾಗೂ ಬಾಲಕಿಯರ ತಂಡ ದ್ವಿತೀಯ ಸ್ಥಾನ

ಶಾಲಾ ಶಿಕ್ಷಣ ಇಲಾಖೆ( ಪದವಿ ಪೂರ್ವ ) ದ.ಕ. ಜಿಲ್ಲೆ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ಇವರ ಜಂಟಿ ಆಶ್ರಯದಲ್ಲಿ ನಡೆದ ಸುಳ್ಯ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ವಾಲಿಬಾಲ್ ಪಂದ್ಯಾಟದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು ಇದರ ಬಾಲಕರ ಹಾಗೂ ಬಾಲಕಿಯರ ತಂಡವು ಭಾಗವಹಿಸಿ ಎರಡು ತಂಡಗಳು ದ್ವಿತೀಯ ಸ್ಥಾನವನ್ನು ಪಡೆದಿವೆ.

ಬಾಲಕರ ವಿಭಾಗದಲ್ಲಿ ಗಗನ್ ಉತ್ತಮ ಪಾಸರ್ ಹಾಗೂ ಬಾಲಕಿಯರ ವಿಭಾಗದಲ್ಲಿ ಯಶಸ್ವಿ ಎರ್ದಡ್ಕ ಸವ್ಯಸಾಚಿ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಈ ತಂಡಕ್ಕೆ ಕಾಲೇಜಿನ ಹಿರಿಯ ವಿದ್ಯಾರ್ಥಿ ಖಲಂದರ್ ಬಾಕಿಲ ಹಾಗೂ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಗೋಪಾಲ್ ಏನೆಕಲ್ಲು ಇವರು ತರಬೇತಿಯನ್ನು ನೀಡಿರುತ್ತಾರೆ ಹಾಗೂ ಪ್ರಾಂಶುಪಾಲರು ಮತ್ತು ಕಾಲೇಜು ಉಪನ್ಯಾಸಕ ವೃಂದ ಸಹಕರಿಸಿರುತ್ತಾರೆ.