ಅಂಞಡ್ಕ ಉಮಾವತಿ ಈಶ್ವರ್ ಗೌಡ ಹೇಮಳ ನಿಧನ

0

ಎಣ್ಮೂರು ಗ್ರಾಮದ ಅಂಞಡ್ಕ ಹೇಮಳ ದಿ.ಈಶ್ವರ್ ಗೌಡರ ಪತ್ನಿ ಉಮಾವತಿಯವರು ಅಲ್ಪಕಾಲದ ಅಸೌಖ್ಯದಿಂದ ಸೆ.೨೭ ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 67ವರ್ಷ ವಯಸ್ಸಾಗಿತ್ತು. ಪ್ರಗತಿಪರ ಕೃಷಿಕರಾಗಿದ್ದ ಇವರು ಕೊಡುಗೈದಾನಿಯಾಗಿ ಜನಾನುರಾಗಿ ಸಂಘ ಸಂಸ್ಥೆಗಳಲ್ಲಿ ತೊಡಗಿಸಿ ಕೊಂಡಿದ್ದರು. ಮೃತರ ಪುತ್ರ ಶಿಕ್ಷಣ ಇಲಾಖೆಯಲ್ಲಿರುವ ಪ್ರಕಾಶ್ಚಂದ್ರ ಹೇಮಳ , ಪುತ್ರಿಯರಾದ ಐವರ್ನಾಡಿನ ದೊಡ್ಡಮನೆ ಕುಸುಮಾಕ್ಷಿ ಮನೋಹರ , ವನಜಾಕ್ಷಿ ಚಿದಾನಂದ ಪಾರೆಮಜಲು ಅರಂತೋಡು , ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಬಂದು ಬಳಗವನ್ನು ಅಗಲಿದ್ದಾರೆ,