Home Uncategorized ನ.25 ರಂದು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಕುಲ್ಕುಂದ ಬಸವೇಶ್ವರ ದೇವಸ್ಥಾನದಲ್ಲಿ ಮಹಾರುದ್ರ ಯಾಗ

ನ.25 ರಂದು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಕುಲ್ಕುಂದ ಬಸವೇಶ್ವರ ದೇವಸ್ಥಾನದಲ್ಲಿ ಮಹಾರುದ್ರ ಯಾಗ

0

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಕುಲ್ಕುಂದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಕೊನೆಯ ಸೋಮವಾರ (ನ.25) ರಂದು ದೇವರಿಗೆ ವಿಶೇಷವಾಗಿ ಮಹಾರುದ್ರ ಯಾಗವು ನಡೆಯಲಿದೆ.

ಈ ವಿಶೇಷ ಯಾಗದಲ್ಲಿ ಪುರೋಹಿತರಿಂದ ಏಕಕಾಲದಲ್ಲಿ ಸಾಮೂಹಿಕವಾಗಿ 1333 ರುದ್ರ ಪಠಣವನ್ನು ಪಾರಾಯಣ ಮಾಡುವುದರೊಂದಿಗೆ ದೇವರಿಗೆ ಸಮರ್ಪಣೆ ಮಾಡಲಾಗುವುದು.
ಈ ಸಂದರ್ಭದಲ್ಲಿ ಭಗವತಿ ಸೇವೆ, ಸಹಸ್ರ ಮೋದಕ ಹವನ, ಶತ ರುದ್ರಾಭಿಷೇಕ ಮುಂತಾದ ವಿಶೇಷ ಸೇವೆಗಳನ್ನು ಸಮರ್ಪಿಸಲು ಭಕ್ತರಿಗೆ ಅವಕಾಶವಿರುವುದು. ಭಕ್ತರಿಂದ ಯಾಗಕ್ಕೆ ಬೇಕಾದ ಎಳ್ಳು, ಭತ್ತ, ತುಪ್ಪ ಮುಂತಾದ ವಸ್ತು ರೂಪದ ಕಾಣಿಕೆಯನ್ನು ಸ್ವೀಕರಿಸಲಾಗುವುದು‌ ಎಂದು ಆಡಳಿತ ಮಂಡಳಿಯ ಅಧ್ಯಕ್ಷರು ತಿಳಿಸಿರುತ್ತಾರೆ.

NO COMMENTS

error: Content is protected !!
Breaking