ಸುಳ್ಯ ತಾಲೂಕು 27ನೇ ಕನ್ನಡ ಸಾಹಿತ್ಯ ಸಮ್ಮೇಳನ

0

ಕನ್ನಡ ಭಾಷೆ – ಅನ್ನದ ಭಾಷೆ ವಿಷಯದ ಕುರಿತು ವಿದ್ಯಾರ್ಥಿಗಳಿಂದ ಚರ್ಚಾಗೋಷ್ಠಿ

ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಸುಳ್ಯ ತಾಲೂಕು ಘಟಕದ ವತಿಯಿಂದ ಅರಂತೋಡಿನ ನೆಹರೂ ಸ್ಮಾರಕ ಪದವಿಪೂರ್ವ ಕಾಲೇಜಿನಲ್ಲಿ ಜರುಗುತ್ತಿರುವ ಸುಳ್ಯ ತಾಲೂಕು 27ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಭಾಷೆ – ಅನ್ನದ ಭಾಷೆ ವಿಷಯ ಕುರಿತಂತೆ ವಿದ್ಯಾರ್ಥಿಗಳ ಚರ್ಚಾಗೋಷ್ಠಿಯು ನ.23ರಂದು ಅಪರಾಹ್ನ ನಡೆಯಿತು.

ವಿದ್ಯಾರ್ಥಿಗಳಾದ ಸುಳ್ಯ ಸ.ಪ.ಕಾಲೇಜಿನ, ಪೌರ್ಣಮಿ ಕೆ. ಮರ್ಕಂಜ ಸರ್ಕಾರಿ ಪ್ರೌಢಶಾಲೆಯ ಭೂಷಣ್ ಕೆ.ಪಿ., ಸುಳ್ಯ ರೋಟರಿ ಪ್ರೌಢಶಾಲೆಯ ಶ್ರೀ ದುರ್ಗಾ, ಯು, ಗುತ್ತಿಗಾರು ಬ್ಲೆಸ್ಡ್ ಕುರಿಯಾಕೋಸ್ ಪ್ರೌಢಶಾಲೆಯ ಜಾಕ್ಸನ್, ಅರಂತೋಡು ನೆಹರೂ ಸ್ಮಾರಕ ಪದವಿಪೂರ್ವ ಕಾಲೇಜಿನ ಸೋಹನ್ ಪಿ.ಜೆ., ಬೆಳ್ಳಾರೆ ಕೆ.ಪಿ.ಎಸ್. ನ ಅಂಜನಾ ವಿ. ಅವರು ಕನ್ನಡ ಭಾಷೆ – ಅನ್ನದ ಭಾಷೆ ವಿಷಯದ ಪರ -ವಿರೋಧದ ಕುರಿತು ಮಾತನಾಡಿ, ಚರ್ಚಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಸಮ್ಮೇಳನಾಧ್ಯಕ್ಷೆ ಶ್ರೀಮತಿ ಲೀಲಾ ದಾಮೋದರ ಅವರು ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ಸರ್ಕಾರಿ ಪದವಿಪೂರ್ವ ಕಾಲೇಜಿ‌ನ ಉಪಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ ಅವರು ಸಮನ್ವಯಕಾರರಾಗಿ ಉಪಸ್ಥಿತರಿದ್ದರು. ಸುಳ್ಯ ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆ ಅವರು ಚರ್ಚಾಗೋಷ್ಠಿಯನ್ನು ಪರಿಸಮಾಪ್ತಿಗೊಳಿಸಿ, ಮಾತನಾಡಿದರು. ದೇವಪ್ಪ ಹೈದಂಗೂರು ಅವರು ಸ್ವಾಗತಿಸಿ, ಯೋಗೀಶ್ ಹೊಸೊಳಿಕೆ ವಂದಿಸಿದರು.