ಹಕ್ಕು ಪತ್ರ ರದ್ದತಿಗೆ ಆದೇಶ – ವಿಷಯ ಗಂಭೀರವಾಗಿದೆ : ಮಲೆನಾಡು ಹಿತರಕ್ಷಣಾ ವೇದಿಕೆ

0

ನ.28 ರಂದು ಸುಬ್ರಹ್ಮಣ್ಯದಲ್ಲಿ ಸಭೆ ಸುಳ್ಯ, ಕಡಬ, ಬೆಳ್ತಂಗಡಿ ತಾಲೂಕಿನವರ ರೈತ ಜಾಗೃತಿ ಬೂತ್ ಮಟ್ಟದ ಹೋರಾಟಕ್ಕೆ ಪೂರ್ವಭಾವಿ ಸಭೆ

ಮಲೆನಾಡು ಹಿತ ರಕ್ಷಣಾ ವೇದಿಕೆ ಸುಬ್ರಹ್ಮಣ್ಯದಲ್ಲಿ ನ.23 ರಂದು ಪತ್ರಿಕಾಗೋಷ್ಠಿ ನಡೆಸಿದ್ದು ಹಲವು ಗ್ತಾಮಗಳ ಹಕ್ಕು ಪತ್ರ ರದ್ದತಿಗೆ ಆದೇಶ ವಾಗಿದೆ ವಿಷಯ ಗಂಭೀರವಾಗಿದೆ ಜನರು ಎಚ್ಚೆತ್ತುಕೊಳ್ಳಬೇಕು ಎಂದು ಕರೆ ನೀಡಿದೆ.

ಈ ಬಗ್ಗೆ ಮಾಹಿತಿ ನೀಡಿದ ಕಿಶೋರ್ ಶಿರಾಡಿ ಅವರು ಸುಳ್ಯ, ಕಡಬ, ಬೆಳ್ತಂಗಡಿ ತಾಲೂಕಿನವರು ಮೊದಲು ತೊಂದರೆಗೆ ಒಳಗಾಗಲಿದ್ದಾರೆ. ಹಕ್ಕು ಪತ್ರ ರದ್ದತಿಗೆ ಇಲಾಖೆಗಳಿಂದ ಆದೇಶವಾಗಿದ್ದು ಇದನ್ನು ತಿಳಿದು ಕೊಂಡವರು, ಮುಂದೆ ತೊಂದರೆಗೆ ಒಳಗಾಗುವವರು ಸುಬ್ರಹ್ಮಣ್ಯ ಐನೆಕಿದು ಪ್ರಾ.ಕೃ.ಪ.ಸ.ಸಂಘ ದಲ್ಲಿ ನ.28 ರಂದು ನಡೆಯಲಿರುವ ಸಭೆಯಲ್ಲಿ ಪಾಲ್ಗೊಳಬೇಕು ಎಂದರು.

ಗಡಿ ಗುರುತು, ಜಂಟಿ ಸರ್ವೆ ಮಾಡಬೇಕು ಎಂದು ಮನವಿ ಮಾಡಿದ್ದೇವೆ,. ಆದರೆ ಒಂದು ಕಡೆಯಿಂದ ಸಾವಿರ ಹಕ್ಕು ಪತ್ರ ರದ್ದು ಮಾಡಬೇಕು ಎಂದು ಆದೇಶ ವಾಗಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.
ಇದನ್ನು ತ್ರೀವವಾಗಿ ವಿರೋಧಿಸಲು ರೈತ ಜಾಗೃತಿ ಮಾಡಲು ಉದ್ದೇಶಸಲಾಗಿದೆ ಎಂದು ಮಲೆನಾಡು ಹಿತ ರಕ್ಷಣಾ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ದಾಮೋದರ ಗುಂಡ್ಯ, ಚಂದ್ರಶೇಖರ ಬಾಳುಗೋಡು, ಜಯಪ್ರಕಾಶ್ ಕೂಜುಗೋಡು, ಅಚ್ಚುತ ಗೌಡ ಉಪಸ್ಥಿತರಿದ್ದರು.