ಯೋಜನೆ ಸಮರ್ಪಕ ಅನುಷ್ಠಾನ ಹಾಗೂ ಜಾಗೃತಿಗಾಗಿ ನ.ಪಂ. ಸಹಿತ 25 ಗ್ರಾ.ಪಂ. ಗಳಿಗೂ ಉಸ್ತುವಾರಿಗಳ ನೇಮಕ
ಸುಳ್ಯ ನಗರ ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನ ಹಾಗೂ ಜಾಗೃತಿಗಾಗಿ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ಸದಸ್ಯರುಗಳನ್ನು ಉಸ್ತುವಾರಿಗಳನ್ನಾಗಿ ನೇಮಿಸಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು ಹಾಗೂ ತಾ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಆದೇಶ ಮಾಡಿದ್ದಾರೆ.
ನ.೨೯ರಂದು ಸುಳ್ಯ ತಾಲೂಕು ಪಂಚಾಯತ್ ನಲ್ಲಿ ನಡೆದ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯಲ್ಲಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆಯವರು ಸದಸ್ಯರಿಗೆ ಜವಾಬ್ದಾರಿ ಹಂಚಿಕೆ ಮಾಡಿ ಆದೇಶ ಮಾಡಿದರು. ಇ.ಒ. ರಾಜಣ್ಣರು ಉಸ್ತುವಾರಿಗಳು ಮಾಡಬಹುದಾದ ಕೆಲಸಗಳ ಕುರಿತು ವಿವರಣೆ ನೀಡಿದರು.
ಸುಳ್ಯ ನಗರ ಪಂಚಾಯತ್, ಮುರುಳ್ಯ, ಐವರ್ನಾಡು ಗ್ರಾ.ಪಂ. ಗಳ ಉಸ್ತುವಾರಿಯಾಗಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಸುಳ್ಯ ನಗರ ಪಂಚಾಯತ್, ಉಬರಡ್ಕ ಮಿತ್ತೂರು, ಅಮರಮುಡ್ನೂರು ಗ್ರಾಮಗಳಿಗೆ ಸದಸ್ಯರಾಗಿರುವ ಭವಾನಿಶಂಕರ ಕಲ್ಮಡ್ಕ, ಗುತ್ತಿಗಾರು ಗ್ರಾ.ಪಂ. ಗೆ ರವಿ ಗುಂಡಡ್ಕ, ದೇವಚಳ್ಳ, ನೆಲ್ಲೂರು ಕೆಮ್ರಾಜೆ ಗ್ರಾ.ಪಂ. ಗೆ ವಿಜೇಶ್ ಹಿರಿಯಡ್ಕ, ಸಂಪಾಜೆ ಗ್ರಾ.ಪಂ. ಗೆ ಶ್ರೀಮತಿ ಕಾಂತಿ ಮೋಹನ್, ಕಲ್ಮಡ್ಕ, ಪಂಜ ಗ್ರಾ.ಪಂ. ಗೆ ಶ್ರೀಮತಿ ಭವಾನಿ, ಕಳಂಜ, ಬಾಳಿಲ ಗ್ರಾ.ಪಂ. ಗೆ ಧನುಷ್ ಕುಕ್ಕೇಟಿ, ಮಡಪ್ಪಾಡಿ, ಮರ್ಕಂಜ ಗ್ರಾ.ಪಂ. ಗೆ ಸೋಮಶೇಖರ ಕೇವಳ, ಅರಂತೋಡು ಗ್ರಾ.ಪಂ. ಗೆ ರಾಜು ನೆಲ್ಲಿಕುಮೇರಿ (ಜ್ಞಾನ ಶೀಲನ್), ಅಜ್ಜಾವರ ಗ್ರಾ.ಪಂ. ಗೆ ಎ.ವಿ. ಅಬ್ಬಾಸ್, ಕೊಡಿಯಾಲ, ಪೆರುವಾಜೆ, ಬೆಳ್ಳಾರೆ ಗ್ರಾ.ಪಂ.ಗೆ ಈಶ್ವರ ಆಳ್ವ, ಕನಕಮಜಲು, ಜಾಲ್ಸೂರು ಗ್ರಾ.ಪಂ.ಗೆ ಲತೀಫ್ ಅಡ್ಕಾರು, ಹರಿಹರ ಪಲ್ಲತಡ್ಕ, ಕೊಲ್ಲಮೊಗ್ರು ಗ್ರಾ.ಪಂ. ಗೆ ಮಣಿಕಂಠ ಕೊಳಗೆ, ಆಲೆಟ್ಟಿ ಗ್ರಾ.ಪಂ. ಗೆ ಇಬ್ರಾಹಿಂ ಶಿಲ್ಪಾ, ಮಂಡೆಕೋಲು ಗ್ರಾ.ಪಂ. ಗೆ ಶೇಖರ್ ಮಣಿಯಾಣಿಯವರನ್ನು ಉಸ್ತುವಾರಿಗಳನ್ನಾಗಿ ನೇಮಿಸಲಾಯಿತು.
ಗ್ರಾ.ಪಂ. ವ್ಯಾಪ್ತಿಯ ಸಾಮಾನ್ಯ ಸಭೆ, ಗ್ರಾಮ ಸಭೆ ಹಾಗೂ ಗ್ಯಾರಂಟಿ ಯೋಜನಾ ಕುರಿತು ಕ್ಯಾಂಪ್‌ಗಳನ್ನು ನಡೆಸುವ ಸಂದರ್ಭದಲ್ಲಿ ಯೋಜನೆಯ ಮಾಹಿತಿ ನೀಡಿ, ಅರ್ಹರಿಗೆ ಯೋಜನೆ ತಲುಪುವಂತೆ ಮಾಡುವುದು, ಮತ್ತು ಸಮಸ್ಯೆಗಳಿದ್ದಲ್ಲಿ ಆ ಕುರಿತು ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸುವ ಕುರಿತು ಸೂಚನೆ ನೀಡಲಾಯಿತು. ಸುಳ್ಯ ತಾ..ಪಂ. ಕಾರ್ಯನಿರ್ವಹಣಾಧಿಕಾರಿಗಳು ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ ಎಂದು ಅಧ್ಯಕ್ಷರು ಹೇಳಿದರು.