ಸುಬ್ರಹ್ಮಣ್ಯ ಮತ್ತು ಬಾಳಿಲ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಯಲ್ಲಿ ವಾರ್ಷಿಕೋತ್ಸವ

0

ವಾರ್ಷಿಕೋತ್ಸವದಿಂದ ವಿದ್ಯಾರ್ಥಿಗಳ ಪ್ರತಿಭೆ ಹೊರಹೊಮ್ಮಲು ಸಾಧ್ಯ : ಪಾವನ ಜೋಗಿಬೆಟ್ಟು

ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆ ಸುಬ್ರಹ್ಮ ಣ್ಯ ಮತ್ತು ಬಾಳಿಲ ಹಾಗೂ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಬಾಳಿಲ ಇದರ ಜಂಟಿ ಆಶ್ರಯದಲ್ಲಿ, ವಸತಿ ನಿಲಯ ಬಾಳಿಲದಲ್ಲಿ, ಶಾಲಾ ವಾರ್ಷಿಕೋತ್ಸವವು ನ.29 ರಂದು ವಿಜೃಂಭಣೆಯಿಂದ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಬಾಳಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪಾವನಜೋಗಿ ಬೆಟ್ಟು ವಹಿಸಿ, ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳು ಹೊರಹೊಮ್ಮಲು ಇಂತಹ ಕಾರ್ಯಕ್ರಮಗಳು ಅನಿವಾರ್ಯವೆಂದು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮಂಗಳೂರು ಇದರ ಯೋಜನಾ ಸಮನ್ವಯಾಧಿಕಾರಿ ಬಸವರಾಜ ಹೆಚ್.ಸಿ. ಮಾತನಾಡಿ, ವಿದ್ಯಾರ್ಥಿ ಗಳ ಸರ್ವತೋಮುಖ ಬೆಳವಣಿಗೆಗೆ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಅನಿವಾರ್ಯ. ಇದಕ್ಕೆ ಪೋಷಕರ ಸಹಕಾರ ಅಗತ್ಯ ಹಾಗೂ ಇಲಾಖಾ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಂಡು, ದಾಖಲಾತಿ ಹೆಚ್ಚಿಸುವಂತೆ ಪೋಷಕರ ಮನವೊಲಿಸಬೇಕೆಂದು ತಿಳಿಸಿದರು. ವಸತಿ ಶಾಲೆ ಬಾಳಿಲದ ಮುಖ್ಯೋಪಾಧ್ಯಾಯರಾದ ಶ್ರೀಯುತ ಶಿವಕುಮಾರ್ ಸಿ ಎಚ್ ಸ್ವಾಗತಿಸಿದರು. ಮೇಲ್ವಿಚಾರಕರಾದ ಮಾಧವ.ಕೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಸತಿ ಶಾಲೆ ಸುಬ್ರಹ್ಮಣ್ಯದ ಮುಖ್ಯೋಪಾಧ್ಯಾಯರಾದ ಶ್ರೀಮತಿ ಮಲ್ಲಿಕಾ. ಕೆ ಕಾರ್ಯಕ್ರಮ ನಿರೂಪಿಸಿದರು.

ಶಿಕ್ಷಣ ಸಂಯೋಜಕರಾದ ಶ್ರೀಮತಿ ಸಂಧ್ಯಾ ಕುಮಾರಿ ಬಿ.ಎಸ್. ಎಣ್ಮುರ್ ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಜಯಂತ್, ಬಾಳಿಲ ಗ್ರಾಮ ಪಂಚಾಯತ್ ಸದಸ್ಯರುಗಳಾದ ಶ್ರೀಮತಿ ಸರಸ್ವತಿ ಕಾಮತ್, ರವೀಂದ್ರ ರೈ ಅಗಲ್ಪಾಡಿ, ಶ್ರೀಮತಿ ತ್ರಿವೇಣಿ ವಿಶ್ವೇಶ್ವರ, ವಿದ್ಯಾ ಬೋಧಿನಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಯಶೋಧರ, ವಿದ್ಯಾ ಬೋಧಿನಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಉದಯಕುಮಾರ್ ರೈ, ವಸತಿ ಶಾಲೆ ಸುಬ್ರಹ್ಮಣ್ಯ ಮತ್ತು ಬಾಳಿಲದ
ಪೋಷಕರ ಸಂಘದ ಅಧ್ಯಕ್ಷರುಗಳಾದ ಗಣೇಶ್ ಮತ್ತು ಶ್ರೀಮತಿ ರಂಜಿನಿ,
ಶಿಕ್ಷಕ ವರ್ಗ,ಸಿಬ್ಬಂದಿ ವರ್ಗ,ಪೋಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.